Agriculture: ನಮ್ಮ ದೇಶದಲ್ಲಿ ಗಂಭೀರ ಸಮಸ್ಯೆಯೆಂದರೆ ಕೃಷಿಯೋಗ್ಯ ಭೂಮಿಯ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದೆ. ಜನಸಂಖ್ಯೆ ವೇಗವಾಗಿ ಹೆಚ್ಚುತ್ತಲೇ ಇದೆ ಮತ್ತು ಯೋಜಿತವಲ್ಲದ ನಗರೀಕರಣ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಫಲವತ್ತಾದ ಕೃಷಿ ಜಮೀನುಗಳು ವಸತಿ ಪ್ರದೇಶಗಳು, ರಸ್ತೆ, ಕಾರ್ಖಾನೆ ಹಾಗೂ ಇತರ ಮೂಲಸೌಕರ್ಯಗಳಿಗಾಗಿ ಬಳಸಲ್ಪಡುತ್ತಿರುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.
ಒಂದೇ ಜಮೀನಿನಲ್ಲಿ ಹಲವು ಬೆಳೆಗಳು
ಈ ತಂತ್ರಜ್ಞಾನದಲ್ಲಿ ರೈತರು ಒಂದೇ ಜಮೀನಿನಲ್ಲಿ ವಿವಿಧ ಪದರಗಳಲ್ಲಿ ವಿಭಿನ್ನ ಬೆಳೆಗಳನ್ನು ಬೆಳೆಯಬಹುದು. ಮಣ್ಣು, ಹವಾಮಾನ ಮತ್ತು ಋತುಮಾನಕ್ಕೆ ಅನುಗುಣವಾಗಿ ಸರಿಯಾದ ಬೆಳೆ ಆಯ್ಕೆ ಮಾಡುವುದು ಮುಖ್ಯ.
ಇದನ್ನೂ ಓದಿ: 6 ತಿಂಗಳು ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್; ಕಾರಣವೇನು ಗೊತ್ತಾ…?
1. ಬೇರು ತರಕಾರಿಗಳ ಬೆಳೆ
ಮೊದಲ ಹಂತದಲ್ಲಿ ರೈತರು ಆಲೂಗಡ್ಡೆ, ಬೀಟ್‌ರೂಟ್, ಮೂಲಂಗಿ, ಕ್ಯಾರೆಟ್, ಶುಂಠಿ, ಅರಿಶಿನ ಮೊದಲಾದ ಬೇರು ತರಕಾರಿಗಳನ್ನು ಬೆಳೆಯಬಹುದು. ಸ್ಥಳೀಯ ಮಣ್ಣು ಮತ್ತು ಹವಾಮಾನಕ್ಕೆ ಸೂಕ್ತವಾದ ಬೆಳೆ ಆಯ್ಕೆ ಮಾಡಿದರೆ ಉತ್ತಮ ಇಳುವರಿ ಸಾಧ್ಯ.
2. ಮೇಲ್ಮ ತರಕಾರಿಗಳು
ಬೇರು ಬೆಳೆಗಳ ಜೊತೆಗೆ ಉದ್ದು, ಹೆಸರುಕಾಳು, ಗೋವಿನ ಜೋಳ, ಬೆಂಡೆಕಾಯಿ, ಬಟಾಣಿ, ಬದನೆಕಾಯಿ, ಎಲೆಕೋಸು, ಹಸಿರು ಮೆಣಸಿನಕಾಯಿ ಮತ್ತು ಕ್ಯಾಪ್ಪಿಕಂ ಮುಂತಾದ ತರಕಾರಿಗಳನ್ನು ಬೆಳೆಯಬಹುದು.
3. ಬಳ್ಳಿ ತರಕಾರಿಗಳು (ಸ್ಕ್ಯಾಫೋಲ್ಡಿಂಗ್ ವಿಧಾನ)
ತರಕಾರಿಗಳನ್ನು ನೆಟ್ಟ ನಂತರ ಸ್ಕ್ಯಾಫೋಲ್ಡಿಂಗ್ ಅದರ ಮೇಲೆ ಕುಂಬಳಕಾಯಿ, ಸೌತೆಕಾಯಿ, ಸೋರೆಕಾಯಿ ಮುಂತಾದ ಬಳ್ಳಿ ಬೆಳೆಗಳನ್ನು ಬೆಳೆಯಬಹುದು. ಇದು ನೆಲದ ಮೇಲಿನ ಬೆಳೆಗಳಿಗೆ ಹಾನಿಯಾಗದಂತೆ ರಕ್ಷಣೆ ನೀಡುವುದರ ಜೊತೆಗೆ ಹೆಚ್ಚುವರಿ ಆದಾಯ ಒದಗಿಸುತ್ತದೆ.
ಇದನ್ನೂ ಓದಿ: 10th ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 12,000 ದಿಂದ ಸಂಬಳ
4. ಕಡಿಮೆ ಎತ್ತರದ ಹಣ್ಣಿನ ಮರಗಳು
ಜಮೀನಿನ ಮಧ್ಯ ಭಾಗದಲ್ಲಿ ನಿಂಬೆ, ಸುಧಾರಿತ ತಳಿಯ ಮಾವು, ಪೇರಲ ಮತ್ತು ಪಪ್ಪಾಯಿ ಮರಗಳನ್ನು ನೆಡುವ ಮೂಲಕ ರೈತರು ಮತ್ತಷ್ಟು ಲಾಭ ಗಳಿಸಬಹುದು. ಇವು ನೆಲ ಮತ್ತು ಮೇಲಿನ ಪದರದ ಬೆಳೆಗಳಿಗೆ ಅಡ್ಡಿಯಾಗದೆ ಹೆಚ್ಚುವರಿ ಆದಾಯ ನೀಡುತ್ತವೆ.
ಸರಿಯಾದ ಸಮಯದಲ್ಲಿ ಸರಿಯಾದ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಈ ಬಹು-ಬೆಳೆ ತಂತ್ರಜ್ಞಾನವನ್ನು ಅನುಸರಿಸಿದರೆ, ಸಣ್ಣ ಮತ್ತು ಅಂಚಿನ ರೈತರು ಸಹ ತಮ್ಮ ಸೀಮಿತ ಭೂಮಿಯಿಂದ ನಾಲ್ಕು ಪಟ್ಟು ಆದಾಯ ಗಳಿಸಬಹುದು. ಕೃಷಿಯೋಗ್ಯ ಭೂಮಿ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ, ಇಂತಹ ವೈಜ್ಞಾನಿಕ ವಿಧಾನಗಳು ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮಹತ್ವದ ಪಾತ್ರ ವಹಿಸುತ್ತವೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Agriculture:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ




























