Red Ant chutney: ಕೆಂಪಿರುವೆ ಚಟ್ನಿ ಎಷ್ಟು ಒಳ್ಳೇದು ನಿಮಗೊತ್ತಾ?

(Red Ant chutney) ಪ್ರಪಂಚದಲ್ಲಿ ಆಯಾ ಪ್ರದೇಶದ ಆಹಾರ ಪದ್ಧತಿ ಇದೆ. ಹವಾಮಾನಕ್ಕನುಗುಣವಾಗಿ ಆಹಾರ ಪದ್ಧತಿಯೂ ರೂಪಿಸಲ್ಪಟ್ಟಿರುತ್ತದೆ. ಅದೇ ರೀತಿ ಮಲೆನಾಡಿನಲ್ಲಿ ಕೆಂಪು ಇರುವೆ ಚಟ್ನಿ ಎಂದರೆ ಬಾಯಲ್ಲಿ ನೀರುಣಿಸುವಂತೆ ಖಡಕ್ ಚಟ್ನಿ ಮಾಡಿ ಆಸ್ವಾದಿಸುತ್ತಾರೆ.

ಇದನ್ನೂ ಓದಿ; ಗುಪ್ತಚರ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; 660 ಹುದ್ದೆಗಳಿಗೆ ಅರ್ಜಿ ಆಹ್ವಾನ; sslc ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

ಈ ಕೆಂಪು ಇರುವೆ ಚಟ್ನಿ ಆರೋಗ್ಯಕ್ಕೂ ತುಂಬಾ ಬೆಸ್ಟ್ ಅಂತೆ. ಚರ್ಮದ ಮೇಲೆ ತೀಕ್ಷ್ಣವಾದ ನೋವು ಮತ್ತು ಕೆಂಪು ಉಬ್ಬುಗಳನ್ನು ಉಂಟುಮಾಡುವ ಸಾಮರ್ಥ್ಯವಿರುವ ಕೆಂಪು ಇರುವೆಗಳಂದರೆ ನಿಮಗೆ ಭಯ ಇದೆಯಾ? ಇದರಿಂದ ಜನರು ಸಾಮಾನ್ಯವಾಗಿ ಅಂತರವನ್ನು ಕಾಯ್ದುಕೊಳ್ಳುತ್ತಾರೆ ಅಲ್ವೇ. ಆದರೆ ಮಲೆನಾಡಿನಲ್ಲಿ ಕೆಂಪು ಇರುವೆಗಳೆಂದರೆ ಎಲ್ಲಿದ್ದಾವೆ ಅಂತಾ ಕೇಳ್ತಾರೆ.

ಇದನ್ನೂ ಓದಿ; ಬೇರೊಬ್ಬರ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರು ಪಿಎಂ ಕಿಸಾನ್‌ ಹಣ ಪಡೆಯಬಹುದೇ? ; ಈ ಯೋಜನೆಯ ಲಾಭ ಯಾರು ಪಡೆಯಬಹುದು!, ಇಲ್ಲಿದೆ ಮಾಹಿತಿ

ಆರೋಗ್ಯಕ್ಕೆ ಒಳ್ಳೆಯದು ಈ ಕೆಂಪು ಇರುವೆ ಚಟ್ನಿ:
ಕೆಂಪು ಇರುವೆ ಚಟ್ನಿಯಲ್ಲಿ ಫಾರ್ಮಿಕ್ ಆಯಸಿಡ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಜಿಂಕ್ ಸೇರಿದಂತೆ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೆ ಕಫ, ನೆಗಡಿ, ಉಸಿರಾಟ ಸಮಸ್ಯೆ ಮುಂತಾದ ರೋಗಗಳಿಗೆ ಉತ್ತಮ ಔಷಧಿ ಎನ್ನಲಾಗಿದೆ. ಹೀಗಾಗಿ ಪರಿಣಾಮಕಾರಿ ಮದ್ದು ಎನ್ನುವುದು ಕೆಲ ಸಂಶೋಧನೆಗಳು ಹೇಳಿದ್ದು, ಕೆಂಪು ಇರುವೆ ಚಟ್ನಿಗೆ ಇದೀಗ ಭಾರಿ ಮಹತ್ವ ಬಂದಿದೆ.

ಇದನ್ನೂ ಓದಿ; ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಕಮ್ಯುನಿಕೇಶನ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಚಳಿಗಾಲದಲ್ಲಿ ಗೂಡು ಕಟ್ಟುವ ಕೆಂಪು ಇರುವೆ, ಬೇರೆ ಸಮಯದಲ್ಲಿ ಗೂಡು ಕಟ್ಟಲ್ಲ. ಚಳಿಗಾಲದಲ್ಲಿ ಮಾತ್ರ ಗೂಡನ್ನು ಕಟ್ಟಿ ಮೊಟ್ಟೆ ಮಾಡಿ ಮರಿಗಳಿಗೆ ಜನ್ಮ ಕೊಡುತ್ತವೆ. ಹಾಗಾಗಿ ಈ ಕೆಂಪು ಇರುವೆಗಳನ್ನು ಇದೇ ಸಮಯದಲ್ಲಿ ಜನರು ಶಿಕಾರಿ ಮಾಡುತ್ತಾರೆ.

ಇದನ್ನೂ ಓದಿ; ಈಗಷ್ಟೇ 18 ಆದವರಿಗೆ ಚುನಾವಣಾ ಆಯೋಗದಿಂದ ಬರ್ತ್​ಡೇ ಗಿಫ್ಟ್​​​; ಏನದು? ಇಲ್ಲಿದೆ ನೋಡಿ ಡಿಟೈಲ್ಸ್

ಹಾಗಾದರೆ ಈ ಚಗಳಿ ಚಟ್ನಿ ಮಾಡುವುದು ಹೇಗೆ?:
ಇರುವೆಗಳನ್ನು ಮನೆಗೆ ತಂದು ಆ ಪಾತ್ರೆಗೆ ಸ್ವಲ್ಪ ಶಾಕ ಕೊಟ್ಟು ಮತ್ತೊಮ್ಮೆ ಚಗಳಿಯನ್ನು ಸೊಪ್ಪು ಸದೆಯಿಂದ ಬೇರ್ಪಡಿಸುತ್ತಾರೆ. ಮತ್ತೊಂದು ಕಡೆ ಹಸಿ ಮೆಣಸಿನಕಾಯಿ ಅಥವಾ ಜೀರಿಗೆ ಮೆಣಸಿನಕಾಯಿ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹುರಿದುಕೊಂಡು ಚಗಳಿ ಜೊತೆ ಹಾಕಿ ರುಬ್ಬುವ ಕಲ್ಲಿನಲ್ಲಿ ಕಡೆಯುತ್ತಾರೆ. ಈ ವೇಳೆ ಅರಿಶಿನ ಮತ್ತು ಉಪ್ಪಿನ ಪುಡಿಯನ್ನು ಕೂಡ ಮಿಶ್ರಣ ಮಾಡಿ ಚೆನ್ನಾಗಿ ನುಣ್ಣಗೆ ಆಗುವ ತನಕ ಕಲ್ಲಿನಲ್ಲಿ ಕಡೆಯಲಾಗುತ್ತದೆ. ಚಗಳಿಯಲ್ಲಿ ಹುಳಿ ಅಂಶ ಇರುವುದರಿಂದ ಯಾವುದೇ ಹುಳಿ ಪದಾರ್ಥಗಳನ್ನು ಚಟ್ನಿಗೆ ಬಳಸುವುದಿಲ್ಲ. ಚೆನ್ನಾಗಿ ರುಬ್ಬುವ ಕಲ್ಲಿನಲ್ಲಿ ಕಡೆದ ಬಳಿಕ ರುಚಿ ರುಚಿಯಾದ ಚಗಳಿ ಚಟ್ನಿ ಸಿದ್ಧವಾಗುತ್ತದೆ.

Red Ant chutney: ಕೆಂಪಿರುವೆ ಚಟ್ನಿ ಎಷ್ಟು ಒಳ್ಳೇದು ನಿಮಗೊತ್ತಾ?
Red Ant chutney: ಕೆಂಪಿರುವೆ ಚಟ್ನಿ ಎಷ್ಟು ಒಳ್ಳೇದು ನಿಮಗೊತ್ತಾ?

ಇದನ್ನೂ ಓದಿ; ದ್ವೀತಿಯ ಪಿಯುಸಿ ಫಲಿತಾಂಶ;ಮರು ಮೌಲ್ಯಮಾಪನ, ಮರು ಎಣಿಕೆಗೆ ದಿನಾಂಕ ಫಿಕ್ಸ್; ಅರ್ಜಿ ಸಲ್ಲಿಸುವುದು ಹೇಗೆ

ಇನ್ನು ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಚಗಳಿ ಚಟ್ನಿ ಎಂದರೆ ಮೂಗು ಮರಿಯುತ್ತಾರೆ. ಆದರೆ ಮಲೆನಾಡಿನ ಬಹುತೇಕರಿಗೆ ಚಗಳಿ ಚಟ್ನಿ ಅಂದ್ರೆ ಬಹಳ ಅಚ್ಚುಮೆಚ್ಚು. ಚಗಳಿ ಚಟ್ನಿ ತಿಂದರೆ ಒಳ್ಳೆಯದು ಎನ್ನುವ ವಿಚಾರ ಮಲೆನಾಡಿಗರಿಗೆ ತುಂಬಾ ಹಿಂದಿನಿಂದಲೇ ಗೊತ್ತಿರುವುದರಿಂದ ಚಗಳಿ ಅಥವಾ ಕೆಂಪು ಇರುವೆ ಮೇಲಿನ ಪ್ರೀತಿ ಇಂದಿಗೂ ಕೂಡ ಕಡಿಮೆಯಾಗಿಲ್ಲ.

ಇದನ್ನೂ ಓದಿ; ಕಾಫಿ ಬೋರ್ಡ್​​ನಲ್ಲಿ ಜಾಬ್ ಆಫರ್; ಎಲ್ಲಿ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್