Election: ಚುನಾವಣಾ ಆಯೋಗದಿಂದ ಬರ್ತ್​ಡೇ ಗಿಫ್ಟ್​​​

(Election) ಚುನಾವಣಾ ಆಯೋಗದಿಂದ ಈಗಷ್ಟೇ 18 ವರ್ಷ ಆಗಿರುವವರಿಗೆ ಸಿಹಿ ಸುದ್ದಿವೊಂದನ್ನು ನೀಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (loka sabha election 2024) 2006 ರ ಜನವರಿ 1 ಮತ್ತು ಮಾರ್ಚ್ 31 ರ ನಡುವೆ ಜನಿಸಿದವರಿಗೂ ಮತದಾನಕ್ಕೆ ಅವಕಾಶ (Voters List) ನೀಡಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಇದನ್ನೂ ಓದಿ; ಈ ದಿನ ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನ; ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್

ಈ ವರ್ಷ 18 ತುಂಬಿದ 70,000 ಮಂದಿ ಲೋಕಸಭೆ ಚುವಾಣೆಯಲ್ಲಿ ಮತದಾನ ಮಾಡಲಿದ್ದಾರೆ. ಕೊನೇ ಕ್ಷಣದ ಪ್ರಯತ್ನದಲ್ಲಿ ಇವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ಯುವ ಮತದಾರರು ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇದನ್ನೂ ಓದಿ; ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಇ-ಶ್ರಮ ಕಾರ್ಡ್‌; ಕೆಲಸದ ಭದ್ರತೆ ಸೇರಿದಂತೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ಕಾನೂನಿನಲ್ಲಿ ಏನಿದೆ?
ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರವೂ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ‘ಫಾರ್ಮ್ 6’ರ ಅಡಿಯಲ್ಲಿ ಮುಂಗಡ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಕುರಿತು ಮೊದಲ ಬಾರಿಗೆ ಮಾರ್ಚ್ 31 ರಂದು ವರದಿ ಮಾಡಿದಾಗ, ಸುಮಾರು 50,000 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಇದನ್ನೂ ಓದಿ; ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್

ಒಟ್ಟಾರೆಯಾಗಿ, ರಾಜ್ಯದಲ್ಲಿ ಜನವರಿಯಿಂದ 10 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಪೈಕಿ 5.9 ಲಕ್ಷ ಮಂದಿ ಏಪ್ರಿಲ್ 26 ರಂದ ಮತದಾನ ನಡೆಯುವ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ; pm ಕಿಸಾನ್ ಯೋಜನೆಯ ನೋಂದಣಿ ಹೇಗೆ ಮಾಡೋದು..; ಸಿಂಪಲ್ ಸ್ಟೆಪ್ಸ್ ಇಲ್ಲಿವೆ!

Lok sabha Election: ಚುನಾವಣಾ ಆಯೋಗದಿಂದ ಬರ್ತ್​ಡೇ ಗಿಫ್ಟ್​​​
Lok sabha Election: ಚುನಾವಣಾ ಆಯೋಗದಿಂದ ಬರ್ತ್​ಡೇ ಗಿಫ್ಟ್​​​

ಇದನ್ನೂ ಓದಿ; ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದ್ಯಾ?; ಈ ರೀತಿ ಚೆಕ್ ಮಾಡಿ