(Whatsapp) ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿ ಬಳಕೆ ಮಾಡುವ ಮೆಸೇಜಿಂಗ್ ಆ್ಯಪ್ ನಲ್ಲಿ ವಾಟ್ಸಾಪ್ ಕೂಡ ಒಂದು. ಆದರೆ, ಇದೀಗ ಭಾರತ ದೇಶವನ್ನೇ ಬಿಟ್ಟು ಹೋಗಲು ವಾಟ್ಸಾಪ್ ರೆಡಿಯಾಗಿದೆ. ಯಾಕೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅನ್ನದಾತರಿಗೆ ಗುಡ್ ನ್ಯೂಸ್;ನ್ಯಾನೋ ಯೂರಿಯಾ ಪ್ಲಸ್ ಮಾರಾಟ ಶುರು
ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರು ಸಕ್ರಿಯ ವಾಟ್ಸಾಪ್ ಬಳಕೆದಾರರೇ ಆಗಿದ್ದಾರೆ. ಅದರಲ್ಲಿ ಭಾರತದಲ್ಲೇ ಅತಿಹೆಚ್ಚು ವಾಟ್ಸಾಪ್ ಬಳಕೆದಾರರು ಇರುವುದು. ಇಲ್ಲಿ ಸುಮಾರು 50 ಕೋಟಿಯಷ್ಟು ಸಕ್ರಿಯ ಯೂಸರ್ಸ್ ಇದ್ದಾರೆ. ಇದೀಗ ತನ್ನ ಅತಿದೊಡ್ಡ ಮಾರುಕಟ್ಟೆಯನ್ನೇ ಬಿಟ್ಟುಹೋಗಲು ವಾಟ್ಸಾಪ್ ಸಜ್ಜಾಗಿದೆ. ಅಷ್ಟಕ್ಕೂ ವಾಟ್ಸಾಪ್ ಈ ನಿರ್ಧಾರಕ್ಕೆ ಏನು ಕಾರಣ?
ದೇಶ ಬಿಡುತ್ತೇವೆ ಹೊರತು, ಮೆಸೇಜ್ ಮೂಲ ಕೊಡಲು ಆಗಲ್ಲ ಎನ್ನುವ ವಾಟ್ಸಾಪ್:
ಭಾರತದಲ್ಲಿ ಫೇಸ್ ಬುಕ್, ವಾಟ್ಸಾಪ್ ಇತ್ಯಾದಿ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಪ್ಲಾಟ್ ಫಾರ್ಮ್ ಗಳಲ್ಲಿ ಬಹಳಷ್ಟು ಮಾಹಿತಿ ಹಂಚಿಕೆ ಆಗುತ್ತಿರುತ್ತದೆ. ಹಲವು ಅಪರಾಧ ಕೃತ್ಯಗಳ ವಿಡಿಯೋ ಅಥವಾ ಸುಳ್ಳು ಸುದ್ದಿಗಳು ಪ್ರಸಾರವಾಗಬಹುದು. ಇದಕ್ಕೆ ಕಡಿವಾಣ ಹಾಕಲು ಈ ಸುಳ್ಳು ಮತ್ತು ಅಪರಾಧ ಕಂಟೆಂಟ್ ನ ಮೂಲಸೃಷ್ಟಿಕರ್ತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಈ ವಿಚಾರದಲ್ಲಿ 2021ರ ಐಟಿ ನಿಯಮಗಳನ್ನು ಮಾಡಲಾಗಿದೆ. ಹರಡುತ್ತಿರುವ ಮಾಹಿತಿಯ ಮೂಲವನ್ನು ಗುರುತಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಸೋಷಿಯಲ್ ಮೀಡಿಯಾ ಕಂಪನಿಗಳು ಸಹಕರಿಸಬೇಕು ಎನ್ನುತ್ತವೆ ನಿಯಮಗಳು.
ಬಳಕೆದಾರರ ಗೌಪ್ಯತೆ ಕಾಪಾಡುವುದು ತನ್ನ ಆದ್ಯ ಕರ್ತವ್ಯ ಎಂದ ವಾಟ್ಸಾಪ್:
ವಾಟ್ಸಾಪ್ ಗೆ ಅದರದ್ದೇ ಆದ ನೀತಿ ಇದೆ. ತನ್ನ ಬಳಕೆದಾರರ ಖಾಸಗಿತ್ವ ಮತ್ತು ಗೌಪ್ಯತೆಯನ್ನು ಕಾಪಾಡುವುದು ಅದರ ಒಂದು ನೀತಿ. ಅದರ ಮೆಸೇಜ್ ಗಳನ್ನು ಎಂಡ್ ಟು ಎಂಡ್ ಎನ್ ಕ್ರಿಪ್ಟ್ ಮಾಡಲಾಗಿರುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಕಳುಹಿಸಲಾದ ಮೆಸೇಜ್ ಅನ್ನು ಥರ್ಡ್ ಪಾರ್ಟಿ ನೋಡಲು ಸಾಧ್ಯವಿರುವುದಿಲ್ಲ. ಅಷ್ಟು ಗೌಪ್ಯವಾಗಿ ದತ್ತಾಂಶದ ರವಾನೆ ಆಗುತ್ತದೆ. ಈಗ ಸಿಬಿಐ ಇತ್ಯಾದಿ ಏಜೆನ್ಸಿಗಳು ತನಿಖೆ ನಡೆಸುವಾಗ ಒಬ್ಬ ವ್ಯಕ್ತಿಯ ವಾಟ್ಸಾಪ್ ಮೆಸೇಜ್ ಅನ್ನು ಪತ್ತೆ ಮಾಡಬೇಕೆಂದು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಸ್ವತಃ ತನ್ನ ಬಳಿಯೇ ಈ ಮಾಹಿತಿ ಇರುವುದಿಲ್ಲ ಎಂದು ವಾಟ್ಸಾಪ್ ಹೇಳುತ್ತದೆ.
ಇದನ್ನೂ ಓದಿ: ಮಹಿಳೆಯರೇ ಗಮನಿಸಿ; ಉಚಿತ ಟೂಲ್ ಕಿಟ್ ಜೊತೆಗೆ ಸಿಗಲಿದೆ 15,000 ರೂಪಾಯಿ; ಈ ರೀತಿ ಅರ್ಜಿ ಸಲ್ಲಿಸಿ
ಮೆಸೇಜ್ ಅನ್ನು ಎನ್ ಕ್ರಿಪ್ಟ್ ಮಾಡದೇ ಹೋದರೆ ಇದು ಸಾಧ್ಯವಾಗಬಹುದು. ಆದರೆ, ಬಳಕೆದಾರರ ಗೌಪ್ಯತೆ ಕಾಪಾಡುವುದು ತನ್ನ ಆದ್ಯ ಕರ್ತವ್ಯ. ಸರ್ಕಾರ ಬಲವಂತ ಮಾಡಿದರೆ ಭಾರತದಿಂದಲೇ ಹೊರಟು ಹೋಗುತ್ತೇವೆ ಹೊರತು ಎನ್ ಕ್ರಿಪ್ಷನ್ ಸಿಸ್ಟಂನಲ್ಲಿ ಮಾತ್ರ ಕಾಂಪ್ರಮೈಸ್ ಆಗೋದಿಲ್ಲ ಎಂದು ವಾಟ್ಸಾಪ್ ಹೇಳಿದೆ.
ಹಾಗೆಯೇ 2021 ರ ಈ ಐಟಿ ನಿಯಮದ ವಿರುದ್ಧ ವಾಟ್ಸಾಪ್ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದೆ. ಇದರ ವಿಚಾರಣೆ ವೇಳೆ ವಾಟ್ಸಾಪ್ ಪರ ವಕೀಲರು ದೇಶ ತೊರೆಯಲು ವಾಟ್ಸಾಪ್ ಸಿದ್ಧವಾಗಿದೆ ಎಂದಿದ್ದಾರೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್
- ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ







Leave a Reply