Friday, June 9, 2023
Homeರಾಜಕೀಯಒಬ್ಬ ಶಾಸಕರ ಸಂಬಳವೆಷ್ಟು ಗೊತ್ತಾ? ಮಾಜಿ ಶಾಸಕರಿಗೂ ಸಂಬಳ ಸಿಗುತ್ತಾ?

ಒಬ್ಬ ಶಾಸಕರ ಸಂಬಳವೆಷ್ಟು ಗೊತ್ತಾ? ಮಾಜಿ ಶಾಸಕರಿಗೂ ಸಂಬಳ ಸಿಗುತ್ತಾ?

ನಾವೆಲ್ಲರೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ವಿಚಾರ ಯಾರಾದರೂ ಒಬ್ಬರು ಒಮ್ಮೆ ಶಾಸಕರಾದರೆ ಸಾಕು ಕೇವಲ ಅವರು ಮಾತ್ರವಲ್ಲ ಅವರ ಮಕ್ಕಳು ಅವರ ಮರಿ ಮೊಮ್ಮಕ್ಕಳು ಅಥವಾ ಅವರ ಇಡೀ ಕಾಂದಾನ ಎಷ್ಟೋ ವರ್ಷಗಳ ಕಾಲ ಕೂತು ತಿನ್ನುವಷ್ಟು ಬೇಕಾದಷ್ಟು ಹಣವನ್ನ ಮಾಡಿಕೊಂಡು ಬಿಡುತ್ತಾರೆ.

ಇದನ್ನೂ ಓದಿ; ಓವರ್ ಟೇಕ್ ಮಾಡುವಾಗ ಆಕ್ಸಿಡೆಂಟ್ ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಇದನ್ನೂ ಓದಿ; ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್

ಕೇವಲ ಅವರು ಮಾತ್ರವಲ್ಲ ಇಡೀ ಕುಟುಂಬವೇ ಐಷಾರಾಮಿ ಜೀವನವನ್ನು ಸಾಗಿಸುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಏಕೆಂದರೆ ಅಷ್ಟೊಂದು ಹಣ ಅಷ್ಟೊಂದು ಸಂಪತ್ತು ಅವರೆಲ್ಲರಿಗೂ ಕೂಡ ಬರುತ್ತದೆ ಕೇವಲ ಶಾಸಕರು ಮಾತ್ರವಲ್ಲ ಶಾಸಕರು ಸಚಿವರು ವಿಧಾನ ಸಭೆ ಸಚಿವರು ಅಥವಾ ಸ್ಪೀಕರಯಿಂದ ಹಿಡಿದು ಪ್ರತಿಯೊಬ್ಬರು ಕೂಡ ಇವರೆಲ್ಲರೂ ಬೇಕಾದಷ್ಟು ಹಣವನ್ನ ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ ಇವರೆಲ್ಲರಿಗೂ ಕೂಡ ಲಕ್ಷಾನುಗಟ್ಟಲೆ ಸಂಬಳ ಸಿಗುತ್ತದೆ ಕೇವಲ ಸಂಬಳ ಮಾತ್ರವಲ್ಲ ಬೇರೆ ಬೇರೆ ಭತ್ಯೆಗಳೆಲ್ಲವೂ ಕೂಡ ಇವರು ಪಡೆದುಕೊಳ್ಳುತ್ತಾರೆ ಅಷ್ಟು ಮಾತ್ರವಲ್ಲ ಇವರಿಗೆ ಬಹುತೇಕ ಎಲ್ಲವೂ ಉಚಿತ ಅವರಿಗೆ ಏನಾದರೂ ಸಮಸ್ಯೆ ಆಯ್ತು ಎಂದರೆ ಅಥವಾ ಆರೋಗ್ಯದಲ್ಲಿ ಏನಾದರೂ ಏರುಪೇರು ಆಯಿತು ಎಂದರೆ ಚಿಕಿತ್ಸೆ ಉಚಿತ ಅಥವಾ ಬಸ್ಸಿನಲ್ಲಿ ಓಡಾಡುವುದಾಗಿರಬಹುದು ಅಥವಾ ಬೇರೆ ಕಡೆ ಪ್ರಯಾಣ ಮಾಡಿರುವುದಾಗಿರಬಹುದು ಇದು ಕೂಡ ಉಚಿತ ಬಹುತೇಕ ಎಲ್ಲವೂ ಕೂಡ ಉಚಿತ ಮಾಜಿಗಳಾದ ನಂತರವೂ ಕೂಡ ಇವರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಆರಾಮವಾಗಿ ಇವರಿಗೆ ಪಿಂಚಣಿಯು ಕೂಡ ಬರುತ್ತದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ಕಾರಣಕ್ಕಾಗಿ ಅದೆಷ್ಟೋ ಮಂದಿ ಜೀವನದಲ್ಲಿ ಒಮ್ಮೆ ಶಾಸಕರಾದರೆ ಸಾಕಪ್ಪ ಎಂದು ಅಂದುಕೊಳ್ಳುವುದು. ನಾವೆಲ್ಲರೂ ಕೂಡ ಈ ಶಾಸಕ ಸ್ಥಾನ ಅಥವಾ ಜನಪ್ರತಿನಿಧಿಗಳು ಎಂದಾಗ ಜನಸೇವೆ ಎಂದು ಹೇಳುತ್ತೇವೆ ಆದರೆ ಅದು ಜನಸೇವೆ ಅಲ್ಲವೇ ಅಲ್ಲ ಒಳ್ಳೆಯ ದುಡ್ಡು ಮಾಡುವಂತಹ ಪೋಸ್ಟ್ ಅಂದರೂ ತಪ್ಪಾಗುವುದಿಲ್ಲ ಹಾಗಾದರೆ ಎಷ್ಟು ಸಂಬಳ ಸಿಗುತ್ತದೆ ಏನು ಎಂದು ಎಲ್ಲವನ್ನು ಹೇಳುತ್ತಾ ಹೋಗುತ್ತೇವೆ.

2022 ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದಂತಹ ಸಂದರ್ಭದಲ್ಲಿ ಶಾಸಕರ ಸಚಿವರ ವಿಧಾನಸಭಾ ಸ್ಪೀಕರ್ ಇಂದ ಹಿಡಿದು ಇವರೆಲ್ಲರ ಸಂಬಳವನ್ನು ಕೂಡ ಜಾಸ್ತಿ ಮಾಡಿಕೊಳ್ಳಲಾಗಿದೆ ಕೇವಲ ಸಂಬಳ ಮಾತ್ರವಲ್ಲ ಅವರಿಗೆ ಸಿಗುವಂತಹ ಒಂದಷ್ಟು ವಿಶೇಷ ಭತ್ಯೆಗಳೆಲ್ಲವೂ ಕೂಡ ಒನ್ ಟು ಡಬಲ್ ಆಗಿದ್ದಾವೆ.

ಇದನ್ನೂ ಓದಿ; ಕಳ್ಳತನವಾಗಿದ್ದ 30 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ

ಶಾಸಕರ ಸಂಬಳ ಎಷ್ಟು?;
ಮೂಲ ವೇತನ- 40,000( ಇದು ಮೂಲ ವೇತನ ಮಾತ್ರವಾಗಿದೆ)

ಇತರೆ ಭತ್ಯೆಗಳು:
ಕ್ಷೇತ್ರ ಭತ್ಯೆ-60,000( ಪ್ರತಿ ತಿಂಗಳು)
ಅತಿಥ್ಯ ವೇತನ-21,000
ದಿನ ಭತ್ಯೆ-2,500( ಪ್ರತಿ ದಿನ ಖರ್ಚಿಗೆ)
ಹೊರ ರಾಜ್ಯ ಪ್ರವಾಸ-7,000( ಒಂದು ದಿನಕ್ಕೆ)
ದೂರವಾಣಿ ವೆಚ್ಚ-20,000
ಇಂಧನ-2,000ಲೀ (ಪ್ರತಿ ತಿಂಗಳಿಗೆ 2 ಲಕ್ಷ ನೀಡಲಾಗುತ್ತದೆ)
ಪ್ರಯಾಣ ವೆಚ್ಚ-30ಕೀಲೋ(1 ಕಿ.ಮೀ ಪ್ರಯಾಣಕ್ಕೆ 30 ರೂ.)
ಆಪ್ತ ಸಹಾಯಕ-20,000

ಇದನ್ನೂ ಓದಿ; ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್

ಇದು ಶಾಸಕರ ಮೂಲ ವೇತನ ಹಾಗೂ ಭತ್ಯೆ ಎಲ್ಲಾವು ಸೇರಿ 2 ರಿಂದ 2.5 ಲಕ್ಷ ಪ್ರತಿ ಶಾಸಕರಿಗೆ ಪ್ರತಿ ತಿಂಗಳು ಸಂಬಳ ಸಿಗುತ್ತದೆ.

ಮುಖ್ಯಮಂತ್ರಿ, ಸ್ಪೀಕರ್, ಉಪ ಸಭಾಪತಿ, ಸಚಿವರು ಹಾಗೂ ವಿಪಕ್ಷ ನಾಯಕರುಗಳಿಗೆ ಮೂಲ ವೇತನ ಹಾಗೂ ಇತರೆ ಭತ್ಯೆಗಳು ಸೇರಿ ಎಷ್ಟು ಸಂಬಳ ಸಿಗುತ್ತದೆ ಎಂದು ನೋಡುವುದಾದರೆ

ಮೂಲ ವೇತನ;
ಮುಖ್ಯಮಂತ್ರಿ-75,000
ಸ್ಪೀಕರ್-75,000
ಉಪ ಸಭಾಪತಿ-60,000
ಸಚಿವರು-60,000
ವಿಪಕ್ಷ ನಾಯಕ-60,000

ಇದನ್ನೂ ಓದಿ; ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್

ಇತರೆ ಸೌಲಭ್ಯ:
ಮನೆ ಬಾಡಿಗೆ-1,20,000
ಮನೆ ನಿರ್ವಹಣೆ-30,000
ಪ್ರತಿ ದಿನ ಪ್ರಯಾಣ ಭತ್ಯೆ-2,500
ಆಹಾರ ವಸ್ತುಗಳ ಖರೀದಿ-4,50,000
ಇಂಧನ-2,000(ಲೀ)

ಮುಖ್ಯಮಂತ್ರಿ, ಸ್ಪೀಕರ್, ಉಪ ಸಭಾಪತಿ, ಸಚಿವರು, ವಿಪಕ್ಷ ನಾಯಕ, ಇವರೆಲ್ಲರಿಗೂ ಮೂಲ ವೇತನ ಹಾಗೂ ಇತರೆ ಭತ್ಯೆಗಳು ಸೇರಿ 4
4 ರಿಂದ 4.5 ಲಕ್ಷದ ವರೆಗೆ ಪ್ರತಿ ತಿಂಗಳು ಸಂಬಳ ಸಿಗುತ್ತದೆ.

ಇದನ್ನೂ ಓದಿ; ಬೆಂಗಳೂರಿಂದ ಚಿಕ್ಕಮಗಳೂರಿಗೆ 6 ಅತ್ಯಾಧುನಿಕ ‘ಎಲೆಕ್ಟ್ರಿಕ್ ಬಸ್’

ಇನ್ನು ಇವರಿಗೆ ಇತರೆ ಸೌಲಭ್ಯಗಳು ಏನೇನೂ ಅಂತ ನೋಡುವುದಾದರೆ:
* ವೈದ್ಯಕೀಯ ಸೌಲಭ್ಯಗಳು ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಅವರ ಕುಟುಂಬದವರಿಗೂ ಕೂಡ ಉಚಿತವಾಗಿ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತದೆ.
* 5 ಲಕ್ಷದವರೆಗೆ ಆರೋಗ್ಯ ವಿಮಾ ಸೌಲಭ್ಯ
* ಪ್ರಯಾಣ ಸೌಲಭ್ಯಗಳು (ಬಸ್ ಮತ್ತು ರೈಲು ಉಚಿತ ಪ್ರಯಾಣ)
* ಸರ್ಕಾರಿ ಸಿಬ್ಬಂದಿ (ಆಪ್ತ ಸಹಾಯಕ ಚಾಲಕ, ಸಹಾಯಕ ಸಿಬ್ಬಂದಿ, ಕಚೇರಿ)

ಮಾಜಿ ಶಾಸಕರಿಗೆ ಏನೇನೂ?:
* 50,000 ಲಕ್ಷದವರೆಗೆ ಪಿಂಚಣಿ( ಸತತ 5 ವರ್ಷ ಶಾಸಕರಾದರೆ 5,000 ಸಾವಿರ ಹೆಚ್ಚು ಪಿಂಚಣಿ ದೊರೆಯುತ್ತದೆ.)
* ಕಚೇರಿ ಸ್ಥಳ
* ಸಹಾಯಕರು
* ಪ್ರಯಾಣ ಭತ್ಯೆ

Most Popular

Recent Comments