(DROUGHT RELIEF) ರೈತರಿಗೆ ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲಾಗಿದ್ದು, ಪ್ರತಿ ಎಕರೆಗೆ ಎಷ್ಟು ಬೆಳೆ ಪರಿಹಾರ ಮಾಡಲಾಗಿದೆ ಹಾಗೂ ಬೆಳೆ ಪರಿಹಾರ ಜಮಾ ಹಣದ ಸ್ಟೇಟಸ್ ಯಾವ ರೀತಿ ಚೆಕ್ ಮಾಡಬೇಕು..? ಬೆಳೆ ಪರಿಹಾರದ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು? ಹಾಗೂ ಬೆಳೆ ಪರಿಹಾರ ಹಣ ಜಮಾ ಆಗದೆ ಇರಲು ಪ್ರಮುಖ ಕಾರಣಗಳೇನು? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಕಿ ಉಳಿದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ; ಈ ರೀತಿ ಮಾಡದೇ ಇದ್ದರೆ ರೈತರಿಗೆ ಸಿಗಲ್ಲ ಪರಿಹಾರ
ಬೆಳೆ ಪರಿಹಾರ ಹಣ ಜಮಾ ಪ್ರಕ್ರಿಯೆಯನ್ನು NDRF ಸೂಚನೆಯ ಮೇರೆಗೆ ಈ ಕೆಳಗಿನಂತೆ ಪ್ರತಿ ಎಕರೆಗೆ ಜಮಾ ಮಾಡಲಾಗಿದೆ.
ಮಳೆ ಆಶ್ರಿತ ಬೆಳೆ:
ಮಳೆ ಆಶ್ರಿತ ಬೆಳೆಗಳನ್ನು ಬೆಳೆದರೆ ಅಂತ ಬೆಳೆಗಳು ನಷ್ಟ ಉಂಟಾದರೆ ಸುಮಾರು ಪ್ರತಿ ಹೆಕ್ಟರ್ ಗೆ 8,500/- ಹಣ ಜಮಾ ಮಾಡಲಾಗುತ್ತದೆ.
ನೀರಾವರಿ ಬೆಳೆ:
ರೈತರು ನೀರಾವರಿ ಅವಲಂಬಿಸಿ ಬೆಳೆಗಳನ್ನು ಬೆಳೆಯುತ್ತಿದ್ದರೆ ಅಥವಾ ನೀರಾವರಿ ಮೇಲೆ ತಮ್ಮ ಬೇಸಾಯವನ್ನು ಅವಲಂಬಿಸಿದರೆ ಅಂತ ರೈತರಿಗೆ ಬೆಳೆ ನಷ್ಟ ಅಥವಾ ಬೆಳೆ ಪರಿಹಾರ ಹಣವನ್ನು ಪ್ರತಿ ಹೆಕ್ಟರ್ ಗೆ 17,000/- ರೂಪಾಯಿ ಹಣ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್
ಬೆಳೆ ಪರಿಹಾರ ಹಣ ಜಮಾ ಆಗದೆ ಇರಲು ಕಾರಣವೇನು?
FID ಮಾಡಿಸದೆ ಇರುವುದು:
ಬೆಳೆ ಪರಿಹಾರದ ಹಣ ಜಮಾ ಆಗಿಲ್ಲವೆಂದರೆ ಅದಕ್ಕೆ ಪ್ರಮುಖ ಕಾರಣವೇನೆಂದರೆ ನಿಮ್ಮ ಜಮೀನಿಗೆ FID ಮಾಡಿಸದೆ ಇರುವುದು ಪ್ರಮುಖ ಕಾರಣವಾಗಿರುತ್ತದೆ ಹಾಗಾಗಿ FID ಮಾಡಿಸಲು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ಗ್ರಾಮ ಲೆಕ್ಕಿಗ ಅಧಿಕಾರಿಗಳಿಗೆ ಭೇಟಿ ನೀಡಿ.
ಆಧಾರ್ ಲಿಂಕ್:
ನಿಮ್ಮ ಜಮೀನಿನ RTC ಆಧಾರ್ ಕಾರ್ಡ್ ಲಿಂಕ್ ಮಾಡಿಸಿದೆ ಇರುವುದು ಕೂಡ ಒಂದು ಕಾರಣವಾಗಿರುತ್ತದೆ. ಹಾಗಾಗಿ ಇದನ್ನು ಮಾಡಿಸಲು ನಿಮ್ಮ ಹತ್ತಿರದ ಕೃಷಿ ಕೇಂದ್ರ ಅಥವಾ ಗ್ರಾಮಲೆಕ್ಕಿಗೆ ಅಧಿಕಾರಿಗಳಿಗೆ ಭೇಟಿ ನೀಡಿ.
ಇದನ್ನೂ ಓದಿ: ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
E-KYC:
FID ಮತ್ತು ಆಧಾರ್ ಕಾರ್ಡ್ ಲಿಂಕ್ ಹಾಗೂ ನಿಮ್ಮ ಪಹಣಿಗೆ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇದನ್ನು ಮಾಡಿಸಲು ನಿಮ್ಮ ಹತ್ತಿರದ ಗ್ರಾಮ ಲೆಕ್ಕೀಗ ಅಧಿಕಾರಿಗಳು ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ
ಬ್ಯಾಂಕ್ ಅಕೌಂಟ್:
ನಿಮಗೆ ಬೆಳೆ ಪರಿಹಾರದ ಹಣ ಬರಬೇಕೆಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದೆ ಇದೇ ಇಲ್ಲ ಎಂದು ಚೆಕ್ ಮಾಡಿ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹಾಗೂ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಮತ್ತು NPCI ಮ್ಯಾಪಿಂಗ್ ಮಾಡಿಸುವುದು ಕೂಡ ಕಡ್ಡಾಯ. ಈ ಎಲ್ಲಾ ಸರಿಯಾಗಿದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಬರುತ್ತದೆ.
ಬೆಳೆ ಪರಿಹಾರದ ಹಣ ಜಮಾ ಆಗಿದ್ಯಾ, ಈ ರೀತಿ ಚೆಕ್ ಮಾಡಿ
* https://parihara.karnataka.gov.in/service92/ ವೆಬ್ ಸೈಟ್ ಗೆ ಭೇಟಿ ನೀಡಿ.
* ನಂತರ ವರ್ಷ, ಯಾವ ಕಾರಣಕ್ಕಾಗಿ ಬೆಳೆ ನಷ್ಟ ಉಂಟಾಗಿದೆ ಎಂಬ ಆಯ್ಕೆ ಮಾಡಿ.
* ನಂತರ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಸೆಲೆಕ್ಟ್ ಮಾಡಿ.
* ನಂತರ ಓಕೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಇಲ್ಲಿವರೆಗೂ ನಿಮಗೆ ಜಮಾ ಆಗಿರುವಂತ ಬೆಳೆ ಪರಿಹಾರ ಹಣದ ರೈತರ ಲಿಸ್ಟ್ ಸಿಗುತ್ತದೆ. ನಿಮ್ಮ ಹೆಸರು ಇದೆ ಇಲ್ಲವೆಂದು ಚೆಕ್ ಮಾಡಿಕೊಳ್ಳಿ.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್







Leave a Reply