ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೋಲಿನ ಬಗ್ಗೆ, ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಸಿ.ಟಿ. ರವಿ ನನ್ನನ್ನು ಬಿಜೆಪಿಯಿಂದ ಹೊರಗೆ ಕಳಿಸಿದರು. ಆದರೆ, ಜನ ಕ್ಷೇತ್ರದಿಂದಲೇ ಅವರನ್ನು ಹೊರಗೆ ಕಳಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಇದನ್ನೂ ಓದಿ; ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ
ಚಿಕ್ಕಮಗಳೂರು ಇನ್ನು ಮುಂದೆ ವೀರಶೈವ ಲಿಂಗಾಯಿತರ ಕ್ಷೇತ್ರವಾಗಲಿದೆ. ಸಿ.ಟಿ. ರವಿ ದತ್ತಮಾಲೆ, ಅಹಿತಕರ ಘಟನೆ ಮುಂದಿಟ್ಟು ಪ್ರಚಾರ ನಡೆಸುತ್ತಿದ್ದರು. ಇನ್ನು ಮುಂದೆ ಅವರ ವಿಚಾರಗಳು ಕೆಲಸ ಮಾಡುವುದಿಲ್ಲ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆನ್ ಮಾಡಲಿಲ್ಲ. ಅವರು ಮೊಬೈಲ್ ಫೋನ್ ಸ್ವಿಚ್ ಆನ್ ಮಾಡಿದರೆ ಬಿಜೆಪಿಗೆ 50 ಸ್ಥಾನವಷ್ಟೆ ಬರುತ್ತಿತ್ತು ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜೀವ ತುಂಬಿದ್ದ ನಾನು. ನನ್ನನ್ನು ಸಿ.ಟಿ. ರವಿ ಬಿಜೆಪಿಯಿಂದ ಖಾಲಿ ಮಾಡಿಸಿದರು. ನನ್ನನ್ನು ಬಿಟ್ಟಿದ್ದಕ್ಕೆ 5 ಕ್ಷೇತ್ರ ಹೋಗುತ್ತೆ ಎಂದು ಜನರೇ ಹೇಳಿದ್ದರು. ಹಾಗೆಯೇ ಆಗಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ
- ಸಿ.ಟಿ ರವಿಯನ್ನು ಸೋಲಿಸಿದ ಕಾಂಗ್ರೆಸ್ನ ತಮ್ಮಯ್ಯ
- ಚುನಾವಣೆಯಲ್ಲಿ ಸೋತ ಸಿ.ಟಿ ರವಿಗೆ ಧೈರ್ಯ ತುಂಬಿದ ಬಾಲಕ
ಜೆಡಿಎಸ್ ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗ್ತಿರಲಿಲ್ಲ, ಕಷ್ಟವಾಗಿತ್ತು ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್ ಮಾಡ್ತೀವಿ ಎಂದು ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ; ಸೋಲಿನಿಂದ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ
ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಉರಗ ಸಂರಕ್ಷಕ ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸ್ನೇಕ್ ಕಿರಣ್ ಹಾವು ಕಡಿತಕ್ಕೆ ಒಳಗಾದವರು.
ನಗರದ ಹೊರಭಾಗವಾಗಿರುವ ತಾವರೆ ಚಟ್ನಹಳ್ಳಿಯಲ್ಲಿ ಹಾವು ಬಂದಿದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಹಾವು ಹಿಡಿಯಲು ಸ್ನೇಕ್ ಕಿರಣ್ ಮುಂದಾಗಿದ್ದಾರೆ. ಹಾವು ಹಿಡಿಯಲು ಮುಂದಾದಾಗ ಪೊದೆ ಒಳಗೆ ನುಗ್ಗಿದೆ.
ಇದನ್ನೂ ಓದಿ; ಭೀಕರ ಅಪಘಾತ, ಅತ್ತೆ-ಸೊಸೆ ಸಾವು
ಸ್ನೇಕ್ ಕಿರಣ್ ಶೂ ಹಾಕದೆ ಬಂದಿದ್ದೂ, ಕಾಲಿಗೆ ಸರಿಯಾಗಿ ಕೊಳಕಮಂಡಲ ಹಾವು ಕಚ್ಚಿದೆ. ತಕ್ಷಣ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.