ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಮನೆ ಅಂಗಡಿಗಳಲ್ಲಿ ಹಣ ವಸೂಲಿ ಮಾಡುತ್ತಿದ್ದ ರಾಜಸ್ಥಾನದ ಖತರ್ನಾಕ್ ಲೇಡೀಸ್ ಗ್ಯಾಂಗ್ ಒಂದಕ್ಕೆ ಸಾರ್ವಜನಿಕರ ತರಾಟೆಗೆ ತೆಗದುಕೊಂಡಿರುವ ಘಟನೆ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ನಡೆದಿದೆ. (ವೀಡಿಯೋ ನೋಡಿ..)
ಪ್ರಕೃತಿ ವಿಕೋಪದಿಂದ ನಮ್ಮ ಮನೆ- ಆಸ್ತಿ ನಾಶವಾಗಿದೆ.. ನಮಗೆ ಹಾಕೋಕೆ ಬಟ್ಟೆಯೂ ಇಲ್ಲ ದಯವಿಟ್ಟು ಸಹಾಯ ಮಾಡಿ ಎಂದು ಯುವತಿಯರ ಗ್ಯಾಂಗ್ ಒಂದು ಮನೆ ಅಂಗಡಿಗಳಿಗೆ ಹೋಗಿ ಹಣಕ್ಕೆ ಬೇಡಿಕೆ ಇಟ್ಟಿದೆ. ಈ ವೇಳೆ ಸಾರ್ವಜನಿಕರು ತರಾಟೆಗೆ ತೆಗದುಕೊಂಡಿದ್ದಾರೆ. ನೋಡೋಕೆ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಬಂದಿರೋ ಯುವತಿಯರು ರಾಜಸ್ಥಾನ ಮೂಲದವರು ಎನ್ನಲಾಗಿದೆ. ತಮ್ಮ ಮನೆ ಆಸ್ತಿ ಎಲ್ಲವನ್ನೂ ಪ್ರಕೃತಿ ವಿಕೋಪದಲ್ಲಿ ಕಳೆದುಕೊಂಡಿದ್ದೇವೆ ಎನ್ನುತ್ತಿದ್ದ ಯುವತಿಯರು 10, 20 ರೂಪಾಯಿ ಕೊಟ್ರೆ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲರ ಬಳಿಯೂ 100, 200 ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ವೀಡಿಯೋ ಮಾಡಿದ್ದು ತರಾಟೆಗೆ ತೆಗದುಕೊಂಡಿದ್ದಾರೆ. ಈ ರೀತಿಯ ನಿಮ್ಮ ನಾಟಕಗಳು ನಮ್ಮ ಚಿಕ್ಕಮಗಳೂರಿನಲ್ಲಿ ನಡೆಯೋದಿಲ್ಲ.. ನೀವು ಎಲ್ಲಿಂದ ಬಂದಿದ್ದೀರಿ.. ನಿಮ್ಮ ದಾಖಲೆ ಕೊಡಿ ಎನ್ನುತ್ತಿದ್ದಂತೆ ಐವರು ಯುವತಿಯ ಗ್ಯಾಂಗ್ ಆಟೋ ಹತ್ತಿ ಎಸ್ಕೇಪ್ ಆಗಿದೆ. (ವೀಡಿಯೋ ನೋಡಿ)
ಇತ್ತೀಚಿನ ದಿನದಲ್ಲಿ ಬಿಕ್ಷಾಟನೆಯೂ ಹೈಟೆಕ್ ಉದ್ಯೋಗವಾಗಿಬಿಟ್ಟಿದೆ. ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಭಿಕ್ಷಾಟನೆಗೆ ಬಂದವರಿಗೆ ಹಣ ಕೊಡುವ ಮೊದಲು ವಿಚಾರಿಸಿ ಮುಂದುವರೆಯುವುದು ಉತ್ತಮ.
ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್ ಹೇಳಿಕೆ
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತಗಳಿಂದ ಸೋತಿದೆ, ಅದನ್ನು ಸಮಚಿತ್ತ ಭಾವದಿಂದ ಸ್ವೀಕರಿಸಿದ್ದೇನೆ. ಬಿಜೆಪಿ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ್ದಾರೆ, ಅವರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ ಎನ್ ಜೀವರಾಜ್ ತಿಳಿಸಿದರು.
ನರೇಂದ್ರ ಮೋದಿಯವರಿಗೆ ವಿದೇಶಗಳು ನೀಡುವ ಗೌರವ ಭಾರತದ ಪ್ರಜಾಪ್ರಭುತ್ವಕ್ಕೆ ಸಂದ ಗೌರವವಾಗಿದೆ, ಬಿಜೆಪಿ ರಾಷ್ಟ್ರದ ಏಳಿಗೆಗಾಗಿ ದುಡಿಯುತ್ತಿದ್ದು ಸಾಮಾನ್ಯನೂ ಪ್ರಧಾನಿ ಆಗಬಹುದು ಎಂದು ಬಿಜೆಪಿ ಪಕ್ಷ ತೋರಿಸಿದೆ ಎಂದರು.
ಕಾರ್ಯಕರ್ತರ ಪಕ್ಷ ನಿಷ್ಠೆಗೆ ನಾನು ಆಭಾರಿಯಾಗಿದ್ದು ಮುಂದೆಯೂ ಎಲ್ಲರ ನೋವು ನಲಿವುಗಳಿಗೆ ಸ್ಪಂದಿಸುತ್ತೇನೆ ಎಂದರು. ಪಟ್ಟಣದ ಚಪ್ಪರದ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು, ತಾಲೂಕಿನ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಪಕ್ಷ ವಿರೋಧಿ ನಡವಳಿಕೆ, ಉಚ್ಛಾಟನೆಗೆ ಮನವಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಪಿತೂರಿ ನಡೆಸಿದ್ದಾರೆಂದು ಆರೋಪಿಸಿ ಧರೆಕೊಪ್ಪ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರಾದ ಭಾನುಪ್ರಕಾಶ್ ಹಾಗೂ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಉದಯ್ ಆನೆಗುಂದ ಅವರನ್ನು ಪಕ್ಷದಿಂದ 6 ವರ್ಷ ಉಚ್ಛಾಟನೆ ಮಾಡಲು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ಉಮೇಶ್ ತಲಗಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.