Sunday, June 4, 2023
Homeಮಲೆನಾಡುಕೊಡಗುಕಾರ್ಮಿಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ

ಕಾರ್ಮಿಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ

ಕೊಡಗು; (ನ್ಯೂಸ್ ಮಲ್ನಾಡ್ ವರದಿ) ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರ ಗಾಯಗೊಂಡಿರುವ ಘಟನೆ ಕೊಡಗಿನ ವಿರಾಜಪೇಟೆಯಲ್ಲಿ ನಡೆದಿದೆ. ಮಾಧು ಗಂಭೀರ ಗಾಯಗೊಂಡ ಕಾರ್ಮಿಕ.

ಇದನ್ನೂ ಓದಿ; ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ವಿರಾಜಪೇಟೆ ತಾಲೂಕಿನ ಕಾರೆಕಾಡು ಎಂಬಲ್ಲಿ ರಾತ್ರಿ ಈ ಘಟನೆ ನಡೆದಿದ್ದು ಮಾಧು ತನ್ನ ಪತ್ನಿ ಮೀನಾ ಜೊತೆ ಅಂಗಡಿಯಿಂದ ಆಗಮಿಸುತ್ತಿದ್ದಾಗ ಆನೆ ದಾಳಿ ಮಾಡಿದೆ. ಕಾಫಿ ತೋಟದಲ್ಲಿದ್ದ ಕಾಡಾನೆಯ ದಿಢೀರ್ ದಾಳಿಯಿಂದ ಮಾಧು ಪತ್ನಿ ಮೀನಾ ತಪ್ಪಿಸಿಕೊಂಡಿದ್ದು, ಮಾಧು ಗಂಭೀರ ಗಾಯಗೊಂಡಿದ್ದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಗಾಯಗೊಂಡ ಮಾಧುವನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ದೇವಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಇದನ್ನೂ ಓದಿ; ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ

ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಉರಗ ಸಂರಕ್ಷಕ ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸ್ನೇಕ್ ಕಿರಣ್ ಹಾವು ಕಡಿತಕ್ಕೆ ಒಳಗಾದವರು.

ನಗರದ ಹೊರಭಾಗವಾಗಿರುವ ತಾವರೆ ಚಟ್ನಹಳ್ಳಿಯಲ್ಲಿ ಹಾವು ಬಂದಿದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಹಾವು ಹಿಡಿಯಲು ಸ್ನೇಕ್ ಕಿರಣ್ ಮುಂದಾಗಿದ್ದಾರೆ. ಹಾವು ಹಿಡಿಯಲು ಮುಂದಾದಾಗ ಪೊದೆ ಒಳಗೆ ನುಗ್ಗಿದೆ.

ಇದನ್ನೂ ಓದಿ; ಭೀಕರ ಅಪಘಾತ, ಅತ್ತೆ-ಸೊಸೆ ಸಾವು

ಸ್ನೇಕ್ ಕಿರಣ್ ಶೂ ಹಾಕದೆ ಬಂದಿದ್ದೂ, ಕಾಲಿಗೆ ಸರಿಯಾಗಿ ಕೊಳಕಮಂಡಲ ಹಾವು ಕಚ್ಚಿದೆ. ತಕ್ಷಣ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Most Popular

Recent Comments