Wednesday, April 24, 2024
Homeಮಲೆನಾಡುಕೊಡಗುಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

ಪುತ್ತೂರು/ಕೊಡಗು; (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳ ವಿರುದ್ದ ರಾಷ್ಟ್ರೀಯ ತನಿಖಾ ದಳ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಮುಖ ಆರೋಪಿ ಎಂ.ಎಚ್ ತುಫೈಲ್ ಹಾಗೂ ಮೊಹಮ್ಮದ್ ಜಬೀರ್ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಿದ್ದಾರೆ.

ಇದನ್ನೂ ಓದಿ; ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಪ್ರಕರಣ ದಾಖಲು

ಇದನ್ನೂ ಓದಿ; ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿ – ಸಿ.ಟಿ.ರವಿ

ಕೊಡಗು ಮೂಲದವನಾದ ಎಂ.ಎಚ್.ತುಫೈಲ್, ಪಿಎಫ್ ಐ ಸರ್ವೀಸ್ ಟೀಂನ ಸಕ್ರಿಯ ಸದಸ್ಯನಾಗಿದ್ದು, ಮಾಸ್ಟರ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ. ದಕ್ಷಿಣ ಕನ್ನಡದಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ಪಿಎಫ್ ಐ ಸದಸ್ಯರಿಗೆ ಶಸ್ತ್ರಾಸ್ತ್ರ ಸೇರಿ ಸುಧಾರಿತ ತರಬೇತಿ ನೀಡುತ್ತಿದ್ದ. ಎನ್‌ಐಎ ತನಿಖೆಯ ಪ್ರಕಾರ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗೆ ಮೈಸೂರು, ಕೊಡಗು ಹಾಗೂ ತಮಿಳುನಾಡಿನ ಈರೋಡ್‌ನಲ್ಲಿ ತುಫೈಲ್ ಆಶ್ರಯ ಕಲ್ಪಿಸಿಕೊಟ್ಟಿದ್ದನು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಮೊಹಮ್ಮದ್ ಜಬೀರ್ ದಕ್ಷಿಣ ಕನ್ನಡ ಜಿಲ್ಲೆಯ ಪಿಎಫ್ ಐ ಜಿಲ್ಲಾಧ್ಯಕ್ಷನಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿ ನಡೆದಿದ್ದ ಸಭೆಗಳಲ್ಲಿ ಭಾಗಿಯಾಗಿದ್ದ. ಮತ್ತು ಮಸೂದ್ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಎಂದು ಪ್ರಚೋದನಕಾರಿ ಭಾಷಣಗಳನ್ನ ಮಾಡಿದ್ದ ಎಂದು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಬೇಕೇ; ಇಲ್ಲಿದೆ‌ ಸರಳ ವಿಧಾನ, ಹೀಗೆ ಪರಿಶೀಲಿಸಿ.

ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಲಿದ್ದು, ವೋಟರ್ ಐಡಿ ಪ್ರಮುಖ ದಾಖಲೆಯಾಗಿದೆ ಏಕೆಂದರೆ ಚುನಾವಣೆಯಲ್ಲಿ ಮತ ಚಲಾಯಿಸುವುದು ಅತ್ಯಗತ್ಯ. ಎಲ್ಲಾ ಅರ್ಹ ನಾಗರಿಕರಿಗೆ ಮಾನ್ಯವಾದ ಮತದಾರರ ಗುರುತಿನ ಚೀಟಿಯ ಅಗತ್ಯವಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬ ಸಂಶಯ ಹಲವರನ್ನು ಕಾಡುತ್ತಿರಬಹುದು. ಈ ಗೊಂದಲ ನಿವಾರಿಸುವ ವಿಧಾನ ಇಲ್ಲಿ ವಿವರಿಸುತ್ತೇವೆ.

ಇದನ್ನೂ ಓದಿ; ʻಕೈ ʼ-jds ಕಾರ್ಯಕರ್ತರ ನಡುವೆ ಘರ್ಷಣೆ

ಒಂದು ನಿರ್ದಿಷ್ಟ ಕ್ಷೇತ್ರದ ಮತದಾರರ ಹೆಸರು ಮತ್ತು ಇತರ ವಿವರಗಳನ್ನು ಒಳಗೊಂಡಿರುವ ಸಮಗ್ರ ಮಾಹಿತಿಯನ್ನು ಮತದಾರರ ಪಟ್ಟಿ ಎಂದು ಕರೆಯಲಾಗುತ್ತದೆ. ಭಾರತದ ಚುನಾವಣಾ ಆಯೋಗವು ನಿಯಮಿತವಾಗಿ ನವೀಕರಿಸಿದ ಮತದಾರರ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತದೆ. ಆನ್ ಲೈನ್ ಮೂಲಕ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಪತ್ತೆ ಹಚ್ಚಬಹುದು.

ಮತದಾರರ ಗುರುತಿನ ಚೀಟಿ ಎಂದರೇನು?
ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಕಾರ್ಡ್ ಭಾರತದ ಚುನಾವಣಾ ಆಯೋಗವು(election commission) ತನ್ನ ಮತವನ್ನು ಚಲಾಯಿಸಲು ಅರ್ಹರಾಗಿರುವ ಭಾರತೀಯ ನಾಗರಿಕರಿಗೆ ನೀಡಿದ ಫೋಟೋ ಗುರುತಿನ ಪುರಾವೆಯಾಗಿದೆ. ಮತದಾರರ ನೋಂದಣಿ ಕಾರ್ಡ್ ಎಂದೂ ಕರೆಯಲ್ಪಡುವ ಮತದಾರರ ಗುರುತಿನ ಚೀಟಿಯು ಒಬ್ಬರ ಪೌರತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ, ಒಬ್ಬ ವ್ಯಕ್ತಿಯನ್ನು ಭಾರತದಲ್ಲಿ ಮತ ಚಲಾಯಿಸಲು ಅರ್ಹರನ್ನಾಗಿ ಮಾಡುತ್ತದೆ.

ಇದನ್ನೂ ಓದಿ; ವರದಕ್ಷಿಣೆ ಕಿರುಕುಳ, ಮಹಿಳೆಯ ಕೊಲೆ

ಮತದಾರರ ಗುರುತಿನ ಚೀಟಿ ಏಕೆ ಅತ್ಯಗತ್ಯ?
ಇದು ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗುರುತಿನ ರೂಪವಾಗಿ ಕಾರ್ಯನಿರ್ವಹಿಸುತ್ತದೆ.
ಇದು ಒಬ್ಬರ ಮತದಾರರ ನೋಂದಣಿಯ ದೃಢೀಕರಣವಾಗಿ ಕಾರ್ಯನಿರ್ವಹಿಸುತ್ತದೆ.
ಚುನಾವಣೆಗಳಲ್ಲಿ ಬಹು ಮತದಾನವನ್ನು ಗುರುತಿಸುವಿಕೆಯ ಮೂಲಕ
ಕಡಿಮೆ-ಸಾಕ್ಷರತೆಯ ಜನಸಂಖ್ಯೆಯ ಚುನಾವಣಾ ಅಗತ್ಯಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಸ್ಥಿರ ವಿಳಾಸವನ್ನು ಹೊಂದಿರದ ಮತದಾರರಿಗೆ ಇದು ಪ್ರಮುಖ ಗುರುತಿನ ಪುರಾವೆಯಾಗಿದೆ. ತಮ್ಮ ಉದ್ಯೋಗದ ಕಾರಣದಿಂದಾಗಿ ಆಗಾಗ್ಗೆ ಚಲಿಸುವ ವ್ಯಕ್ತಿಗಳಿಗೆ ಇದು ಸೂಕ್ತವಾಗಿದೆ. ಇದು ಫೋಟೋ ಗುರುತಿನ ಪುರಾವೆಯಾಗಿರುವುದರಿಂದ, ಇದು ಮತದಾರರ ಪಟ್ಟಿಯ ನಿಖರತೆಯನ್ನು ಖಚಿತಪಡಿಸುತ್ತದೆ ಮತ್ತು ಚುನಾವಣಾ ವಂಚನೆಯ ಪ್ರಕರಣಗಳನ್ನು ಪರಿಶೀಲಿಸುತ್ತದೆ.

ಇದನ್ನೂ ಓದಿ; ರಸ್ತೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಿವಾದ

ಮೊದಲಿಗೆ https://electoralsearch.in ಸೈಟ್ ಭೇಟಿ ನೀಡಿ ಸರ್ಚ್ ಬೈ ಡೀಟೇಲ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಹೆಸರು, ವಯಸ್ಸು, ರಾಜ್ಯ, ಜಿಲ್ಲೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಮಾಹಿತಿ ನೀಡಲಾಗುತ್ತದೆ.

ಇನ್ನೊಂದು ವಿಧಾನ:
ನೀವು ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅದರ ಸಂಖ್ಯೆ ಬಳಸುವುದರ ಮೂಲಕ ಪರಿಶೀಲಿಸಬಹುದು.

https://electoralsearch.in ಸೈಟ್ ಗೆ ಭೇಟಿ ನೀಡಿ, ಸರ್ಚ್ ಬೈ ಎಪಿಕ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಗುರುತಿನ ಚೀಟಿಯ ಸಂಖ್ಯೆ, ರಾಜ್ಯ, ಕ್ಯಾಪ್ಚಾ ಕೋಡ್ ನ್ನು ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಜಿಲ್ಲೆ, ವಿಧಾನಸಭಾ ಕ್ಷೇತ್ರ ವಿವರ ಮೂಡುತ್ತದೆ.

ಇದನ್ನೂ ಓದಿ; ಜಿಲ್ಲೆಯ ಹಲವು ಕಡೆ ಬಜರಂಗದಳದ ಕಾರ್ಯಕರ್ತರಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

ಗಮನಿಸಬೇಕಾದ ಸಂಗತಿ ಎಂದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಚುನಾವಣೆಗೆ ಕನಿಷ್ಠ 10 ದಿನಗಳ ಮೊದಲು ಪರಿಶೀಲನೆ ಮಾಡಬೇಕು. ಇದರಿಂದ ಯಾವುದೇ ರೀತಿಯ ದೋಷವನ್ನು ಆದಷ್ಟು ಬೇಗ ಸರಿಪಡಿಸಬಹುದು.

Most Popular

Recent Comments