Stock Market News: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!

(Stock Market News:) ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!

(Stock Market News:) ಆಲದ ಮರದ ನೆರಳೇ ಭಾರತದ ಮೊದಲ ‘ಸ್ಟಾಕ್ ಎಕ್ಸ್‌ಚೇಂಜ್’ ಆಫೀಸ್ !

ಇಂದಿನ ಗಗನಚುಂಬಿ ಸ್ಟಾಕ್ ಬ್ರೋಕಿಂಗ್ ಕಚೇರಿಗಳು ಮತ್ತು ಡಿಜಿಟಲ್ ಟ್ರೇಡಿಂಗ್‌ ಪ್ಲಾಟ್‌ಫಾರ್ಮ್‌ಗಳ ಹಿಂದಿನ ಕಥೆ ತುಂಬಾ ವಿಶೇಷವಾದದ್ದು . 1850ರ ದಶಕದಲ್ಲಿ ಮುಂಬೈನ ಹಾರ್ನಿಮನ್ ಸರ್ಕಲ್ ಹತ್ತಿರದ ಆಲದ ಮರದ ಕೆಳಗೆ 22 ಮಂದಿ ಬ್ರೋಕರ್‌ಗಳು ಒಟ್ಟುಗೂಡಿ ಆರಂಭಿಸಿದ ವ್ಯವಹಾರ, ಭಾರತದ ಷೇರು ಮಾರುಕಟ್ಟೆಯ ಮೊದಲ ರೂಪ. ಸರ್ಕಾರಿ ಬಾಂಡ್‌ಗಳು, ಹತ್ತಿ ಮತ್ತು ಸಣ್ಣ ಕಂಪನಿಗಳ ಹೂಡಿಕೆಗಳ ಮೂಲಕ ಪ್ರಾರಂಭವಾದ ಈ ವ್ಯವಹಾರ, ನಂತರ ಅದ್ಭುತ ವೇಗದಲ್ಲಿ ವಿಸ್ತರಿಸುತ್ತಾ ಭಾರತೀಯ ಆರ್ಥಿಕತೆಯ ಹೃದಯವಾಗಿ ಬದಲಾಯಿತು.

ಹತ್ತಿ ದರ ಏರಿಳಿತವೇ ಷೇರು ಮಾರುಕಟ್ಟೆಗೆ ಮೊದಲ ವೇಗ!

1860ರ ದಶಕದಲ್ಲಿ ಅಮೆರಿಕಾದ ಗೃಹಯುದ್ಧದಿಂದ ಹತ್ತಿಯ ಕೊರತೆ ಉಂಟಾಗಿ ಭಾರತೀಯ ಹತ್ತಿಗೆ ಜಗತ್ತಿನಲ್ಲಿ ಅಪಾರ ಬೇಡಿಕೆ ಸೃಷ್ಟಿಯಾಯಿತು. ಈ ‘Cotton Boom’ ಬ್ರೋಕರ್ ಗಳಿಗೆ ಅಸಾಧಾರಣ ಲಾಭವನ್ನು ನೀಡಿತು. ಇದರಿಂದ ಮಾರುಕಟ್ಟೆಗೆ ಹೊಸ ಹೂಡಿಕೆದಾರರು ಸೇರ್ಪಡೆಯಾಗಲು ಆರಂಭಿಸಿದರು. ವ್ಯವಹಾರ ಹೆಚ್ಚಿದಂತೆ ಬ್ರೋಕರ್‌ಗಳಿಗೆ ಸರಿಯಾದ ಕಚೇರಿ ಮತ್ತು ನಿಯಮಗಳು ಬೇಕೆಂಬ ಅರಿವು ಮೂಡಿತು. ಇದರ ಫಲವಾಗಿ 1875ರಲ್ಲಿ Native Share & Stock Brokers Association ಸ್ಥಾಪಿತವಾಯಿತು, ಅದು ಇಂದಿನ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (BSE) ಆಗಿ ಬೆಳೆಯಿತು.


ನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ


ಬ್ರಿಟಿಷರ ಆಡಳಿತದ ಕಪಿ ಮುಷ್ಠಿಯಿಂದ ಹೊರಬಂದ ಸ್ಟಾಕ್ ಮಾರ್ಕೆಟ್ – ಸ್ವಾತಂತ್ರ್ಯದ ನಂತರ ಬದಲಾಯ್ತು ಮಾರುಕಟ್ಟೆಯ ವೇಗ !

(Stock Market News:) ಬ್ರಿಟಿಷರ ಕಾಲದಲ್ಲಿ ಕಂಪನಿ ಸ್ಥಾಪನೆ ಮತ್ತು ಹೂಡಿಕೆ ನಿಯಮಗಳು ಕಟ್ಟುನಿಟ್ಟಾಗಿದ್ದರೂ, ಮಾರುಕಟ್ಟೆಯ ಬೆಳವಣಿಗೆ ನಿಧಾನವಾಗಿತ್ತು. ಹೂಡಿಕೆ ಮಾಡಲು ಅವಕಾಶವಿದ್ದವರು ಕೇವಲ ಆಗರ್ಭ ಶ್ರೀಮಂತ ವ್ಯಾಪಾರಿಗಳು ಮತ್ತು ಏಜೆಂಟ್‌ಗಳಷ್ಟೇ. ಆದರೆ 1947ರಲ್ಲಿ ಭಾರತ ಸ್ವತಂತ್ರವಾದ ನಂತರ ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆಗಳು ವೇಗವಾಯಿತು. ಉಕ್ಕು, ಚಾಳಿ, ಇಂಧನ, ಬ್ಯಾಂಕುಗಳಂತಹ ಸಾರ್ವಜನಿಕ ವಲಯದ ಸಂಸ್ಥೆಗಳು ಹೂಡಿಕೆಗಾಗಿ ಮುಂದಾದಂತೆ ಸಾಮಾನ್ಯ ಜನರು ಸಹ ಷೇರು ಮಾರುಕಟ್ಟೆಯತ್ತ ಮುಖಮಾಡಲು ಆರಂಭಿಸಿದರು. ಇದೇ ಕಾಲದಲ್ಲಿ ಭಾರತದ ಮಾರುಕಟ್ಟೆ ಜನಪ್ರಿಯತೆಯನ್ನು ಗಳಿಸಲು ಆರಂಬಿಸಿತು.

ಹರಶದ್ ಮೇಹ್ತಾ ಸ್ಕ್ಯಾಂಡಲ್ —ಭಾರತೀಯ ಮಾರುಕಟ್ಟೆಗೆ ದೊಡ್ಡ ಪಾಠ!

1992ರಲ್ಲಿ ನಡೆದ ಹರಶದ್ ಮೇಹ್ತಾ ಸ್ಕ್ಯಾಂಡಲ್ ಬಹಿರಂಗವಾದಾಗ, ಮಾರುಕಟ್ಟೆಯಲ್ಲಿನ ನಿಯಂತ್ರಣದ ಕೊರತೆ ಗಂಭೀರ ಪರಿಣಾಮವನ್ನು ಭೀರಿತು. ಈ ಘಟನೆ ಮಾರುಕಟ್ಟೆ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಿದರೂ, ಇದೇ ಘಟನೆ ಭಾರತದ ಮಾರುಕಟ್ಟೆ ಸುಧಾರಣೆಗಳಿಗೆ ಹೆಜ್ಜೆಗಲ್ಲಾಯಿತು. ಸರ್ಕಾರ SEBIಯನ್ನು (Securities and Exchange Board of India) ಬಲಪಡಿಸಿ, ನಿಯಮಗಳನ್ನು ಕಠಿಣಗೊಳಿಸಿ, ಹೂಡಿಕೆದಾರರನ್ನು ರಕ್ಷಿಸುವ ಹೊಸ ವಿಧಾನಗಳನ್ನು ಜಾರಿಗೆ ತಂದಿತು. ಈ ಪಾರದರ್ಶಕತೆಯೇ ಮುಂದಿನ ಡಿಜಿಟಲ್ ಯುಗಕ್ಕೆ ಮಾರುಕಟ್ಟೆಯನ್ನು ಮತ್ತು ಹೂಡಿಕೆದಾರರನ್ನು ಸಿದ್ಧಗೊಳಿಸಿತು.


ನ್ನೂ ಓದಿ: ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ!


ಇಂಟರ್‌ನೆಟ್‌ ಯುಗಾರಂಭ —ರಸ್ತೆಬದಿಯಿಂದ ಅಂಗೈಗೆ ಬಂತು ಸ್ಟಾಕ್ ಮಾರ್ಕೆಟ್ !

2000ರ ನಂತರ ಇಂಟರ್‌ನೆಟ್‌, ಆನ್‌ಲೈನ್‌ ಟ್ರೇಡಿಂಗ್‌ ಮತ್ತು ಡಿಮ್ಯಾಟ್‌ ಖಾತೆಗಳ ಪರಿಚಯವು ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ಸೃಷ್ಟಿಸಿತು. NSE (National Stock Exchange) ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತಂದು, ಟ್ರೇಡಿಂಗ್‌ ಅನ್ನು ಕ್ಷಣದಲ್ಲಿ ನಡೆಸುವ ವೇಗ ನೀಡಿತು. ಇಂದು Zerodha, Groww, Upstox ಮೊದಲಾದ ಪ್ಲಾಟ್‌ಫಾರ್ಮ್‌ಗಳು ಲಕ್ಷಾಂತರ ಜನರನ್ನು ಹೂಡಿಕೆ ಜಗತ್ತಿಗೆ ತೆಗೆದುಕೊಂಡು ಬಂದಿವೆ. ಭಾರತದ ಸ್ಟಾಕ್ ಮಾರುಕಟ್ಟೆ ಈಗ ಏಷ್ಯಾ ಮತ್ತು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿ ಜಗತ್ತಿನ ಗಮನ ಸೆಳೆಯುತ್ತಿದೆ.

ರಸ್ತೆ ಬದಿಯ ಆಲದ ಮರದ ಕೆಳಗಿನಿಂದ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ ವ್ಯವಹಾರ ಇಂದು ಸರಿ ಸುಮಾರು 400 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಜಾಗತಿಕ ಶಕ್ತಿಯಾಗಿ ಬೆಳೆದಿದೆ . ಈ ಬೆಳವಣಿಗೆ ಕೇವಲ ಆರ್ಥಿಕ ಯಾತ್ರೆಯಲ್ಲ, ಇದು ಹೊಸ ಪೀಳಿಗೆಯ ಜನರ ಕನಸುಗಳನ್ನು ಕಟ್ಟುವ, ಉದ್ಯಮಗಳಿಗೆ ಬಲ ನೀಡುವ ಮತ್ತು ದೇಶದ ಪ್ರಗತಿಗೆ ದಿಕ್ಕು ತೋರಿಸುವ ಮಹತ್ವದ ಯಾನ ಎಂಬುದರಲ್ಲಿ ಎರಡು ಮಾತಿಲ್ಲ.

(Stock Market News:) ಷೇರು ಮಾರುಕಟ್ಟೆಯ ಕುರಿತ ಹೆಚ್ಚಿನ ಮಾಹಿತಿ, ಕಲಿಕೆ ಮತ್ತು ನುರಿತ ಹೂಡಿಕೆದಾರಿಂದ ಈ ಬಗೆಗಿನ ಇನ್ನಷ್ಟು ವಿಷಯಗಳನ್ನು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಉಚಿತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿರಿ.
https://chat.whatsapp.com/EPQ3IZ3QTsDJRHZWRsq7xa?mode=wwt

Stock Market News: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ - ಇಂದು 400 ಲಕ್ಷ ಕೋಟಿಯ ಮೌಲ್ಯ!
Stock Market News: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!

ಇತ್ತೀಚಿನ ಜನಪ್ರಿಯ ಸುದ್ದಿಗಳು (Stock Market News:) 

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ