Robotic Dog: ಬೆಂಗಳೂರಿನ ಜನರಲ್ ಅಟಾನಮಿ ಅಭಿವೃದ್ಧಿಪಡಿಸಿದ ‘ಪರಮ್’ ಭಾರತದ ಮೊದಲ ಸ್ವದೇಶಿ ರೋಬೋಟಿಕ್ ನಾಯಿ. ಇಂಡಿಯಾ ಎಐ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಈ ರೋಬೋಟ್, ಸಂಪೂರ್ಣ ಭಾರತೀಯ ವಿನ್ಯಾಸ ಮತ್ತು ನಿರ್ಮಾಣವಾಗಿದೆ. ಸ್ವತಂತ್ರವಾಗಿ ಸಂಚರಿಸುವ, ಅಡೆತಡೆಗಳನ್ನು ನಿವಾರಿಸುವ, ಮತ್ತು ಮೆಟ್ಟಿಲು ಹತ್ತುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: 6 ತಿಂಗಳು ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್; ಕಾರಣವೇನು ಗೊತ್ತಾ…?
ಬೆಂಗಳೂರು ಮೂಲದ ರೋಬೋಟಿಕ್ಸ್ ಸ್ಟಾರ್ಟ್-ಅಪ್ ‘ಜನರಲ್ ಅಟಾನಮಿ’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಭಿವೃದ್ದಿ ಪಡಿಸಿದ ರೋಬೋಟಿಕ್ ನಾಯಿ ‘ಪರಮ್’ ಈಗ ಪ್ರಮುಖ ಸುದ್ದಿಯಲ್ಲಿದೆ. ದೆಹಲಿಯಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026’ ರಲ್ಲಿ ಇದನ್ನು ಅನಾವರಣಗೊಳಿಸಲಾಗಿದೆ.ಇದು ಕೇವಲ ಭಾರತದಲ್ಲಿ ಜೋಡಿಸಲಾದ ಯಂತ್ರವಲ್ಲ, ಬದಲಿಗೆ ಭಾರತೀಯ ಇಂಜಿನಿಯರ್‌ಗಳು ಮೊದಲಿನಿಂದಲೂ ವಿನ್ಯಾಸಗೊಳಿಸಿ ನಿರ್ಮಿಸಿರುವ ಸಂಪೂರ್ಣ ಸ್ವದೇಶಿ ರೋಬೋಟ್ ಆಗಿದೆ. ಈ ಪರಮ್ ಅಂದರೆ ರೋಬೋಟಿಕ್ ನಾಯಿ ಯೋಜನೆಯನ್ನು ತಯಾರಿಸಲು ಕಡಿಮೆ ಸಮಯ ತೆಗೆದುಕೊಂಡಿದ್ದು, 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ.
ಇದನ್ನೂ ಓದಿ: 10th ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 12,000 ದಿಂದ ಸಂಬಳ
ರೋಬೋಟಿಕ್ ನಾಯಿ ವೈಶಿಷ್ಯ್ಟಗಳು:
* ಸ್ವತಂತ್ರವಾಗಿ ಇದು ಸಂಚರಿಸಬಲ್ಲದು.
* ರಸ್ತೆ ದಾಟುವಾಗ ಬರುವ ಅಡತಡೆಗಳನ್ನು ಗುರುತಿಸಿ ಸರಿಯಾದ ದಾರಿಯಲ್ಲಿ ಸಾಗಬಲ್ಲದು.
* ಸುಮಾರು 30 ಸೆಂಟಿಮೀಟರ್ ಎತ್ತರದ ಮೆಟ್ಟಿಲನ್ನು ಹತ್ತಬಹುದು.
* ಬಿದ್ದರೆ ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿದೆ.
ರೋಬೋಟ್‌ಗಳು ಮುಖ್ಯವಾಗಿ ಕಾರ್ಖಾನೆಗಳ ತಪಾಸಣೆ, ಅಪಾಯಕಾರಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ, ಗಡಿ ಭದ್ರತೆ ಮತ್ತು ಸಂಶೋಧನಾ ಯೋಜನೆಗಳಿಗೆ ಸಹಕಾರಿಯಾಗಲಿವೆ.
Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Robotic Dog:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- 10th ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 12,000 ದಿಂದ ಸಂಬಳ
- 6 ತಿಂಗಳು ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್; ಕಾರಣವೇನು ಗೊತ್ತಾ…?





