ಬೆಳ್ತಂಗಡಿ/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೆಲಸ ಕೊಡಿಸುವ ನೆಪದಲ್ಲಿ ತನ್ನನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋದ ಉಜಿರೆಯ ಉದ್ಯಮಿಯೊಬ್ಬರು ಅಸಭ್ಯ ರೀತಿಯಲ್ಲಿ ವರ್ತಿಸಿದ್ದು ಮಾತ್ರವಲ್ಲದೆ ಮಾನಭಂಗಕ್ಕೆ ಪ್ರಯತ್ನಪಟ್ಟಿದ್ದಾರೆ ಎಂದು ಗೃಹಿಣಿಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ಉಜಿರೆಯಲ್ಲಿ ನಡೆದಿದೆ.
ಇದನ್ನೂ ಓದಿ; ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಇದನ್ನೂ ಓದಿ; ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ
ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡೆ ಕೃತ್ಯ ನಡೆಸಿರುವುದಾಗಿ ದೂರು ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಂಗರವಳ್ಳಿ ನಿವಾಸಿ ಸುಜಾತಾ ದೂರು ನೀಡಿದವರು.
ಸುಜಾತಾ ಮತ್ತು ಅವರ ಪತಿ ಕಿರಣ್ ಗೌಡ ಅವರು ಪ್ರಭಾಕರ್ ಹೆಗ್ಡೆ ಅವರ ಸಂಸ್ಥೆಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಈ ಸಂದರ್ಭ ಅವರ ಮನೆಯಲ್ಲೇ ಆಶ್ರಯ ನೀಡಿ ಮೇ 14 ರಂದು ಪತಿ ಕಿರಣ್ ಅವರನ್ನು ತಮ್ಮ ಸಂಸ್ಥೆಯ ಅಡುಗೆ ಕೆಲಸಕ್ಕೆ ನಿಜಿಯೋಜಿಸಿದ್ದರು. ಸುಜಾತಾ ಅವರಿಗೆ ಧರ್ಮಸ್ಥಳದ ತಮ್ಮದೇ ಸಂಸ್ಥೆಯಲ್ಲಿ ಕೆಲಸಕ್ಕೆ ತಾನೇ ಬಿಟ್ಟು ಬರುವುದಾಗಿ ಹೇಳಿ ಕಾರಿನಲ್ಲಿ ಕುರಿಸಿಕೊಂಡು ಹೋಗಿದ್ದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ
- ಸಿ.ಟಿ ರವಿಯನ್ನು ಸೋಲಿಸಿದ ಕಾಂಗ್ರೆಸ್ನ ತಮ್ಮಯ್ಯ
- ಚುನಾವಣೆಯಲ್ಲಿ ಸೋತ ಸಿ.ಟಿ ರವಿಗೆ ಧೈರ್ಯ ತುಂಬಿದ ಬಾಲಕ
ಆದರೆ ಕಾರು ಧರ್ಮಸ್ಥಳ ಕಡೆಗೆ ಹೋಗದೆ ಕಕ್ಕಿಂಜಿ ಮಾರ್ಗವಾಗಿ ಹೋಗಿದ್ದರು. ಈ ವೇಳೆ ಸುಜಾತಾರಿಗೆ ಅನುಮಾನ ಬಂದು ಈ ಬಗ್ಗೆ ಪ್ರಶ್ನಿಸಿದಾಗ, ನಿನ್ನ ಪತಿಗೆ ಕೆಲಸ ಕೊಡಿಸಿದ್ದೇನೆ ಎಂದು ಹೇಳಿ ಅವಮಾನಕರವಾಗಿ ವರ್ತಿಸಿದ್ದು, ಅಲ್ಲದೇ ಸುಜಾತಾ ಅವರ ಮಾನಭಂಗಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಜೋರಾಗಿ ಕಿರುಚಾಡಿದಾಗ ಸ್ಥಳೀಯರು ಅಲ್ಲಿಗೆ ಬರುವುದನ್ನು ಕಂಡು ಆರೋಪಿಯು ಕಾರನ್ನು ಮುಂದಕ್ಕೆ ಕೊಂಡೊಯ್ದು ಸುಜಾತಾರನ್ನು ಕಾರಿನಿಂದ ಇಳಿಸಿ ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಭೀಕರ ಅಪಘಾತ, ಅತ್ತೆ-ಸೊಸೆ ಸಾವು
ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಉರಗ ಸಂರಕ್ಷಕ ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸ್ನೇಕ್ ಕಿರಣ್ ಹಾವು ಕಡಿತಕ್ಕೆ ಒಳಗಾದವರು.
ನಗರದ ಹೊರಭಾಗವಾಗಿರುವ ತಾವರೆ ಚಟ್ನಹಳ್ಳಿಯಲ್ಲಿ ಹಾವು ಬಂದಿದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಹಾವು ಹಿಡಿಯಲು ಸ್ನೇಕ್ ಕಿರಣ್ ಮುಂದಾಗಿದ್ದಾರೆ. ಹಾವು ಹಿಡಿಯಲು ಮುಂದಾದಾಗ ಪೊದೆ ಒಳಗೆ ನುಗ್ಗಿದೆ.
ಇದನ್ನೂ ಓದಿ; ಸೋಲಿನಿಂದ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ
ಸ್ನೇಕ್ ಕಿರಣ್ ಶೂ ಹಾಕದೆ ಬಂದಿದ್ದೂ, ಕಾಲಿಗೆ ಸರಿಯಾಗಿ ಕೊಳಕಮಂಡಲ ಹಾವು ಕಚ್ಚಿದೆ. ತಕ್ಷಣ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.