(pmsgy) ಕೇಂದ್ರ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಈಗಾಗಲೇ ಹಲವು ಜನ ನೋಂದಾಯಿಸಿಕೊಂಡಿದ್ದಾರೆ. ದೇಶದ ಹಲವು ಭಾಗಗಳಿಂದ ಅಂದರೆ ಅಸ್ಸಾಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲೂ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಮಾಡದೇ ಇರುವವರು ಶೀಘ್ರದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು. ಈ ವಿಶಿಷ್ಟ ಹೊಸ ಉಪಕ್ರಮವು ಸುಸ್ಥಿರ ಇಂಧನ ಉತ್ಪಾದನೆ ಹಾಗೂ ಕುಟುಂಬಗಳಿಗೆ ವಿದ್ಯುತ್ ವೆಚ್ಚದಲ್ಲಿ ಗಣನೀಯ ಕಡಿತವನ್ನು ಖಚಿತಪಡಿಸಿಕೊಳ್ಳಲು ಅನುಕೂಲವಾಗುತ್ತದೆ.
ಇದನ್ನೂ ಓದಿ: ಈ ಜಿಲ್ಲೆಯ ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
ಈ ಯೋಜನೆಯ ಮೂಲಕ 1 ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ, ಸರ್ಕಾರವು ವಿವಿಧ ವರ್ಗಗಳ ಫಲಾನುಭವಿಗೆ 78,000 ರೂ ವರೆಗೆ ಸಹಾಯಧನವನ್ನು ನೀಡುತ್ತದೆ. ಇದರೊಂದಿಗೆ ಫಲಾನುಭವಿಗೆ 300 ಯೂನಿಟ್ ಉಚಿತ ವಿದ್ಯುತ್ ದೊರೆಯಲಿದ್ದು. ವಾರ್ಷಿಕ ಶೇ. 18ರಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ.
ಈ ಯೋಜನೆಯಡಿ 1 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಗೆ 30,000 ರೂ., 2 ಕಿಲೋವ್ಯಾಟ್ ಗೆ 20,000 ರೂ. ನೀಡಲಾಗುವುದು. 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಪ್ಯಾನಲ್ ಗೆ ರೂ.60,000 ಮತ್ತು 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಪ್ಯಾನಲ್ ಗೆ ರೂ.78,000 ಸಬ್ಸಿಡಿ ಲಭ್ಯವಿದೆ.
ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?:
* ಮೊದಲಿಗೆ ನೀವು ಅಧಿಕೃತ ವೆಬ್ ಸೈಟ್ https://pmsuryaghar.gov.in ಗೆ ಭೇಟಿ ನೀಡಬೇಕು.
* ಇದರ ನಂತರ apply ಫಾರ್ ರೂಫ್ ಟಾಪ್ ಸೋಲಾರ್ ಆಯ್ಕೆ ಮಾಡಿ.
* ಇದರ ನಂತರ ನೀವು ನಿಮ್ಮ ರಾಜ್ಯ, ವಿದ್ಯುತ್ ವಿತರಣೆ ಕಂಪನಿ, ವಿದ್ಯುತ್ ಗ್ರಾಹಕ ಸಂಖ್ಯೆ. ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಆಯ್ಕೆ ಮಾಡಬೇಕು.
* ತದನಂತರ, ನೀವು ಮುಂದುವರಿದಾಗ, ಹೊಸ ಪುಟವು ತೆರೆಯುತ್ತದೆ. ಅಲ್ಲಿ ನಿಮ್ಮ ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಲಾಗಿನ್ ಆಗಬೇಕು.
* ಇಲ್ಲಿ ಒಂದು ಫಾರ್ಮ್ ಇರುತ್ತದೆ, ಅದರಲ್ಲಿ ನೀಡಲಾದ ಮಾರ್ಗಸೂಚಿಗಳ ಪ್ರಕಾರ ಮೇಲ್ಛಾವಣಿಯ ಸೌರ ಫಲಕ ಪಾವತಿಗೆ ಅರ್ಜಿ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ
ಇದಕ್ಕೆ ಅನುಮೋದನೆ ಸಿಗುವವರೆಗೂ ಕಾಯಬೇಕು. ಅನುಮೋದನೆ ದೊರೆತ ಬಳಿಕ ನೊಂದಾಯಿತ ಮಾರಾಟಗಾರರು ನಿಮ್ಮ ಮನೆಗೆ ಬಂದು ಸೌರ ಘಟಕವನ್ನು ಸ್ಥಾಪಿಸುತ್ತಾರೆ.
ಇದಾದ ಬಳಿಕ ನೆಟ್ ಮೀಟರ್ ಗೆ ಅರ್ಜಿ ಸಲ್ಲಿಸಬೇಕು. ನೆಟ್ ಮೀಟರ್ ಇನ್ಸ್ ಟಾಲ್ ಆಗಿ ಡಿಸ್ಕಾಂ ಅಧಿಕಾರಿಗಳಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಸಿಗುತ್ತದೆ.
ಬಳಿಕ ಪಿಎಂ ಸೂರ್ಯಘರ್ (ಉಚಿತ ವಿದ್ಯುತ್ ಯೋಜನೆಗೆ) ಪೋರ್ಟಲ್ ಗೆ ಹೋಗಿ ಮತ್ತೆ ಲಾಗಿನ್ ಆಗಿ, ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ. ಕ್ಯಾನ್ಸಲ್ ಮಾಡಿದ ಚೆಕ್ ನ ಸ್ಕ್ಯಾನ್ಡ್ ಕಾಪಿಯನ್ನು ಅಪ್ ಲೋಡ್ ಮಾಡಿ. ಇದು ಕೊನೆಯ ಪ್ರಕ್ರಿಯೆ. ಇದು ಮುಗಿದ ಬಳಿಕ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಂದು ಸೇರುತ್ತದೆ.








Leave a Reply