(coffee rate) ತಿಂಗಳ ಆರಂಭದಲ್ಲಿ ಕುಸಿದಿದ್ದ (400 ರಿಂದ 335 ಕ್ಕೆ) ರೊಬಸ್ಟಾ ಕಾಫಿ ಬೆಲೆಯೂ ಇದೀಗ ಕಳೆದ ವಾರದಿಂದ ಚೇತರಿಕೆಯ ಹಾದಿ ಹಿಡಿದಿದೆ. ಸಧ್ಯ ಮಾರುಕಟ್ಟೆಯಲ್ಲಿ ಕೆ.ಜಿ ಗೆ 360 ಬೆಲೆ ಇದೆ.
ಇದನ್ನೂ ಓದಿ: ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್..!; ಮಹತ್ವದ ಆದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ!
ಕಾಫಿ ಬೆಲೆಯಲ್ಲಿ ಏರುಗತಿ:
ಕಳೆದ ತಿಂಗಳು 50 ಕೆ.ಜಿಯ ಚೀಲಕ್ಕೆ 11 ಸಾವಿರದವರೆಗೆ ಏರಿದ್ದ ರೊಬಸ್ಟಾ ಚೆರ್ರಿ ಬಳಿಕ 8 ಸಾವಿರಕ್ಕೆ ಕುಸಿದಿತ್ತು. ನಂತರ ಕಾಫಿ ಮಾರಾಟ ಮಾಡದೆ ದಾಸ್ತಾನು ಇಟ್ಟುಕೊಂಡಿದ್ದ ಬೆಳೆಗಾರರು ಬೇಸರಗೊಂಡಿದ್ದರು. ಧಾರಣೆ ಏರಿಕೆಯಿಂದಾಗಿ ಚೀಲ ವೊಂದಕ್ಕೆ 9,500 ರವರೆಗೂ ಬೆಲೆ ಸಿಗುತ್ತಿದೆ.
ಲಂಡನ್ ಮಾರುಕಟ್ಟೆಯಲ್ಲಿ ಒಂದು ಟನ್ ರೊಬಸ್ಟಾ ಕಾಫಿ ಧಾರಣೆ ದಾಖಲೆಯ 4,175 ಡಾಲರ್ ಗೆ ಏರಿಕೆಯಾಗಿತ್ತು. ಆ ಬಳಿಕ 3,400 ಡಾಲರ್ ಗೆ ಇಳಿದಿತ್ತು. ಶುಕ್ರವಾರದ ಮಾರುಕಟ್ಟೆಯಲ್ಲಿ 3,880 ಡಾಲರ್ ಆಸುಪಾಸಿನಲ್ಲಿ ವ್ಯವಹಾರ ನಡೆದಿದೆ. ಕಾಫಿ ಬೆಲೆ ಏರುಗತಿಯಲ್ಲಿ ಇರುವುದರಿಂದ ಬೆಳೆಗಾರರಲ್ಲಿ ಮತ್ತೆ ಸಂತಸ ಮೂಡಿದೆ.
ವಿಯೆಟ್ನಾಂನಲ್ಲಿ ರೊಬಸ್ಟಾ ಕಾಫಿ ಕುಸಿತ:
ವಿಯೆಟ್ನಾಂನಲ್ಲಿ ರೊಬಸ್ಟಾ ಕಾಫಿ ಉತ್ಪಾದನೆ ಕುಸಿದಿದ್ದು, ಬ್ರೆಜಿಲ್ ನಲ್ಲೂ ಅರೇಬಿಕಾ ಕಾಫಿ ಉತ್ಪಾದನೆ ಮೇಲೆ ಪ್ರತಿಕೂಲ ಹವಾಮಾನ ಪರಿಣಾಮ ಬೀರಿದೆ. ಮೆಕ್ಸಿಕೊದಲ್ಲಿ ತಾಪಮಾನ 40-45 ಡಿಗ್ರಿ ತಲುಪಿದ್ದು, ಹೂಗಳು ಕರಟಿ ಹೋಗುತ್ತಿವೆ. ಇದರಿಂದ ಮುಂದಿನ ಹಂಗಾಮಿನಲ್ಲೂ ಕಾಫಿ ಉತ್ಪಾದನೆ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಂಭವ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಅರ್ಜಿಸಲ್ಲಿಸಬೇಕಾ..?; ಹೊಸ ರೇಷನ್ ಕಾರ್ಡ್ Apply ಮಾಡೋದು ಹೇಗೆ.. ಏನೆಲ್ಲಾ ಬೇಕು?
ಕಾಫಿ ರಫ್ತು ಶೇ.12ರಷ್ಟು ಏರಿಕೆ:
2023-24ನೇ ಆರ್ಥಿಕ ವರ್ಷದಲ್ಲಿ 10,636 ಕೋಟಿ ಮೌಲ್ಯದ ಕಾಫಿ ರಫ್ತು ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.22ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
2022-23ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ 9,473 ಕೋಟಿ ಮೌಲ್ಯದ ಕಾಫಿ ರಫ್ತು ಮಾಡಲಾಗಿತ್ತು. ರೊಬಸ್ಟಾ ಕಾಫಿಗೆ ಹೆಚ್ಚಿದ ಬೇಡಿಕೆಯಿಂದಾಗಿ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ.
2023-24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 1.25 ಲಕ್ಷ ಟನ್ ನಷ್ಟು ಕಾಫಿ ರಫ್ತು ಮಾಡಲಾಗಿದೆ. ಇದರ ಹಿಂದಿನ ಆರ್ಥಿಕ ವರ್ಷದಲ್ಲಿ 1.10 ಲಕ್ಷ ಟನ್ ನಷ್ಟು ರಫ್ತು ಮಾಡಲಾಗಿತ್ತು. ಈ ಅವಧಿಯಲ್ಲಿ ಒಟ್ಟಾರೆ ರಫ್ಟಿನಲ್ಲಿ ಶೇ 13.35 ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಬರ ಪರಿಹಾರ ಹಣ; NDRF ನಿಂದ ಬಂದ ಹಣ ಶೀಘ್ರ ರೈತರ ಖಾತೆಗೆ ಜಮೆ
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ತಪ್ಪದೆ ಈ ಸುದ್ದಿ ಓದಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ






