ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ, ಚುನಾವಣೆ ಚಟುವಟಿಕೆ ಸಂದರ್ಭದಲ್ಲಿ ಅಕ್ರಮವಾಗಿ ಯಾವುದೇ ದಾಖಲೆ ಇಲ್ಲದೆ ಮರ್ಕಲ್ ಗ್ರಾಮ ಪಂಚಾಯಿತಿ ಸಮೀಪ ಕಟ್ಟಡವೊಂದನ್ನು ನಿರ್ಮಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರರಿಗೆ ದೂರಿನ ಮೂಲಕ ಶಿಸ್ತು ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಸದಸ್ಯ ಪ್ರಶಾಂತ್ ಎಂಬುವವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಶೃಂಗೇರಿ ತಾಲೂಕು ಮರ್ಕಲ್ ಗ್ರಾಮಪಂಚಾಯ್ತಿ ಕಟ್ಟಡದ ಸಮೀಪ ಸರ್ವೆ ನಂ 5 ರಲ್ಲಿ ಮುಜರಾಯಿ ಇಲಾಖೆ ನೌಕರ ಅರುಣ್ ಕುಮಾರ್ ರಾಜ್ಯ ವಿಧಾನಸಭೆ ಘೋಷಣೆ ನಂತರ ಅಕ್ರಮವಾಗಿ ಯಾವುದೇ ದಾಖಲಾತಿ ಇಲ್ಲದೆ ಹಾಗೂ ಪಂಚಾಯ್ತಿಯ ಪೂರ್ವನುಮತಿ ಇಲ್ಲದೆ ಕಟ್ಟಡ ನಿರ್ಮಿಸಿದ್ದಾರೆ. ಅಷ್ಟೆ ಅಲ್ಲದೆ,
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ
- ಸಿ.ಟಿ ರವಿಯನ್ನು ಸೋಲಿಸಿದ ಕಾಂಗ್ರೆಸ್ನ ತಮ್ಮಯ್ಯ
- ಚುನಾವಣೆಯಲ್ಲಿ ಸೋತ ಸಿ.ಟಿ ರವಿಗೆ ಧೈರ್ಯ ತುಂಬಿದ ಬಾಲಕ
ಈ ಹಿಂದೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ 20/03/2021 ಹಾಗೂ 03/04/2021 ರಂದು ಶೃಂಗೇರಿ ತಹಶೀಲ್ದಾರ್ ಅವರಿಗೆ ಕಟ್ಟಡ ರಚನಾ ಪ್ರಕ್ರಿಯೆ ಪಾರಂಭಗೊಂಡಿದ್ದರ ಬಗ್ಗೆ ದೂರು ಕೂಡ ದಾಖಲಿಸಲಾಗಿದೆ. ಅಂದಿನ ತಹಶಿಲ್ದಾರರಾದ ಅಂಬುಜ ಹಾಗೂ ಪ್ರಭಾರ ತಹಶಿಲ್ದಾರ ಪರಮೇಶ್ವರಪ್ಪ ಕಾಮಗಾರಿ ಸ್ಥಗಿತಗೊಳಿಸಿದ್ದರು, ನಂತರ ಶೃಂಗೇರಿ ತಹಶೀಲ್ದಾರ್ ಕಾಮಗಾರಿ ನಿಲ್ಲಿಸಿ ಪ್ರಕರಣ ದಾಖಲಿಸದ ಸಂಬಂಧ ಗ್ರಾಮಪಂಚಾಯ್ತಿ ಸಭೆಯಲ್ಲಿ ಸಭಾನಡವಳಿ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ದಾಖಲಿಸಿದ್ದರು.
ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಅಂದಿನ ತಹಸೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು, ಆದರೆ ಈಗ ಚುನಾವಣೆ ಸಂದರ್ಭ ನೋಡಿಕೊಂಡು ಪುನಃ ಅಕ್ರಮ ಕಟ್ಟಡ ಕಟ್ಟಲು ಮುಂದಾಗಿದ್ದಾರೆ, ಇದಕ್ಕೆ ತಹಸೀಲ್ದಾರರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಈ ಅಕ್ರಮಕ್ಕೆ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ – ಪ್ರಶಾಂತ್, ದೂರುದಾರರು
ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕಾಮಗಾರಿ ಚುನಾವಣಾ ಸಂದರ್ಭದಲ್ಲಿ ಮಾಡಿರುವುದು ಅಪರಾಧವಾಗಿದೆ. ಒಬ್ಬ ಸರ್ಕಾರಿ ನೌಕರ ಕಾನೂನು ಬಾಹಿರವಾಗಿ ಭೂ ಒತ್ತುವರಿಯಲ್ಲಿ ತೊಡಗಿರುವುದು ಸರ್ಕಾರಿ ನೌಕರರು ತಲೆ ತಗ್ಗಿಸುವ ಪ್ರಕರಣವಾಗಿದೆ. ಹಾಗಾಗಿ ವಿಚಾರಣೆಗೊಳಪಡಿಸಿ ಕಾಮಗಾರಿ ನಿಲ್ಲಿಸಿ ಸಂಬಂಧ ಪಟ್ಟವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಮರ್ಕಲ್ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಮನವಿ ಪತ್ರವನ್ನು ಸಲ್ಲಿಸಿದ್ದಾರೆ
ಇದನ್ನೂ ಓದಿ; ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ
.