Watermelon: ಕಲ್ಲಂಗಡಿ ಖರೀದಿಸುವಾಗ ಎಚ್ಚರಿಕೆ

(Watermelon:) ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಕೆಂಪು ಕೆಂಪಾದ, ರಸಭರಿತ ಕಲ್ಲಂಗಡಿ ಹಣ್ಣುಗಳ ರಾಶಿ ಕಾಣಿಸಿಕೊಳ್ಳುತ್ತದೆ. ಬಿಸಿಲಿನ ಬೇಗೆಗೆ ತಂಪು ನೀಡುವ ಈ ಹಣ್ಣು ದೇಹಕ್ಕೆ ತಕ್ಷಣದ ಶಕ್ತಿ ಮತ್ತು ಚೈತನ್ಯ ನೀಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಕಲ್ಲಂಗಡಿ ಹಣ್ಣುಗಳು ನೈಸರ್ಗಿಕವಾಗಿ ಸಿಗುವುದಿಲ್ಲ. ಕೆಲವೆಡೆ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಮಾಡಲಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ ರಾಸಾಯನಿಕ ಬಳಸಿ ಮಾಡಿರುವ ಕಲ್ಲಂಗಡಿ ಸೇವನೆಯಿಂದ ವಾಂತಿ, ಭೇದಿ ಸೇರಿದಂತೆ ಫುಡ್ ಪಾಯಿಸನಿಂಗ್ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕಲ್ಲಂಗಡಿ ಖರೀದಿಸುವಾಗ ಕೆಲವು ಸರಳ ಲಕ್ಷಣಗಳನ್ನು ಗಮನಿಸುವುದು ಅಗತ್ಯ.


ನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ರಿಲೀಫ್; ಏನದು, ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಕಲ್ಲಂಗಡಿ ಹಣ್ಣು ಖರೀದಿಸುವಾಗ ಗಮನಿಸಬೇಕಾದ ಅಂಶಗಳು:

ಗಾತ್ರ ಮತ್ತು ಹೊಳಪು ಪರಿಶೀಲನೆ:
ತುಂಬಾ ಅಸಹಜವಾಗಿ ದೊಡ್ಡದಾಗಿರುವ ಅಥವಾ ಅತಿಯಾದ ಹೊಳಪು ಹೊಂದಿರುವ ಹಣ್ಣುಗಳನ್ನು ಖರೀದಿಸಬಾರದು. ನೈಸರ್ಗಿಕವಾಗಿ ಬೆಳೆದ ಕಲ್ಲಂಗಡಿ ಹಣ್ಣುಗಳು ಸಾಮಾನ್ಯವಾಗಿ ಮಧ್ಯಮ ಗಾತ್ರದಲ್ಲಿದ್ದು, ಅವುಗಳ ಮೇಲೆ ಸಹಜವಾದ ಗೆರೆಗಳು ಅಥವಾ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

‘ಫೀಲ್ಡ್ ಸ್ಪಾಟ್’ ಪರೀಕ್ಷೆ:
ಹಣ್ಣಿನ ಒಂದು ಬದಿಯಲ್ಲಿ ಹಳದಿ ಅಥವಾ ಕ್ರೀಮ್ ಬಣ್ಣದ ಮಚ್ಚೆ ಕಂಡುಬಂದರೆ ಅದನ್ನು ‘ಫೀಲ್ಡ್ ಸ್ಪಾಟ್’ ಎಂದು ಕರೆಯಲಾಗುತ್ತದೆ. ಹಣ್ಣು ನೆಲದ ಮೇಲೆ ಬಿದ್ದು ನೈಸರ್ಗಿಕವಾಗಿ ಮಾಗಿದಾಗ ಈ ಗುರುತು ಮೂಡುತ್ತದೆ. ಮಚ್ಚೆ ಗಾಢ ಹಳದಿ ಬಣ್ಣದಲ್ಲಿದ್ದರೆ ಹಣ್ಣು ಸಿಹಿಯಾಗಿರುತ್ತದೆ.

ಶಬ್ದದ ಮೂಲಕ ಪರೀಕ್ಷೆ:
ಕಲ್ಲಂಗಡಿ ಹಣ್ಣನ್ನು ಕೈಯಿಂದ ತಟ್ಟಿದಾಗ ಒಳಗಿನಿಂದ ಗಂಭೀರವಾದ ‘ಡಬ್-ಡಬ್’ ಶಬ್ದ ಬಂದರೆ ಅದು ಚೆನ್ನಾಗಿ ಮಾಗಿದ ಹಣ್ಣು ಎಂದು ತಿಳಿಯಬಹುದು. ಒಂದು ವೇಳೆ ಮಂದವಾದ ಶಬ್ದ ಬಂದರೆ ಹಣ್ಣು ಕಚ್ಚಾಗಿರುವ ಸಾಧ್ಯತೆ ಇದೆ.


ನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮೊಬೈಲ್‌ ನಲ್ಲೇ ಸಿಗಲಿದೆ ಹಳೆಯ ಪಹಣಿ


ತೂಕ ಗಮನಿಸಿ:
ಒಂದೇ ಗಾತ್ರದ ಎರಡು ಹಣ್ಣುಗಳನ್ನು ಹೋಲಿಸಿದಾಗ ಹೆಚ್ಚು ತೂಕವಿರುವ ಹಣ್ಣು ಆಯ್ಕೆ ಮಾಡುವುದು ಉತ್ತಮ. ಹೆಚ್ಚಿನ ತೂಕ ಇದ್ದರೆ ಅದರಲ್ಲಿ ನೀರಿನಂಶ ಮತ್ತು ಸಿಹಿ ಹೆಚ್ಚು ಇರುವ ಸಾಧ್ಯತೆ ಇದೆ.

ಒಣಗಿದ ತೊಟ್ಟು:
ಹಣ್ಣಿನ ತೊಟ್ಟು ಸಂಪೂರ್ಣವಾಗಿ ಒಣಗಿ ಕಂದು ಬಣ್ಣಕ್ಕೆ ತಿರುಗಿದ್ದರೆ ಅದು ಗಿಡದಲ್ಲೇ ನೈಸರ್ಗಿಕವಾಗಿ ಮಾಗಿದ ಹಣ್ಣು. ತೊಟ್ಟು ಇನ್ನೂ ಹಸಿರಾಗಿದ್ದರೆ ಹಣ್ಣಾಗುವ ಮುನ್ನವೇ ಕೀಳಲಾಗಿದೆ ಎಂದು ಅರ್ಥ.

ಹೀಗಾಗಿ ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಖರೀದಿಸುವಾಗ ಮೇಲಿನ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಕರ ಮತ್ತು ನೈಸರ್ಗಿಕ ಹಣ್ಣನ್ನು ಆಯ್ಕೆ ಮಾಡುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ.


ನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ; ಗ್ರಾಹಕರಿಗೆ ಬಿಗ್ ಶಾಕ

 


Watermelon: ಕಲ್ಲಂಗಡಿ ಖರೀದಿಸುವಾಗ ಎಚ್ಚರಿಕೆ
Watermelon: ಕಲ್ಲಂಗಡಿ ಖರೀದಿಸುವಾಗ ಎಚ್ಚರಿಕೆ

ಇತ್ತೀಚಿನ ಜನಪ್ರಿಯ ಸುದ್ದಿಗಳು (Watermelon:)

    1. ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
    2. ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
    3. ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
    4. ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
    5. ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್‌
    6. ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
    7. ಯುವಕರಿಗೆ ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
    8. ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    9. 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
    10. ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್‌ ಹುದ್ದೆಗೆ ಅರ್ಜಿ ಆಹ್ವಾನ