(Operation Sindoor:) ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ (Indian Army) ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ಆರಂಭಿಸಿದೆ. ಆ ಮೂಲಕ ಉಗ್ರ ಪೋಷಕ ಪಾಕಿಸ್ತಾನಕ್ಕೆ ಸರಿಯಾಗಿ ಬುದ್ಧಿ ಕಲಿಸಲು ಭಾರತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ: ಗಜಕೇಸರಿ ರಾಜಯೋಗದಿಂದ ಈ 5 ರಾಶಿಗೆ ಭಾರಿ ಅದೃಷ್ಟ.!
ಭಯೋತ್ಪಾದಕ ಶಿಬಿರಗಳ ಮೇಲೆ ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಶುರುಮಾಡಿದೆ. ಪಾಕ್ ಮೇಲೆ ದಾಳಿಯನ್ನು ‘ಆಪರೇಷನ್ ಸಿಂಧೂರ್’ ಎಂದು ಕರೆಯಲಾಗಿದೆ. ಪಾಕಿಸ್ತಾನದ 9 ಪ್ರದೇಶದಲ್ಲಿರುವ ಉಗ್ರರ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಭಾರತದ ರಕ್ಷಣಾ ಸಚಿವಾಲಯ ಈ ಕುರಿತು ವಿವರಣೆ ನೀಡಿದೆ.
(Operation Sindoor:) ಎಲ್ಲೆಲ್ಲಿ ದಾಳಿ..?
ಒಟ್ಟು 9 ಕಡೆಗಳಲ್ಲಿ ಭಾರತೀಯ ಸೇನೆ ಏರ್ಸ್ಟ್ರೈಕ್ ಮಾಡಿದೆ. ಮುರೀದ್ಕೆ, ಮುಜಾಫರ್ಬಾದ್, ಬಹಾವಲ್ಪುರ್, ಕೋಟ್ಲಿ, ಚಾಕ್ಅಮ್ರು, ಗುಲ್ಪುರ್, ಭಿಂಬರ್ ಮೇಲೆ ದಾಳಿ ಮಾಡಲಾಗಿದೆ. ಭಾರತದ ದಾಳಿ ಹಿನ್ನೆಲೆಯಲ್ಲಿ ಲಾಹೋರ್, ಸಿಯಾಲ್ಕೋಟ್ ಏರ್ಪೋರ್ಟ್ ಬಂದ್ ಆಗಿದೆ.
ಇದನ್ನೂ ಓದಿ: ಇಂಡಿಯನ್ ಆಯಿಲ್ ಕಾರ್ಪೋರೇಷನ್ʼನಲ್ಲಿ 1770 ಹುದ್ದೆಗಳ ನೇಮಕ; ಐಟಿಐ, ಡಿಪ್ಲೊಮ, ಡಿಗ್ರಿ ಪಾಸಾದವರಿಗೆ ಜಾಬ್
ಪಹಲ್ಗಾಮ್ 26 ಜನರ ನರಮೇಧಕ್ಕೆ ಭಾರತ ಪ್ರತೀಕಾರ:
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ ಒಟ್ಟು 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತವು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ- ತೈಯ್ಬಾ (ಎಲ್‌ಇಟಿ)ಗೆ ಸಂಬಂಧವಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಎಂಬ ಗುಂಪು ಕಾರಣ ಎಂದು ಹೇಳಿತ್ತು. ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭಾರತ ಹೇಳಿತ್ತು. ಅಂತೆಯೇ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಆರಂಭಿಸಿದೆ.
(Operation Sindoor:) 1971 ರ ಯುದ್ಧದ ಬಳಿಕ ಮೊದಲ ಬಾರಿಗೆ ಮೂರೂ ಪಡೆಗಳ ಜಂಟಿ ಕಾರ್ಯಾಚರಣೆ
1971 ರಲ್ಲಿ ನಡೆದ ಇಂಡಿಯಾ-ಪಾಕಿಸ್ತಾನ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಆಪರೇಷನ್ ಸಿಂಧೂರ್ ನಲ್ಲಿ ಭಾರತದ ಸೇನೆ, ವಾಯುಪಡೆ ಹಾಗೂ ನೌಕಾದಳ ಸೇರಿ ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನೆಲೆಗಳನ್ನು ಧ್ವಂಸ ಮಾಡಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರೇ ಗಮನಿಸಿ; ಸ್ಯಾಲರಿ ಪ್ಯಾಕೇಜ್ ಕುರಿತು ಮುಖ್ಯ ಮಾಹಿತಿ!
ಏನೆಲ್ಲ ಆಗಿದೆ?:
* ಭಾರತೀಯ ವಾಯುಪಡೆಯು ರಫೇಲ್ನ ಸ್ಕಾಲ್ಪ್ ಮಿಸೈಲ್ ಬಳಸಿ ದಾಳಿ
* ಜೊತೆಗೆ ಬ್ರಹ್ಮೋಸ್ ಮಿಸೈಲ್ ಮೂಲಕವೂ ಉಗ್ರರ ನೆಲೆಗಳ ಮೇಲೆ ಅಟ್ಯಾಕ್
* ಪಾಕ್ ಟೆರರ್ ಕಂಟ್ರೋಲ್ ರೂಮುಗಳನ್ನೇ ಧ್ವಂಸ ಮಾಡಿದ ಭಾರತ
* ಪಾಕ್ ಐಎಸ್‌ಐ-ಟೆರರ್ ಕಂಟ್ರೋಲ್ ರೂಮ್ ಕೂಡ ಧ್ವಂಸ
* ಹ್ಯಾಮರ್ ಬಾಂಬ್ ಬಳಸಿ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ
* ಪಾಕ್ಗೆ ಚೀನಾ ನೀಡಿದ್ದ JF -17 ಯುದ್ಧ ವಿಮಾನ ಉಡೀಸ್
* ಸುಮಾರು 70ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರುವ ಶಂಕೆ
* ಉಗ್ರ ಹಫೀಜ್ ಸಯ್ಯದ್ ಅಡುಗುತಾಣಗಳು ಧ್ವಂಸ
* ವಿಮಾನಗಳ ಹಾರಾಟ ರದ್ದು ಮಾಡಿದ ಪಾಕ್, ಆತಂಕದಲ್ಲಿ ಉಗ್ರರಸ್ಥಾನ

ಇತ್ತೀಚಿನ ಜನಪ್ರಿಯ ಸುದ್ದಿಗಳು (Operation Sindoor:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





