Monday, December 11, 2023
HomeವಿಶೇಷHow To Do Annabhagya Money Check With Ration Card Number

How To Do Annabhagya Money Check With Ration Card Number

How To Do Annabhagya Money Check With Ration Card Number: ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಹಣ ಜಮಾ ಆಗಿದೆಯಾ? ನಿಮ್ಮ ಖಾತೆಗೆ ಎಷ್ಟು ದುಡ್ಡು ಜಮಾ ಆಗಲಿದೆ, ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಹೇಗೆ ಚೆಕ್ ಮಾಡಬಹುದು ಎಂಬುವುದನ್ನು ಈ ಕೇಳಗಿನಂತೆ ವಿವರಿಸಲಾಗಿದೆ.

ಇದನ್ನೂ ಓದಿ; ಹಿಂದೂ ದೇಗುಲಗಳೇ ಟಾರ್ಗೆಟ್; 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಅಕ್ಕಿ ದೊರೆಯದ ಕಾರಣ ಈಗಾಗಲೇ ವಿತರಿಸುತ್ತಿರುವ 5 ಕೆಜಿ ಜೊತೆಗೆ ತಾತ್ಕಾಲಿಕವಾಗಿ 5 ಕೆಜಿ ಅಕ್ಕಿಗೆ ತಲಾ 170 ರೂಪಾಯಿಯನ್ನು ಪ್ರತಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಆದರೆ, ಆಧಾರ್ ನಂಬರ್‌ಗೆ ಲಿಂಕ್ ಆಗದ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಅಕ್ಕಿ ಹಾಗೂ ಹಣ ಎರಡೂ ಸಿಗುವುದಿಲ್ಲ. ಈ ಸೌಲಭ್ಯ ಪಡೆಯಲು ಕಡ್ಡಾಯವಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಆಗಿರಲೇ ಬೇಕು.

ಇದನ್ನೂ ಓದಿ; ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 17-07-2023

ಹಾಗಾದರೆ ಲಿಂಕ್ ಮಾಡುವುದು ಹೇಗೆ ಹಾಗೂ ರೇಷನ್ ಕಾರ್ಡ್ ನಂಬರ್ ಹಾಕಿ ಹಣ ಜಮಾ ಆಗಿದೆ. ಎಷ್ಟು ಹಣ ಜಮಾ ಆಗುತ್ತದೆ ಇದನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿಯೋಣ.

ರೇಷನ್ ನಂಬರ್ ಹಾಕಿ ಚೆಕ್ ಮಾಡುವುದು ಹೇಗೆ?:
* https://ahara.kar.nic.in/Home/EServices
* ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ.
* ಕೆಳಗಡೆ ಇರುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ.
* ಕೆಳಗಡೆ ಇರುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
* ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ.
* ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
* ವರ್ಷ, ತಿಂಗಳು, ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಹೆಸರು, member ID, ಕುಟುಂಬ ಸದಸ್ಯರ ಸಂಖ್ಯೆ, ನಿಮಗೆ ಸಿಗುವ ಅಕ್ಕಿಯ ಅಳತೆ ಹಾಗೂ ನಿಮ್ಮ ಖಾತೆಗೆ ಜಮಾ ಆದ ಹಣದ ಮೊತ್ತವನ್ನು ತೋರಿಸುತ್ತದೆ.

How To Do Annabhagya Money Check With Ration Card Number
How To Do Annabhagya Money Check With Ration Card Number

ಇದನ್ನೂ ಓದಿ; ಆಗುಂಬೆ ಘಾಟ್: ಆಕಸ್ಮಿಕವಾಗಿ ಘಾಟಿಯಿಂದ ಕೆಳಗೆ ಬಿದ್ದ ಮುಸ್ಲಿಂ ವ್ಯಕ್ತಿ

ಹಾಗಾದರೆ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಹೇಗೆ?:
ಆಧಾರ್ ಲಿಂಕ್ ಯಾಕೆ ಕಡ್ಡಾಯ?
How To Do Annabhagya Money Check With Ration Card Number: ಅನ್ನಭಾಗ್ಯ ಯೋಜನೆಯನ್ನು ಬಡವರು ಮತ್ತು ನಿರ್ಗತಿಕರಿಗೆಂದು ರೂಪಿಸಲಾಗಿದ್ದು, ಸ್ಥಿತಿವಂತರೂ ಕೂಡ ಯೋಜನೆಯ ದುರ್ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಅನರ್ಹ ರೇಷನ್ ಕಾರ್ಡ್ ರದ್ದುಗೊಳಿಸುವ ಹಿನ್ನಲೆಯಲ್ಲಿ ಆಧಾರ್‌ಗೆ ಲಿಂಕ್ ಮಾಡಲಾಗುತ್ತಿದೆ.

ಸಮೀಪದ ರೇಷನ್ ಅಂಗಡಿಗೆ ಹೋಗಿ ಉಚಿತವಾಗಿ ಆಧಾರ್ ನಂಬರ್ ಲಿಂಕ್ ಮಾಡಬಹುದು. ಅಥವಾ ಆನ್‌ ಲೈನ್‌ನಲ್ಲೂ ಸುಲಭವಾಗಿ ಈ ಕಾರ್ಯ ಮಾಡಬಹುದು.

ರೇಷನ್ ಅಂಗಡಿಯಲ್ಲಿ ಮಾಡಿಸುವುದಾದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡನ್ನು ಫೋಟೋ ಕಾಫಿ ತೆಗೆದುಕೊಂಡು ಹೋಗಬೇಕು. ರೇಷನ್ ಕಾರ್ಡ್ ಯಾರ ಹೆಸರಲ್ಲಿದೆಯೋ ಅವರ ಪಾಸ್‌ಪೋರ್ಟ್ ಗಾತ್ರದ ಫೋಟೋ ತೆಗೆದುಕೊಂಡು ಹೋಗಬೇಕು.


ಇತ್ತೀಚಿನ ಜನಪ್ರಿಯ ಸುದ್ದಿಗಳು 


ಈ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ ಬ್ಯಾಂಕ್ ಪಾಸ್‌ಬುಕ್‌ನ ಒಂದು ಝರಾಕ್ಸ್ ಪ್ರತಿ ತೆಗೆದುಕೊಂಡು ಪಡಿತರ ಅಂಗಡಿಯಲ್ಲಿ ಸಲ್ಲಿಸಬೇಕು. ಅಲ್ಲಿ ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಹಿತಿ ದೃಢಪಡಿಸಲು ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ. ಎಲ್ಲಾ ದಾಖಲೆಗಳ ಸಲ್ಲಿಕೆಯಾದ ಬಳಿಕ ಆಧಾರ್ ಜೊತೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್‌ಗೆ ಎಸ್.ಎಮ್.ಎಸ್ ಬರುತ್ತದೆ.

ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?:
* ಆನ್‌ಲೈನ್‌ನಲ್ಲಿ ಲಿಂಕ್ ಮಾಡಬೇಕೆಂದರೆ ಮೊಬೈಲ್ ಮೂಲಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
* ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಪುಟ ತೆರೆದುಕೊಳ್ಳುತ್ತದೆ.
* ಅದರಲ್ಲಿ ಕಂದಾಯ ವಲಯವಾರು ಮರು ವಿಭಾಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಯಾವ ವಿಭಾಗದಲ್ಲಿದೆ ಎಂಬುವುದನ್ನು ಗುರುತಿಸಿ
* ಆನಂತರ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ UID Linking for RC Members ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆಗೆದುಕೊಳ್ಳುತ್ತದೆ
* ಅದರಲ್ಲಿ aadhar number ಮತ್ತು virtual I’d ಎಂದು ಎರಡು ಆಪ್ಷನ್‌ಗಳಿದ್ದು, aadhar number ಮೇಲೆ ಕ್ಲಿಕ್ ಮಾಡಿ ಆಧಾರ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ.
* ನಂತರ ಓಟಿಪಿ ಆಪ್ಷನ್ ಬರುತ್ತದೆ, ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿ Go ಮೇಲೆ ಕ್ಲಿಕ್ ಮಾಡಿದರೆ aadhar card number linked successfully ಎಂಬ ಮೆಸೇಜ್ ಬರುವ ಮೂಲಕ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಗಳು ಒಂದಕ್ಕೊಂದು ಲಿಂಕ್ ಆದ ಮಾಹಿತಿ ಸಿಗುತ್ತದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-17.07.2023

Most Popular

Recent Comments