(HEALTH CAMPS:) ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ 76ನೇ ವರ್ಧಂತೀ ಮಹೋತ್ಸವದ ಅಂಗವಾಗಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ
ಗ್ರಾಮೀಣ ಹಾಗೂ ನಗರ ಪ್ರದೇಶದ ಸಾರ್ವಜನಿಕರಿಗೆ ಉಚಿತ ತಜ್ಞ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಶ್ರೀಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಶೃಂಗೇರಿ, ಶ್ರೀಭಾರತೀತೀರ್ಥ ಮೊಬೈಲ್ ಹಾಸ್ಪಿಟಲ್ ಹಾಗೂ ಅಭಿನವ ನೇತ್ರ ಚಿಕಿತ್ಸಾಲಯ ಈ ಆರೋಗ್ಯ ಶಿಬಿರವನ್ನು ಮಾರ್ಚ್ 21, 2026 (ಶನಿವಾರ) ಮತ್ತು ಮಾರ್ಚ್ 22, 2026 (ಭಾನುವಾರ) ಬೆಳಗ್ಗೆ 8:00 ರಿಂದ ಸಂಜೆ 5:00ರವರೆಗೆ ಶ್ರೀಸತ್ಯ ಸಾಯಿ ದಿವ್ಯ ಜ್ಯೋತಿ ವಿದ್ಯಾ ಕೇಂದ್ರ, ಜಯಪುರ ಇಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಲಭ್ಯವಿರುವ ತಜ್ಞ ವೈದ್ಯಕೀಯ ಸೇವೆಗಳು:
* ಹೃದ್ರೋಗ ತಜ್ಞರು
* ಮಧುಮೇಹ ತಜ್ಞರು
* ಜನರಲ್ ಮೆಡಿಸಿನ್ ವೈದ್ಯರು
* ಸ್ತ್ರೀರೋಗ ತಜ್ಞರು
* ಶಿಶುವೈದ್ಯರು
* ಕಣ್ಣಿನ ತಜ್ಞರು ಮತ್ತು ತಾಂತ್ರಿಕ ಸಿಬ್ಬಂದಿ
* ಮೂಳೆ ತಜ್ಞರು
* ದಂತ ವೈದ್ಯರು
* ಚರ್ಮರೋಗ ವಿಭಾಗ
* ನರರೋಗ ವಿಭಾಗ
ಇದನ್ನೂ ಓದಿ: LPG ಗ್ರಾಹಕರಿಗೆ ಮಹತ್ವದ ಸೂಚನೆ; ಆಧಾರ್ ಇ ಕೆವೈಸಿ ಮಾಡದಿದ್ರೆ ಸಿಗಲ್ಲ ಸಿಲಿಂಡರ್ !
ಉಚಿತ ಸೌಲಭ್ಯಗಳು:
* ಅಗತ್ಯವಿರುವವರಿಗೆ ಉಚಿತ ಔಷಧ ವಿತರಣೆ
* ಉಚಿತ ಕನ್ನಡಕ ವಿತರಣೆ
* ಶಿಬಿರಾರ್ಥಿಗಳಿಗೆ ಉಚಿತ ಉಪಹಾರ ಮತ್ತು ಊಟದ ವ್ಯವಸ್ಥೆ
ವೈದ್ಯಕೀಯ ಪೂರ್ವ ನೋಂದಣಿಗಾಗಿ ನಂದನ್ – 8618332475 : ಕಿರಣ್ – 6362967810 ಅವರನ್ನು ಸಂಪರ್ಕಿಸಿ.
ಇದನ್ನೂ ಓದಿ: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; ಏನದು…?
ಇತ್ತೀಚಿನ ಜನಪ್ರಿಯ ಸುದ್ದಿಗಳು (HEALTH CAMPS:)
-
- ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
- ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
- ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
- ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
- ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್
- ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
- ಯುವಕರಿಗೆ ʼಗ್ರಾಮ ಒನ್ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
- ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
- ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ






Leave a Reply