(HSRP number plate) ಕಳೆದ ವರ್ಷ ನವೆಂಬರ್ ಮತ್ತು ಈ ಫೆಬ್ರವರಿಯಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದ ಸಾರಿಗೆ ಇಲಾಖೆ ಇನ್ನು ಮುಂದೆ ಅದನ್ನು ವಿಸ್ತರಿಸಲು ಚಿಂತನೆ ನಡೆಸಿಲ್ಲ ಎಂದು ವರದಿಯಾಗಿದೆ. ಮೇ 31ರ ಮೊದಲು HSRP ಅಳವಡಿಸಲು ಇಲಾಖೆ ಆದೇಶ ನೀಡಿದ್ದು, ನಂತರವೂ ಅಳವಡಿಸದವರಿಗೆ ದಂಡ ವಿಧಿಸಲಿದೆ.
ಇದನ್ನೂ ಓದಿ: ಚಿನ್ನದ ಮೇಲೆ ಸಾಲ ಪಡೆಯಬೇಕು ಅನ್ಕೊಂಡಿದ್ದೀರಾ?; ಹಾಗಾದ್ರೆ ಈ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ; ಮಿಸ್ ಮಾಡ್ದೆ ಓದಿ
2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ HSRP ಅಳವಡಿಸುವುದನ್ನು ಕಡ್ಡಾಯಗೊಳಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಸಾರಿಗೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸುಮಾರು ಎರಡು ಕೋಟಿ ವಾಹನಗಳು HSRP ಪಡೆಯಬೇಕಾಗಿದೆ. ಈವರೆಗೆ ರಾಜ್ಯದಲ್ಲಿ ಕೇವಲ 34 ಲಕ್ಷ HSRP ನೋಂದಾಯಿಸಲಾಗಿದೆ. ಗಡುವನ್ನು ಎರಡು ಬಾರಿ ವಿಸ್ತರಿಸಿದ್ದರೂ ಸಹ ಕಡಿಮೆ ಪ್ರಮಾಣದಲ್ಲಿ HSRP ಅಳವಡಿಸಲಾಗಿದೆ. ಫೆಬ್ರವರಿ ವೇಳೆಗೆ ಸುಮಾರು 18 ಲಕ್ಷ ನೊಂದಣಿಯಾಗಿದ್ದರೆ ಏಪ್ರಿಲ್ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳು HSRP ನೋಂದಣಿ ಮಾಡಿಕೊಳ್ಳಬೇಕಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಸಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
HSRP ಅಳವಡಿಸದವರಿಗೆ ದಂಡ ಎಷ್ಟು?
ಎHSRP ಅಳವಡಿಸದವರಿಗೆ ಮೊದಲ ಬಾರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು. ನಂತರವೂ ಅವರು HSRP ಅಳವಡಿಸದಿದ್ದರೆ, ಅಳವಡಿಸುವವರೆಗೆ 1,000 ರೂ. ದಂಡ ವಿಧಿಸಲಾಗುವುದು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ಪೆಂಡಿಂಗ್ ಇರುವ ಹಣ ನಿಮ್ಮ ಖಾತೆಗೆ ಜಮಾ ಹೀಗೆ ಮಾಡಿ!
ಹಾಗಾದರೆ ಈ hsrp ನಂಬರ್ ಪ್ಲೇಟ್ ಅವಳಡಿಕೆ ಹೇಗೆ:
* https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು book hsrp ನ್ನು ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
* ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
* hsrp ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
* hsrp ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
* ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
* ನಿಮ್ಮ ಅನುಕೂಲಕ್ಕೆ, ತಕ್ಕಂತೆ hsrp ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
* ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಖ್ಯೆಗೆ ಭೇಟಿ ನೀಡಿ.
* ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ hsrp ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್
- ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ







Leave a Reply