ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿನ ಮೂವರು ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದ್ದಾರೆ ಎಂದಿದ್ದ ಚಾಲಕ ಹರೀಶ್ ರಾವ್ ಉಲ್ಟಾ ಹೊಡೆದಿದ್ದಾನೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಳಿ ತನಗೆ ರಕ್ಷಣೆ ನೀಡಬೇಕು ಎಂದು ಹರೀಶ್ ರಾವ್ ಮನವಿ ಮಾಡಿಕೊಂಡಿದ್ದನು.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ
ಈ ವೇಳೆ ಈಶ್ವರಪ್ಪ ಸೂಕ್ತ ನ್ಯಾಯ ಕೊಡಿಸುವ ಭರವಸೆ ನೀಡಿ 20 ಸಾವಿರ ರೂಪಾಯಿ ಹಣದ ಸಹಾಯ ಮಾಡಿದ್ದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬೆನ್ನಲ್ಲೇ ಆಟೋ ಚಾಲಕ ತನ್ನ ಹೇಳಿಕೆಯನ್ನು ಬದಲಿಸಿದ್ದಾನೆ.
ಎಸ್ಪಿ ಕಚೇರಿ ಬಳಿ ನಡೆದಿದ್ದೇನು?:
ಹಾನಿಯಾಗಿದ್ದ ಗಾಜು, ಹರಿದ ಟಾಪ್‌ನೊಂದಿಗೆ ಹರೀಶ್ ರಾವ್ ಎಂಬ ಚಾಲಕ ತನ್ನ ಆಟೋವನ್ನು ಸೋಮವಾರ ಬೆಳಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತಂದಿದ್ದ. ಇದೆ ವೇಳೆ ಎಸ್‌ಪಿ ಕಚೇರಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡರು ಮತ್ತು ಮಾಧ್ಯಮದವರನ್ನು ನೋಡುತ್ತಿದ್ದಂತೆ ಹರೀಶ್ ರಾವ್ ಸಂಕಟ ಹೇಳಿಕೊಂಡಿದ್ದ. ‘ಬಿಜೆಪಿಗೆ ಮತ ನೀಡಿದ್ದಕ್ಕೆ ತನ್ನ ಮೇಲೆ ಮೂವರು ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ. ಆಟೋ ಜಖಂ ಮಾಡಿದ್ದಾರೆ ಎಂದು ಕಣ್ಣೀರು ಸುರಿಸಿದ್ದ. ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆಗೆ ಮೊರೆ ಇಟ್ಟಿದ್ದ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಉದ್ಯಮಿ ಕೃತ್ಯದ ವಿರುದ್ಧ ಮಹಿಳೆಯಿಂದ ದೂರು
- ಸಿ. ಟಿ ರವಿ ಸೋಲನ್ನು ಸಂಭ್ರಮಿಸುವ ರೀತಿ ವ್ಯಂಗ್ಯವಾಡಿದ ಎಂ ಪಿ ಕುಮಾರಸ್ವಾಮಿ
- ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿಗಳಿಂದ ಆಟೋ ಚಾಲಕನ ಮೇಲೆ ಹಲ್ಲೆ
ಹರೀಶ್ ರಾವ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೆ.ಎಸ್.ಈಶ್ವರಪ್ಪ ಆಟೋ ರಿಪೇರಿ ಮಾಡಿಸಿಕೊಳ್ಳುವಂತೆ ಜೇಬಿನಿಂದ ಹಣ ತೆಗೆದು ಕೊಟ್ಟಿದ್ದರು. ರಿಪೇರಿ ಮಾಡಿಸಿಕೊಂಡು ಮನೆ ಬಳಿ ಬಾ ಎಂದು ಸೂಚಿಸಿದ್ದರು. ಅಲ್ಲದೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದರು.
ಇದನ್ನೂ ಓದಿ; ಕಾರ್ಮಿಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ
ಇದನ್ನೂ ಓದಿ; ಸರ್ಕಾರಿ ನೌಕರನಿಂದ ಮರ್ಕಲ್ ಗ್ರಾಮ ಪಂಚಾಯಿತಿ ಸಮೀಪ ಅಕ್ರಮ ಕಟ್ಟಡ ನಿರ್ಮಾಣ ಆರೋಪ, ಶಿಸ್ತು ಕ್ರಮಕ್ಕೆ
ಸಂಜೆ ವೇಳೆ ಉಲ್ಟಾ ಹೊಡೆದ ಚಾಲಕ:
ಈ ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ನಿಜ ಸ್ಥಿತಿ ಅರಿಯಲು ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಅವರ ನೇತೃತ್ವದ ನಿಯೋಗ ವಿನೋಬನಗರ ಠಾಣೆಗೆ ಭೇಟಿ ನೀಡಿತ್ತು. ಆಗ ಎದುರಾದ ಚಾಲಕ, ಉಲ್ಟಾ ಹೊಡೆದಿದ್ದಾನೆ. ಬಿಜೆಪಿಗೆ ಮತ ನೀಡಿದ್ದಕ್ಕೆ ದಾಳಿಯಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ, ನಾವೆಲ್ಲ ಸ್ನೇಹಿತರು ಓಟ್ಟಿಗೆ ಎಣ್ಣೆ ಹಾಕುತ್ತಿದ್ದೆವು. ಸ್ನೇಹಿತರು ಮಧ್ಯೆ ಜಗಳವಾಗಿ ಆಗ ಆಟೋ ಟಾಪ್, ಗ್ಲಾಸ್ ಒಡೆದು ಹೋಗಿದೆ. ಅದಕ್ಕೆ ಕಂಪ್ಲೇಂಟ್ ಕೊಡಲು ಎಸ್‌ಪಿ ಕಚೇರಿಗೆ ಹೋಗಿದ್ದೆ. ನಾನೆಲ್ಲೂ ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹೊಡೆದರು ಎಂದು ಹೇಳಿಲ್ಲ. ಈಶ್ವರಪ್ಪ ಅವರು ದುಡ್ಡು ಕೊಟ್ಟರು. ಆದರೆ ಅದು ಎಷ್ಟಿತ್ತು ಎಂದು ಗೊತ್ತಿಲ್ಲ. ಅದನ್ನು ಯಾರೋ ಜೇಬಿನಿಂದ ಎತ್ತಿಕೊಂಡು ಹೋಗಿದ್ದಾರೆ ಎಂದು ಆಟೋ ಚಾಲಕ ಹರೀಶ್ ರಾವ್ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ; ಜ್ಯೋತಿಷಿ ಮಾತು ಕೇಳಿ ಯುವಕನ ಕೈ-ಕಾಲು ಕತ್ತರಿಸಿದ್ದ ಚಿಕ್ಕಪ್ಪ?