(zero interest loans:) ರಾಜ್ಯದ ರೈತರ ಆರ್ಥಿಕ ಸಬಲೀಕರಣ ಹಾಗೂ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಹಕಾರಿ ಬ್ಯಾಂಕುಗಳ ಮೂಲಕ ನೀಡಲಾಗುವ ಶೂನ್ಯ ಬಡ್ಡಿ ಕೃಷಿ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅರ್ಹ ರೈತರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ; ಇನ್ಮುಂದೆ ಗಾಡಿ FC ಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್
ಸಹಕಾರಿ ಕೃಷಿ ಸಾಲ ಯೋಜನೆಯ ವಿವರ
* ಸರ್ಕಾರವು 2023–24ನೇ ಸಾಲಿನಿಂದ ಅನ್ವಯವಾಗುವಂತೆ ಕೃಷಿ ಸಾಲದ ಮಿತಿಯಲ್ಲಿ ಹೆಚ್ಚಳ ಮಾಡಿದೆ.
* ಅಲ್ಪಾವಧಿ ಸಾಲ: 3 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ (ಶೂನ್ಯ ಬಡ್ಡಿದರ).
* ಮಧ್ಯಮ ಹಾಗೂ ದೀರ್ಘಾವಧಿ ಸಾಲ: 10 ಲಕ್ಷ ರೂ.ನಿಂದ 15 ಲಕ್ಷ ರೂ.ವರೆಗೆ (ಕೇವಲ ಶೇ. 3 ರ ಬಡ್ಡಿದರದಲ್ಲಿ).
ಯಾವೆಲ್ಲಾ ಚಟುವಟಿಕೆಗಳಿಗೆ ಸಾಲ ಸಿಗಲಿದೆ?
* ಕೃಷಿ ಚಟುವಟಿಕೆಗಳು: ಲಘು ನೀರಾವರಿ, ಭೂ ಅಭಿವೃದ್ಧಿ ಹಾಗೂ ಕೃಷಿ ಯಾಂತ್ರೀಕರಣ.
* ತೋಟಗಾರಿಕೆ: ಪ್ಲಾಂಟೇಷನ್ ಹಾಗೂ ಸಾವಯವ ಕೃಷಿ ಅಭಿವೃದ್ಧಿ.
* ಉಪಕಸುಬುಗಳು: ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ ಮತ್ತು ಜೇನು ಸಾಕಾಣಿಕೆ.
* ಇತರೆ ಚಟುವಟಿಕೆಗಳು: ಕುರಿ, ಮೇಕೆ, ಕೋಳಿ ಹಾಗೂ ಹಂದಿ ಸಾಕಾಣಿಕೆಗೂ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಲಭ್ಯವಿದೆ.
ಸಾಲ ಪಡೆಯಲು ಅಗತ್ಯವಿರುವ ಅರ್ಹತೆಗಳು
* ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ಡಿಸಿಸಿ ಬ್ಯಾಂಕಿನಲ್ಲಿ ಸದಸ್ಯತ್ವ ಹೊಂದಿರಬೇಕು.
* ರೈತರು ವಾಸವಿರುವ ಅಥವಾ ಜಮೀನು ಇರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಸಾಲ ಪಡೆಯಲು ಅರ್ಹರು.
* ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನೇ ವಾಸಸ್ಥಳದ ದೃಢೀಕರಣಕ್ಕೆ ಪರಿಗಣಿಸಲಾಗುತ್ತದೆ.
* ನೆರೆ ರಾಜ್ಯದ ನಿವಾಸಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
* ಹಳೆಯ ಸಾಲ ಬಾಕಿ ಇರಬಾರದು.
ಇದನ್ನೂ ಓದಿ: ನಿಮ್ಮ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದೀರಾ?; ಅಂತಹವರು ಈ ಸ್ಟೋರಿ ಓದಲೇಬೇಕು?
ಅಗತ್ಯವಿರುವ ದಾಖಲೆಗಳು
* ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್
* ಆರ್.ಟಿ.ಸಿ (ಪಹಣಿ) ದಾಖಲೆ
* ಬ್ಯಾಂಕ್‌ನಿಂದ ಪಡೆದ ನಿರಾಕ್ಷೇಪಣಾ ಪತ್ರ (NoC)
* ಫಾರ್ಮರ್ ಐಡಿ (FID)
* ಬ್ಯಾಂಕ್ ಖಾತೆಯ ವಿವರ ಮತ್ತು 2 ಪಾಸ್‌ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವ ವಿಧಾನ
ಮೊದಲು ತಮ್ಮ ವ್ಯಾಪ್ತಿಯ ಸಹಕಾರಿ ಸಂಘದಲ್ಲಿ ಸದಸ್ಯತ್ವ ಪಡೆಯಬೇಕು. ಬಳಿಕ ಸಂಘದಿಂದ ನಿಗದಿತ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು. ಸಹಕಾರಿ ಸಂಘದ ಸಾಮಾನ್ಯ ಸಭೆಯಲ್ಲಿ ಅರ್ಜಿಯನ್ನು ಪರಿಶೀಲಿಸಿ ಅನುಮೋದನೆ ನೀಡಲಾಗುತ್ತದೆ. ನಂತರ ಸಾಲದ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ವಿವಿಧ ಕಂತುಗಳಲ್ಲಿ ಜಮೆ ಮಾಡಲಾಗುತ್ತದೆ.
ಗಮನಿಸಿ: ನಿಗದಿತ ಅವಧಿಯೊಳಗೆ ಸಾಲವನ್ನು ಮರುಪಾವತಿ ಮಾಡುವ ರೈತರಿಗೆ ಮಾತ್ರ ಬಡ್ಡಿ ರಿಯಾಯಿತಿ ಸೌಲಭ್ಯ ದೊರೆಯುತ್ತದೆ. ಗಡುವು ಮೀರಿ ಪಾವತಿ ಮಾಡಿದಲ್ಲಿ ಸಾಮಾನ್ಯ ಬಡ್ಡಿದರ ಅನ್ವಯವಾಗುತ್ತದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು (zero interest loans:)
-
- ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
- ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
- ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
- ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
- ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್
- ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
- ಯುವಕರಿಗೆ ʼಗ್ರಾಮ ಒನ್ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
- ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
- ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ






Leave a Reply