(Share Market) ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಷೇರುಪೇಟೆ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಸೆನ್ಸೆಕ್ಸ್ ಮೊದಲ ಬಾರಿಗೆ 75 ಸಾವಿರ ಗಡಿ ದಾಟಿದರೆ, ನಿಫ್ಟಿ ಕೂಡ ಹೊಸ ಎತ್ತರವನ್ನು ಮುಟ್ಟಿದೆ.
ನಿಫ್ಟಿಯಲ್ಲಿ ಮುಂದೇನಾಗಬಹು..?
ಸಧ್ಯದಲ್ಲಿ ಆಲ್ ಟೈಮ್ ಹೈ (23000) ನಲ್ಲಿರುವ ನಿಫ್ಟಿ ಗೆ 23100-150 ರ ಹಂತಗಳು ಪ್ರಮುಖ ರೆಸಿಸ್ಟನ್ಸ್ ಆಗಿರುತ್ತದೆ. ಈ ಹಂತವನ್ನು ದಾಟಿದ ಪಕ್ಷದಲ್ಲಿ ನಿಫ್ಟಿಯು ಕೆಲವೇ ತಿಂಗಳಲ್ಲಿ 24000 ಹಂತವನ್ನು ತಲುಪಬಹುದು.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
23100-150ರ ಹಂತದಿಂದ ಪ್ರೈಸ್ ರಿವರ್ಸ್ ಆದ ಪಕ್ಷದಲ್ಲಿ ನಿಫ್ಟಿಯು 22550, 22300 ವರೆಗೂ ಸಹ ರಿಟ್ರೇಸ್ ಆಗುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಹೂಡಿಕೆದಾರರಿಗೆ ಉತ್ತಮ ಬೈ ಆನ್ ಡಿಪ್ಸ್ ಅವಕಾಶ ದೊರೆಯಲಿದೆ.

ನಿಫ್ಟಿಯ ಸದ್ಯದ ಸ್ಟಾಪ್ ಲಾಸ್ 22577 ಆಗಿರುತ್ತದೆ, ಪ್ರೈಸ್ 22577ರ ಕೆಳಗಡೆ ಕ್ಲೋಸ್ ಆದಲ್ಲಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಕರಡಿಗಳ ದಾಳಿ ಮುಂದುವರೆಯುವ ಸಾಧ್ಯತೆ ಇರುತ್ತದೆ.
ಅಂತೆಯೇ ನಿಫ್ಟಿಯು ಮುಂದಿನ ವಾರಗಳಲ್ಲಿ 23000ರ ಮೇಲಿನ ಹಂತವನ್ನು ಕಾಯ್ದುಕೊಂಡರೆ ಈ ಕೆಳಗಿನ ಷೇರುಗಳು ಅಲ್ಪಾವಧಿಯ ಹೂಡಿಕೆಗೆ ಉತ್ತಮ ಗಳಿಕೆ ನೀಡುವ ಸಾಧ್ಯತೆಗಳಿದೆ. ಆದ್ದರಿಂದ ಮುಂದಿನ ವಾರದಲ್ಲಿ ಈ ಷೇರುಗಳ ಮೇಲೆ ನಿಗಾ ಇಡಿ.
1. ಟಾಟಾ ಮೋಟರ್ಸ್
2. ಐ ಆರ್ ಡಿ ಎ
3. ಒಲೆಕ್ಟ್ರಾ ಗ್ರೀನ್ ಟೆಕ್
4. ರೈಲ್ ಟೆಲ್
(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)
ಈ ವಾರ ಅತೀ ಹೆಚ್ಚು ಏರಿಕೆ ಕಂಡ ಷೇರುಗಳು ಯಾವುದು?
ಈ ವಾರ ಅತೀ ಹೆಚ್ಚು ಏರಿಕೆ ಕಂಡ ಷೇರುಗಳೆಂದರೆ ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ), ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಮಾರುತಿ, ಮಹೀಂದ್ರಾ ಮತ್ತು ಮಹೀಂದ್ರಾ, ಎಚ್ಡಿಎಫ್ಸಿ ಬ್ಯಾಂಕ್, ಬಜಾಜ್ ಫಿನ್ಸರ್ವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್, ಕೊಚ್ಚಿನ್ ಶಿಪ್ಯಾರ್ಡ್. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರುಗಳು ಕೂಡ ಏರುಗತಿಯಲ್ಲಿ ಸಾಗಿವೆ. ಇದಲ್ಲದೇ ರೈಲ್ವೇ ಷೇರುಗಳಲ್ಲಿ ಒಳ್ಳೆಯ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ: 1.16 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್ ಹಣ; ಕಾರಣವೇನು ಗೊತ್ತಾ? ಇಲ್ಲಿದ ನೋಡಿ
ರೈಲ್ವೇ ಷೇರುಗಳಲ್ಲಿ ಭರ್ಜರಿ ಲಾಟರಿ..!
ಐಆರ್ಎಫ್ಸಿ, ಆರ್ವಿಎನ್ಎಲ್ ಷೇರುಗಳು ಶೇ.8 ಕ್ಕಿಂತ ಹೆಚ್ಚು ಏರಿಕೆ ಕಂಡವು. ಆದರೆ ಸನ್ ಫಾರ್ಮಾ, ಪವರ್ ಗ್ರಿಡ್, ಎನ್ಟಿಪಿಸಿ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ಷೇರುಗಳು ನಷ್ಟ ಅನುಭವಿಸಿವೆ. ನಿಫ್ಟಿಯ ಬ್ಯಾಂಕ್ ಮತ್ತು ಆಟೋ ಸೂಚ್ಯಂಕದಲ್ಲಿ ಸುಮಾರು 2 ಪ್ರತಿಶತ ಏರಿಕೆಯಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
- ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
- ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್; ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ






