Second Puc Revaluation: ದ್ವೀತಿಯ ಪಿಯುಸಿ ಮರು ಮೌಲ್ಯಮಾಪನ

(Second Puc Revaluation) ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶೇ.81.15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ತಾವು ನೀರಿಕ್ಷಿಸಿದ್ದಷ್ಟು ಅಂಕ ಬಂದಿರದಿದ್ದರೆ, ತಮ್ಮ ಉತ್ತರ ಪತ್ರಿಕೆ ಪ್ರತಿ ಪಡೆಯಲು, ಡೌನ್ ಲೋಡ್ ಮಾಡಿಕೊಳ್ಳಲು, ಮರು ಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಏ.20 ರವರೆಗೆ ಮೌಲ್ಯಮಾಪನಾ ಮಂಡಳಿ ಕಾಲಾವಕಾಶ ನೀಡಿದೆ.

ಇದನ್ನೂ ಓದಿ; ಈ ದಿನ ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನ; ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್

ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕ:
* ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 10 ರಿಂದ ಏಪ್ರಿಲ್ 16 ರವರೆಗೆ ಅವಕಾಶ.
* ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ ಲೋಡ್ ಮಾಡಿಕೊಳ್ಳಲು ಏಪ್ರಿಲ್ 14 ರಿಂದ ಏಪ್ರಿಲ್ 19 ರವರೆಗೆ ಅವಕಾಶ
* ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14 ರಿಂದ ಏಪ್ರಿಲ್ 20 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ; ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಇ-ಶ್ರಮ ಕಾರ್ಡ್‌; ಕೆಲಸದ ಭದ್ರತೆ ಸೇರಿದಂತೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ಶುಲ್ಕಗಳ ವಿವರ:
* ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು (ಪ್ರತಿ ವಿಷಯಕ್ಕೆ): 530/-
* ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು (ಪ್ರತಿ ವಿಷಯಕ್ಕೆ): 1670/-
* ಅಂಕಗಳ ಮರು ಎಣಿಕೆಗೆ: ಯಾವುದೇ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ; ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್

ಉತ್ತರ ಪತ್ರಿಕೆಗಳ ಸ್ಕ್ಯಾನ್ಸ್ ಪ್ರತಿ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ
* https://kseab.karnataka.gov.in (HOME PAGE) ವೆಬ್ ಸೈಟ್ ಗೆ ಭೇಟಿ ನೀಡಿ.
* ನಂತರ Application for Scanned copies, Re- valuation/Re-totalling ಎಂದಿರುತ್ತದೆ ಅದನ್ನು ಕ್ಲಿಕ್ ಮಾಡಿದರೆ Calender of Events ಪುಟ ತೆರೆಯುತ್ತದೆ.
* ಇದರಲ್ಲಿ How to Apply ಅನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳಿ.
* 2024ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ನೋಂದಣಿ ಸಂಖ್ಯೆಯನ್ನು ಪ್ರವೇಶ ಪತ್ರದಲ್ಲಿರುವಂತೆ ನಮೂದಿಸಿ. ನಿಮ್ಮ ಮಾಹಿತಿ ತೆರೆಯುತ್ತದೆ.
* Scanned copy ಪಡೆಯಲು ಇಚ್ಛಿಸಿದ ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯ/ಪೋಷಕರ ನಿಖರವಾದ ಮೊಬೈಲ್ ಸಂಖ್ಯೆ, ತಮ್ಮ ಖಾಸಗಿ ಇಮೇಲ್ ಐಡಿ ಹಾಗೂ ಸ್ವ-ವಿಳಾಸವನ್ನು ಮಾತ್ರ ನಮೂದಿಸಬೇಕು.
* ನಂತರ Submit ಬಟನ್ ಕ್ಲಿಕ್ ಮಾಡಿದ ಕೂಡಲೇ ಚಲನ್ ಸಂಖ್ಯೆಯು Auto-Generate ಆಗುತ್ತದೆ.
* “Make payment” ಬಟನ್ ಕ್ಲಿಕ್ ಮಾಡಿದ ನಂತರ Cash payment ಅಥವಾ Online payment ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ; ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದ್ಯಾ?; ಈ ರೀತಿ ಚೆಕ್ ಮಾಡಿ

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?:
* ಅಧಿಕೃತ ವೆಬ್ ಸೈಟ್ kseab.karnataka.gov.in ಗೆ ಭೇಟಿ ನೀಡಿ
* ಸ್ಕ್ಯಾನ್ ಮಾಡಿದ ಪ್ರತಿಗಳ ಅರ್ಜಿ ನಮೂನೆಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ
* ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ
* ಫಾರ್ಮ್ ಜೊತೆಗೆ ಅರ್ಜಿ ಶುಲ್ಕವನ್ನು ಸಲ್ಲಿಸಿ
* ಭವಿಷ್ಯದ ಉಲ್ಲೇಖಕ್ಕಾಗಿ ಸ್ವೀಕೃತಿ ಫಾರ್ಮ್ ಡೌನ್ ಲೋಡ್ ಮಾಡಿ

ಇದನ್ನೂ ಓದಿ; ಭೂ ಮಾಪಕರ ಹುದ್ದೆಗೆ ಅರ್ಜಿ ಆಹ್ವಾನ; ಬರೋಬ್ಬರಿ 364 ಹುದ್ದೆಗೆ ನೇಮಕ

ಮರು ಎಣಿಕೆಗಾಗಿ (Re-totalling) ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು:-
* ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ಸ್ ಪ್ರತಿಯನ್ನು ಪಡೆದುಕೊಂಡು ಪರಿಶೀಲಿಸಿದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಮಾತ್ರ ಮರುಎಣಿಕೆಗಾಗಿ (Re-totaling) ಅರ್ಜಿ ಸಲ್ಲಿಸಬೇಕು.
* ಮರುಎಣಿಕೆಗೆ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
* ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಅನುಸರಿಸಿದ ಕ್ರಮವನ್ನೇ ಮರುಮೌಲ್ಯಮಾಪನಕ್ಕೂ ಅನುಸರಿಸುವುದು. ಆದರೆ ಮರುಎಣಿಕೆಗೆ ಚಲನ್ ಡೌನ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ. ಮುಂದಿನ ಉಪಯೋಗಕ್ಕಾಗಿ ಮತ್ತು ವಿದ್ಯಾರ್ಥಿಯ ಮಾಹಿತಿಗಾಗಿ ಚಲನ್ ಸಂಖ್ಯೆಯನ್ನು ವಿದ್ಯಾರ್ಥಿಯು ಒದಗಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುವುದು.
* ಮರುಎಣಿಕೆ ಫಲಿತಾಂಶವನ್ನು ಮಂಡಲಿಯ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
* ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಮರುಎಣಿಕೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ; ಜಿಲ್ಲಾವಾರು ಪಿಯುಸಿ ರಿಸಲ್ಟ್ ನೋಡುವುದ್ಹೇಗೆ? ಇಲ್ಲಿದೆ ಸಂಪೂರ್ಣ ವಿವರ

Second Puc Revaluation: ದ್ವೀತಿಯ ಪಿಯುಸಿ ಮರು ಮೌಲ್ಯಮಾಪನ
Second Puc Revaluation: ದ್ವೀತಿಯ ಪಿಯುಸಿ ಮರು ಮೌಲ್ಯಮಾಪನ