ಕೆಟ್ಟ ಕೊಲೆಸ್ಟ್ರಾಲ್ ತುಂಬಾನೇ ಡೇಂಜರ್, ಯಾಕೆಂದ್ರೆ ಇದರ ಲಕ್ಷಣಗಳು ಕೆಲವೊಮ್ಮೆ ಗೋಚರಿಸದೇ ಇರಬಹುದು. ಒಂದು ವೇಳೆ ಈ ಕಾಯಿಲೆಯನ್ನು ನಿರ್ಲಕ್ಷ ಮಾಡುತ್ತ ಹೋದರೆ ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ.
ಇವರು ನೆನ್ನೆವರೆಗೂ ಚೆನ್ನಾಗಿದ್ದರು. ಏನಾಯೋ ಗೊತ್ತಿಲ್ಲ. ಇಂದು ಹಾರ್ಟ್ ಆಟ್ಯಾಕ್ ಆಗಿ ಹೋಗಿಬಿಟ್ಟರು ಮೊನ್ನೆಯೊಬ್ಬರು ನಮ್ಮ ಸಂಬಂಧಿಕರು, ತುಂಬಾನೇ ಒಳ್ಳೆಯ ವ್ಯಕ್ತಿ ಯಾರ ಸಹವಾಸಕ್ಕೂ ಹೋದವರಲ್ಲ. ಮನೆಯಲ್ಲಿ ಟಿವಿ ನೋಡುತ್ತ ಕುಳಿತ್ತಿದ್ದರಂತೆ, ಅಲ್ಲಿಯೇ ಹಾರ್ಟ್ ಅಟ್ಯಾಕ್ ಆಯ್ತಂತೆ ಕುಳಿತಲ್ಲಿ ಪ್ರಾಣ ಬಿಟ್ಟರಂತೆ ಇಂತಹ ಮಾತುಗಳು ನಮ್ಮ ಸುತ್ತಮುತ್ತಲಿನ ಜನರು ಹೇಳುತ್ತಿರುವುದು, ಆಗಾಗ ನಾವು ಕೇಳುತ್ತಲೇ ಇರುತ್ತೇವೆ.
ಯಾಕೆ ಹೀಗೆ ಎಂದು ನೋಡುವುದಾದರೆ, ಇಂದಿನ ದಿನಗಳಲ್ಲಿ ಜನರು ಅನುಸರಿಸುತ್ತಿರುವ ಅನಾರೋಗ್ಯಕಾರಿ ಆಹಾರ ಪದ್ಧತಿ, ಜಡ ಜೀವನಶೈಲಿಯಿಂದಾಗಿ, ರಕ್ತದಲ್ಲಿ ಶೇಖರಣೆಗೊಳ್ಳುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ರಕ್ತದ ಒತ್ತಡ ಹಾಗೂ ಹೃದಯದ ಕಾಯಿಲೆಗೆ ಕಾರಣವಾಗಿ ಬಿಡುತ್ತದೆ.
ಹೀಗಾಗಿ ಬಿಪಿ ಶುಗರ್ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಾಗ ಕೊಲೆಸ್ಟ್ರಾಲ್ ಪರೀಕ್ಷೆಯನ್ನು ಕೂಡ ಮಾಡಿಕೊಳ್ಳಬೇಕು. ರಕ್ತ ಪರೀಕ್ಷೆ ಮಾಡಿದಾಗ ಮಾತ್ರ ದೇಹದ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ತಿಳಿಯುತ್ತದೆ.
ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಆದರೆ ಆಗುವ ತೊಂದರೆಗಳು:
1. ಕಾಲಿನ ನರಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಸೇರಿ ಕೊಂಡಾಗ, ಅಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಇದರಿಂದಾಗಿ ಕಾಲುಗಳ ಸ್ನಾಯುಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಸಿಗದೇ ಇರುವುದರಿಂದ, ಕಾಲುಗಳಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಉದಾಹರಣೆಗೆ ಕಾಲುಗಳನ್ನು ಎತ್ತಲು ಆಗದೇ ಇರುವುದು, ಸರಿಯಾಗಿ ನಡೆಯಲು ಆಗದೇ ಇರುವುದು. ಒಂದೆರಡು ಹೆಜ್ಜೆ ಹಾಕುವಾಗಲೇ ಕಾಲುಗಳ ಸ್ನಾಯುಗಳಲ್ಲಿ ಸೆಳೆತ ಕಂಡುಬರುವುದು.
ಇನ್ನೂ ಆತಂಕಕಾರಿ ಏನೆಂದ್ರೆ ಒಂದು ವೇಳೆ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಈ ಸಮಸ್ಯೆ ಕಾಲಿನ ಇತರ ಅಂಗಗಳಾದ ತೊಡೆ, ಮೀನ ಖಂಡಗಳಲ್ಲಿಯೂ ಈ ರೀತಿಯ
ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
2. ಉಗುರುಗಳ ಬಣ್ಣದಲ್ಲಿ ಬದಲಾವಣೆ ಹಾಗೂ ಗಡಸಾಗುವಿಕೆ ವೈದ್ಯರೇ ಹೇಳುವ ಪ್ರಕಾರ, ನಮ್ಮ ದೇಹದ ಯಾವುದೇ ಭಾಗಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗದಿದ್ದಲ್ಲಿ ದಿನಾ ಹೋದ ಹಾಗೆ, ದೇಹದ ಅಂಗಾಗಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಉದಾಹರಣೆಗೆ ಉಗುರುಗಳ ಬಣ್ಣ ಬದಲಾಗುವುದು. ದೇಹದ ಚರ್ಮ ಬಿಳಿಚಿಕೊಂಡು ತುರಿಕೆಯಂತ ಸಮಸ್ಯೆಗಳು ಕಂಡುಬರುವುದು. ಪಾದಗಳಲ್ಲಿ ಸಮಸ್ಯೆ ಕಂಡು ಬರುವುದು, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋದಂತೆ, ಕಾಲಿನ ಪಾದಗಳಲ್ಲಿ ರಕ್ತ – ಪರಿಚಲನೆಯ ವೇಗ ದಿನಾ ಹೋದ ಹಾಗೆ ಕಡಿಮೆ ಆಗುತ್ತಾ – ಹೋಗುತ್ತದೆ.
ಕೊನೆಗೆ ಇದೇ ಕಾರಣದಿಂದಾಗಿ ಈ ಭಾಗದಲ್ಲಿ ಸಾಕಷ್ಟು ಶಾಖ ಉತ್ಪತ್ತಿಯಾಗಲು ಸಾಧ್ಯವಾಗದೇ ತಣ್ಣಗಾಗುತ್ತದೆ. ಇನ್ನೂ ಆತಂಕಕಾರಿ ವಿಚಾರ ಏನೆಂದರೆ, ಸಾಮಾನ್ಯವಾಗಿ ಚಳಿಗಾಲದಲ್ಲಿ ಪಾದಗಳು ತಣ್ಣಗಾಗುವಂತೆ, ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿರುವ ವ್ಯಕ್ತಿಯ ಪಾದಗಳು ಇಡೀ ವರ್ಷವೇ ತಣ್ಣಗೇ ಇರುತ್ತದೆ!
ಇತರ ಲಕ್ಷಣಗಳು:
ಕಾಲು ಮರಗಟ್ಟುವಿಕೆ, ಕಾಲಿನ ನಾಡಿ ಮಿಡಿತ ಕಡಿಮೆಯಾಗುವಿಕೆ
ಕಾಲಿನ ಹಾಗೂ ತೊಡೆಯ ಮಾಂಸ ಖಂಡ ಹಿಡಿಯುವಿಕೆ (muscle cramp)
ಕಾಲಿನ ಚರ್ಮ ಹೊಳೆಯುವ ಹಾಗೆ ತೋರುವಿಕೆ,
ನಂತರ ಚರ್ಮದ ಬಣ್ಣ ಬದಲಾಗಿ ಗುಣವಾಗದ ಗಾಯವಾಗುವುದು.
ಕಾಲಿನ ರೋಮ ಉದುರುವಿಕೆ
ಈ ಸಮಸ್ಯೆ ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರ ಸಲಹೆ ಮೇರೆಗೆ ರಕ್ತ ಪರೀಕ್ಷೆ ಹಾಗೂ DOPPLER SCANNING ಮಾಡಿಸಬೇಕು.
ಸೂಕ್ತ ಸಮಯದಲ್ಲಿ ಔಷಧಿ/ಆಹಾರ ಪಥ್ಯ ಮಾಡದಿದ್ದರೆ ಇದು PERIPHERAL ARTERY DISEASE ಗೋಚರ ವಾಗುತ್ತದೆ. ಅವಾಗ ಹೃದಯಕ್ಕೆ ANGIOGRRAM ಮಾಡಿಸಿಕೊಳ್ಳಬೇಕಾಗುತ್ತದೆ DRY GANGRENE ಆಗಿ ಕಾಲನ್ನೇ ತೆಗೆಯುವ ಸಂದರ್ಭ ಬರಬಹುದು.
ಇದಕ್ಕೆಲ್ಲಾ ಡಾ||ಉರಾಳ್ ಕಾರ್ಡಿಯಾಕ್ ಆಯುರ್ವೇದ ಸಿರಪ್ ಅತ್ಯುತ್ತಮ ಪರಿಹಾರವಾಗಿದೆ. ಇದು ರಕ್ತನಾಳದಲ್ಲಿ ಶೇಖರ ಗೊ೦ಡಿರುವ plaque ನ್ನು ನಿವಾರಿಸಿ peripheral artery disease
ಎಲ್ಲಾ ಲಕ್ಷಣವನ್ನು ನಿವಾರಿಸಿ ನೂರಾರು ರೋಗಿಗಳಿಗೆ ಆರೋಗ್ಯಕರ ಜೀವನವನ್ನು ನಡಿಸುವಂತೆ ಮಾಡಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ- ಡಾ||ಎಂ.ವಿ ಉರಾಳ್ಸ್ ಆಯುರ್ವೇದ ಖ್ಯಾತ ವೆರಿಕೋಸ್ ವೇನ್ಸ್ ತಜ್ಞರು, ಶೃಂಗೇರಿ-8982082089