ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಭಾನುವಾರ ಯುವತಿಯ ಅಪಹರಣಕ್ಕೆ ಸಂಬಂಧಿಸದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಪಹರಣಕ್ಕೊಳಗಾದ ಯುವತಿಯ ಮೊಬೈಲ್ ನಿಂದಲೇ ಆಕೆಯ ತಂದೆಯ ಮೊಬೈಲ್ ಗೆ ಮೆಸೇಜ್ ಬಂದಿದ್ದು ಅದರಲ್ಲಿ 20 ಲಕ್ಷ ರೂ. ಬೇಡಿಕೆಯಿಟ್ಟಿದ್ದಾರೆ.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಸವರಾಜ್ ಎಂಬುವರ ಮಗಳು ರಂಜಿತ ಬಿ ಶಿವಮೊಗ್ಗದಲ್ಲಿಯೇ ಎರಡು ವರ್ಷ ಆದಿಚುಂಚನಗಿರಿಯಲ್ಲಿ ಪಿಯುಸಿ ಮುಗಿಸಿ ಕಳೆದ ಒಂದು ವರೆ ವರ್ಷದಿಂದ ಖಾಸಗಿ ಆಸ್ಪತ್ರೆಯಲ್ಲಿ ಫಿಸಿಯೋ ಥೆರಪಿ ಕೋರ್ಸ್ ಓದುತ್ತಿದ್ದಳು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಉದ್ಯಮಿ ಕೃತ್ಯದ ವಿರುದ್ಧ ಮಹಿಳೆಯಿಂದ ದೂರು
- ಸಿ. ಟಿ ರವಿ ಸೋಲನ್ನು ಸಂಭ್ರಮಿಸುವ ರೀತಿ ವ್ಯಂಗ್ಯವಾಡಿದ ಎಂ ಪಿ ಕುಮಾರಸ್ವಾಮಿ
- ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿಗಳಿಂದ ಆಟೋ ಚಾಲಕನ ಮೇಲೆ ಹಲ್ಲೆ
ನಂಜಪ್ಪ ಲೈಫ್ ಕೇರ್ ಹಾಸ್ಟೆಲ್ ನಲ್ಲಿಯೇ ತಂಗಿದ್ದ ರಂಜಿತ ಊಟಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಕಳೆದ 3 ತಿಂಗಳ ಹಿಂದೆ ನಗರದ ಸವಳಂಗ ರಸ್ತೆಯಲ್ಲಿರುವ ಸೂಡಿ ಹೋಂ ಹಾಸ್ಟೆಲ್ ನಲ್ಲಿ ತಂಗಿದ್ದಳು. ಕಳೆದ 15 ದಿನಗಳಿಂದ ರವೀಂದ್ರ ನಗರದ ಲೈಬ್ರರಿಗೆ ಓದಿಕೊಳ್ಳಲು ಹೋಗುತ್ತಿದ್ದು, ಅದರಂತೆ ಮೇ 14 ರಂದು ಸಂಜೆ 5-15 ಕ್ಕೆ ರಂಜಿತ ತನ್ನ ಸಹೋದರ ನಿಶಾಂತ್ ಗೆ ಕರೆ ಮಾಡಿ ಎಟಿಎಂ ನಲ್ಲಿ ಹಣ ಬಿಡಿಸಿಕೊಳ್ಳಬೇಕು ಪಿನ್ ನಂಬರ್ ಹೇಳು ಎಂದು ಕೇಳಿರುತ್ತಾಳೆ.
ಇದನ್ನೂ ಓದಿ; ಕಾರ್ಮಿಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ
ಇದನ್ನೂ ಓದಿ; ಜ್ಯೋತಿಷಿ ಮಾತು ಕೇಳಿ ಯುವಕನ ಕೈ-ಕಾಲು ಕತ್ತರಿಸಿದ್ದ ಚಿಕ್ಕಪ್ಪ?
ನಂತರ ಅದೇ ದಿನ ರಾತ್ರಿ ಪಿಜಿ ರೂಮ್ ನಲ್ಲಿ ಆಕೆಯ ಸ್ನೇಹಿತೆ ರಂಜಿತಾಳ ಸಹೋದರನಿಗೆ ಕರೆ ಮಾಡಿ ಸಂಜೆ ಲೈಬ್ರರಿಗೆ ಹೋಗಿ ಬರುವುದಾಗಿ ಇಷ್ಟು ಹೊತ್ತಾದರೂ ಬಂದಿಲ್ಲ ಎಂದು ತಿಳಿಸಿರುತ್ತಾರೆ. ಆಕೆಯ ಮೊಬೈಲ್ ಗೆ ಕರೆ ಮಾಡಿದರೆ ಮೊಬೈಲ್ ರಿಂಗ್ ಆದರೂ ಮಗಳು ಕರೆ ಸ್ವೀಕರಿಸದ ಕಾರಣ ಪೋಷಕರು ನಲ್ಲೂರಿನಿಂದ ಶಿವಮೊಗ್ಗಕ್ಕೆ ಬಂದು ದೂರು ನೀಡಿರುತ್ತಾರೆ.
ಮೆಸೇಜ್ ನಲ್ಲಿ 20 ಲಕ್ಷ ರೂ ಬೇಡಿಕೆ:
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಗಳ ಮೊಬೈಲ್ ನಿಂದಲೇ ತಂದೆಗೆ ಟೆಕ್ಸ್ ಮೆಸೇಜ್ ಒಂದು ಬಂದಿದ್ದು ನಿಮ್ಮ ಮಗಳು ನನ್ನ ಜೊತೆ ಸೇಫ್ ಆಗಿ ಇದ್ದಾಳೆ. 20 ಲಕ್ಷ ರೂ. ರೆಡಿ ಮಾಡಿಕೊಳ್ಳಿ, ಪೊಲೀಸ್ ಅಥವಾ ಪೊಲಿಟಿಷಿಯನ್ ಎಂದು ಹೇಳಿ ಹೋದರೆ ನಿಮ್ಮ ಮಗಳ ಹೆಣವು ಸಿಗುವುದಿಲ್ಲ ಎಂದು ಮೆಸೇಜ್ ಬಂದಿದೆ.
ಇದನ್ನೂ ಓದಿ; ಸರ್ಕಾರಿ ನೌಕರನಿಂದ ಮರ್ಕಲ್ ಗ್ರಾಮ ಪಂಚಾಯಿತಿ ಸಮೀಪ ಅಕ್ರಮ ಕಟ್ಟಡ ನಿರ್ಮಾಣ ಆರೋಪ, ಶಿಸ್ತು ಕ್ರಮಕ್ಕೆ
ಈ ಹಿನ್ನಲೆಯಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಮಗಳ ಅಪಹರಣವಾಗಿದೆ ಎಂದು ರಂಜಿತಾರ ತಂದೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಭರ್ಜರಿ ಹುಡುಕಾಟ ನಡೆದಿದೆ.