Scam Alert: ಮೊಬೈಲ್ ಬಳಕೆದಾರರೇ ಹುಷಾರ್!

(Scam Alert) ಇದೀಗ ಮೊಬೈಲ್ ಬಳಕೆ ಹಾಗೂ ಡಿಜಿಟಲೀಕರಣ ವಾಗಿರುವುದರಿಂದ ಎಲ್ಲವೂ ಆನ್ ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ. ಅಷ್ಟೆ ಅಲ್ಲದೆ ಆನ್ ಲೈನ್ ವಂಚಕರು ಕೂಡ ಜಾಸ್ತಿಯಾಗಿದೆ. ಆನ್ ಲೈನ್ ವಂಚನೆ ಬಗ್ಗೆ ಕರ್ನಾಟಕ ಪೊಲೀಸರು ಮಹತ್ವದ ಮಾಹಿತಿಯನ್ನು ನೀಡಿದ್ದು, ಸಾರ್ವಜನೀಕರು ಈ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ತಿಳಿಸಿದ್ದಾರೆ. ಹಾಗಾದರೆ ಯಾವ, ಮಾಹಿತಿ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್..!; ಮಹತ್ವದ ಆದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ!


ಆನ್ ಲೈನ್ ವಂಚಕರು ಜನರನ್ನು ವಂಚಿಸೋದಕ್ಕೆ ವಿವಿಧ ದಾರಿಗಳನ್ನು ಹಿಡಿಯುತ್ತಿದ್ದಾರೆ. ಈಗ ಹೊಸದೊಂದು ದಾರಿ ಕಂಡುಕೊಂಡಿರುವಂತ ವಂಚಕರು, ನಿಮ್ಮ ಮೊಬೈಲ್ ಗಳಿಗೆ ಮೆಸೇಜ್ ಕಳುಹಿಸಿಕೊಡುತ್ತಿದ್ದು, ಒಂದು ವೇಳೆ ನೀವು ಓಪನ್ ಮಾಡಿದ್ದೇ ಆದಲ್ಲಿ, ನಿಮ್ಮ ಬ್ಯಾಂಕ್ ಖಾತೆ ಸೈಬರ್ ವಂಚಕರ ಪಾಲಾಗೇ ಬಿಡುತ್ತೆ.


ಇದನ್ನೂ ಓದಿ: ಬರ ಪರಿಹಾರ ಹಣ; NDRF ನಿಂದ ಬಂದ ಹಣ ಶೀಘ್ರ ರೈತರ ಖಾತೆಗೆ ಜಮೆ


ವಂಚಕರು RAT (Remote access tool) ಗಳ ಸಹಾಯದಿಂದ APK file ಅಥವಾ App ಸಿದ್ಧಪಡಿಸಿ, WhatsApp ಅಥವಾ text message ಮುಖಾಂತರ ಬ್ಯಾಂಕ್‌ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿಕೊಡುತ್ತಿದ್ದು, ಅದನ್ನು ಓಪನ್ ಮಾಡಿದ್ದೇ ಆದಲ್ಲಿ ಸಾರ್ವಜನಿಕರಿಗೆ ಬರುವ ಎಲ್ಲಾ Text message ಗಳು ವಂಚಕರ ಮೊಬೈಲ್ ಗಳಿಗೆ Automatically, Message forwarding ಆಗುತ್ತಿವೆ ಎಂಬ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.


ಇದನ್ನೂ ಓದಿ: ಒಂದೇ ವಾರದಲ್ಲಿ ಹೂಡಿಕೆದಾರರಿಗೆ ಲಕ್ಷ ಲಕ್ಷ ಲಾಭ..!; ಷೇರು ಮಾರುಕಟ್ಟೆ ಹೀಗೆ ಓಡ್ತಿರೋದ್ಯಾಕೆ..?; ಇಲ್ಲಿದೆ ನಾಲ್ಕು ಬೆಸ್ಟ್ ಷೇರುಗಳು..!


ಇನ್ನೂ ಲಿಂಕ್ ಓಪನ್ ಮಾಡಿದ ಬಳಿಕ ವಂಚಕರು ಸುಲಭವಾಗಿ OTP ಪಡೆದುಕೊಂಡು ಸಾರ್ವಜನಿಕರ ಖಾತೆಗಳಿಗೆ Internet mobile banking application ಗಳನ್ನು ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಸಾರ್ವಜನಿಕರ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಶೇಷವಾಗಿ ಕೆನರಾ ಬ್ಯಾಂಕಿನ ಗ್ರಾಹಕರಿಗೆ ಈ ರೀತಿಯ ತೊಂದರೆ ಆಗುತ್ತಿರುವುದು ಕಂಡುಬರುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಅರ್ಜಿ‌ಸಲ್ಲಿಸಬೇಕಾ..?; ಹೊಸ ರೇಷನ್ ಕಾರ್ಡ್ Apply ಮಾಡೋದು ಹೇಗೆ.. ಏನೆಲ್ಲಾ ಬೇಕು?


ಆದ್ದರಿಂದ ಬ್ಯಾಂಕ್‌ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ WhatsApp ಅಥವಾ Text message ಮುಖಾಂತರ ಬರುವ APK file ಅಥವಾ App ಗಳ ಲಿಂಕ್ ಗಳನ್ನು ಕ್ಲಿಕ್ ಮಾಡದಿರಿ, ಒಂದು ವೇಳೆ ನಿರ್ಲಕ್ಷದಿಂದ ಅಂತಹ ಲಿಂಕ್ ಗಳನ್ನು ಕ್ಲಿಕ್ ಮಾಡಿದ್ದಲಿ ತಕ್ಷಣ ತಮ್ಮ ಮೊಬೈಲ್ ನ್ನು Switch off ಮಾಡಿಕೊಂಡು ನಿಮ್ಮ ಬ್ಯಾಂಕ್ ಗೆ ಸಂಪರ್ಕಿಸಿ. ಖಾತೆಯಿಂದ ಹಣ ವರ್ಗಾವಣೆಗೊಂಡಿದ್ದಲಿ Cybercrime Helpline 1930 ಗೆ ಕರೆ ಮಾಡಿ ದೂರು ದಾಖಲಿಸಲು ಕೋರಿದ್ದಾರೆ.

Scam Alert: ಮೊಬೈಲ್ ಬಳಕೆದಾರರೇ ಹುಷಾರ್!
Scam Alert: ಮೊಬೈಲ್ ಬಳಕೆದಾರರೇ ಹುಷಾರ್!

ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
    3. ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
    4. ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
    5. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
    6. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
    7. ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
    8. ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ತಪ್ಪದೆ ಈ ಸುದ್ದಿ ಓದಿ
    9. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    10. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ