ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ವೇಳೆ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಒಂದೋದಾಗಿ ಜಾರಿಗೆ ತರುತ್ತಿದೆ. ಐದು ಗ್ಯಾರಂಟಿಗಳ ಪೈಕಿ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಜುಲೈನಿಂದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಗೂ ಮುನ್ನ ಘೋಷಿಸಿತ್ತು. ಅದನ್ನು ಜಾರಿಗೆ ತರಲು ಸರ್ಕಾರ ತೀವ್ರ ಪ್ರಯತ್ನ ನಡೆಸಿದರು ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೀಗ ಈ ಹಣಕ್ಕಾಗಿ ಅಧಾರ್ ಲಿಂಕ್ ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ; ಶೃಂಗೇರಿ; ಕಿಗ್ಗಾ ನಾಡಕಚೇರಿಯನ್ನು ಶೃಂಗೇರಿಗೆ ವರ್ಗಾಯಿಸುವಂತೆ ಒತ್ತಾಯ
ಹೌದು. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಬೇಕಾದರೆ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಬಿಪಿಎಲ್ ಪಡಿತರ ಚೀಟಿಯನ್ನು ನೀವು ಹೊಂದಿರಬೇಕು. ಪಡಿತರ ಚೀಟಿಯಲ್ಲಿ ಮನೆ ಮುಖ್ಯಸ್ಥರು ಯಾರು ಅನ್ನೋದು ಕಾರ್ಡ್ ನಲ್ಲಿ ನಮೂದಾಗಿರುತ್ತದೆ. ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಖಾತೆ ಇರಬೇಕು.
ಬ್ಯಾಂಕ್ ಖಾತೆ ಮಾತ್ರವಲ್ಲ, ಖಾತೆಗೆ ಆಧಾರ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಒಂದು ವೇಳೆ ಮನೆಯ ಮುಖ್ಯಸ್ಥರದ್ದು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾವುದಾದ್ರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್ ಲಿಂಕ್ ಆಗಿದ್ರೂ ಆಗುತ್ತೆ.
ಇದನ್ನೂ ಓದಿ; ಹೊಸ ಫೋನ್ ಖರೀದಿಸಿದ್ರೆ 2 kg ಟೊಮೆಟೊ ಉಚಿತ!;ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಫಲಾನುಭವಿಗಳ ಖಾತೆಗೆ ಹಣ ಹೇಗೆ ಜಮಾ ಆಗುತ್ತದೆ?:
ರಾಜ್ಯದಲ್ಲಿ ಒಟ್ಟು 1 ಕೋಟಿ 25 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರು ಇದ್ದು, 4 ಕೋಟಿ 42 ಲಕ್ಷ ಫಲಾನುಭವಿಗಳಿದ್ದಾರೆ. 1 ಕೋಟಿ 28 ಲಕ್ಷ ಕಾರ್ಡ್ ಗಳ ಪೈಕಿ 99.99% ಆಧಾರ್ ಸೀಡಿಂಗ್ ಆಗಿದೆ. ಇನ್ನುಳಿದ ಬಾಕಿ ಉಳಿದಿರುವ 6 ಲಕ್ಷ ಕಾರ್ಡ್ ಗಳು ಆಧಾರ್ ಲಿಂಕ್ ಆಗಬೇಕು. ಆಧಾರ್ ಲಿಂಕ್ ಆಗುತ್ತಿದ್ದಂತೆಯೇ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್ ಗಳಿಗೆ ಅಪ್ಡೇಟ್ ಆಗುತ್ತದೆ.
ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗುತ್ತದೆ. ಹಾಗಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ನ್ನೂ ನೀವು ಮ್ಯಾಪಿಂಗ್ ಮಾಡಬೇಕು. ಮತ್ತು ನಿಮ್ಮ ರೇಷನ್ ಕಾರ್ಡ್ ಗೆ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಲೇಬೇಕು.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?:
* Aadhar Website ಗೆ ಲಾಗಿನ್ ಆಗಿ
* ನಂತರ My aadhaar ಮೇಲೆ ಕ್ಲಿಕ್ ಮಾಡಿ
* ನಂತರ aadhaar service ಮೇಲೆ ಕ್ಲಿಕ್ ಮಾಡಿ
* Check aadhar bank linking status ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಆಧಾರ್ ನಂಬರ್ ಹಾಕಿ, ಅಚಿಠಿಣಛಿhಚಿ ಣಥಿಠಿe ಮಾಡಿ,
Captcha type ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ
* ನಂತರ ನಿಮ್ಮ ಆಧಾರ್(aadhar) ಬ್ಯಾಂಕ್ (bank) ಜೊತೆ mapping ಆಗಿರುವ ಸಂದೇಶ ಈ ಕೆಳಗಿನಂತೆ ಕಾಣಿಸುತ್ತದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ನಾಳೆ ಚಿಕ್ಕಮಗಳೂರಿನಲ್ಲಿ ಬಹು ನಿರೀಕ್ಷಿತ hyundai exter ಬಿಡುಗಡೆ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ? 11.07.2023
- ಕಳಸ :ಅವೈಜ್ಞಾನಿಕ ಕಾಮಗಾರಿಯಿಂದ ಕೆಸರುಮಯವಾದ ರಸ್ತೆ, ತುರ್ತು ಕ್ರಮಕ್ಕೆ ಒತ್ತಾಯ
ಹೀಗೂ ಚೆಕ್ ಮಾಡಬಹುದು:
* ನಿಮ್ಮ ಆಧಾರ್ ಯಾವ ಬ್ಯಾಂಕ್ ಗೆ ಲಿಂಕ್ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್
* ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ ಲೋಡ್ ಮಾಡಿ install ಮಾಡಿಕೊಳ್ಳಿ
* ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get otp ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ, varify OTP ಮೇಲೆ ಕ್ಲಿಕ್ ಮಾಡಿ
* ನಂತರ ನಿಮಗೆ ಬೇಕಾದ 4 ಸಂಖ್ಯೆಯ m pin create ಮಾಡಿ, confirm mpin ಹಾಕಿ, submit ಮೇಲೆ ಕ್ಲಿಕ್ ಮಾಡಿ
* ನಂತರ seeding status of aadhar in bank account ಮೇಲೆ ಕ್ಲಿಕ್ ಮಾಡಿ
* ಯಾವ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.
ಹಾಗಾದರೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡುವುದು ಹೇಗೆ?:
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಡಿತರ ಕಾರ್ಡ್ನೊಂದಿಗೆ ಆಧಾರ್ ಲಿಂಕ್ ಮಾಡಬಹುದು. ಎರಡಕ್ಕೂ ಸಂಬಂಧಿಸಿದ ಕಾರ್ಯವಿಧಾನಗಳನ್ನು ಕೆಳಗೆ ನೊಡಲಾಇದೆ.
ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡಲು:
ಹಂತ 1: ಮೊದಲಿಗೆ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ತೆರಳಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಹಂತ 2: ನಂತರ ಪುಟ ತೆರೆದ ಮೇಲೆ ಇ-ಸೇವೆಗಳು ಎಂಬ ಆಯ್ಕೆಯನ್ನು ಮಾಡಿ ನಂತರ ಇ -ಪಡಿತರ ಚೀಟಿಯಲ್ಲಿ ಯು ಐ ಡಿ ಲಿಂಕ್ ಮಾಡಿ ಎಂಬ ಆಯ್ಕೆಯನ್ನು ಮಾಡಿ.
ಹಂತ 3: ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು, UID ಲಿಂಕಿಂಗ್ ಫಾರ್ RC ಮೆಂಬರ್ಸ್ ಎಂಬ ಆಯ್ಕೆಯನ್ನು ಮಾಡಿಕೊಳ್ಳಿ.
ಹಂತ 4: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 5: ಮುಂದುವರೆದು ನೀವು ನೋಂದಾಯಿಸಿದ ಮೊಬೈಲ್ ನಂಬರಿಗೆ ಓಟಿಪಿಯು ಬರುತ್ತದೆ ಅದನ್ನು ಹಾಕಿ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಸಬ್ಮಿಟ್ ಮಾಡಿ
ಹಂತ 7: ಹೀಗೆ ಮಾಡುವುದರಿಂದ ಕೊನೆಯದಾಗಿ ನಿಮಗೆ ಲಿಂಕ್ ಆಗಿರುವ ನೋಟಿಫಿಕೇಶನ್ ಬರುತ್ತದೆ.
ಇದನ್ನೂ ಓದಿ; ಮೂಡಿಗೆರೆ: ದೇವರಮನೆ ಗುಡ್ಡದಲ್ಲಿ ಯುವಕನ ಕೊಲೆ ಮಾಡಿ ಶವ ಎಸೆದ ಪ್ರಕರಣ; ಮತ್ತೆ ನಾಲ್ವರು ಆರೋಪಿಗಳ ಸೆರೆ
ಆಫ್ಲೈನ್ ಮೂಲಕ ಆಧಾರ್ ರೇಷನ್ ಕಾರ್ಡ್ ಲಿಂಕ್ ಮಾಡುವ ವಿಧಾನ:
ಮೊದಲು ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನ ಝೆರಾಕ್ಸ್ ಪ್ರತಿಯನ್ನು ತೆಗೆದುಕೊಳ್ಳಬೇಕು. ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಬ್ಯಾಂಕ್ ಖಾತೆಯ ಪಾಸ್ ಬುಕ್ ನ ಝೆರಾಕ್ಸ್ ಅನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಆಹಾರ ಸರಬರಾಜು ಇಲಾಖೆಗೆ ಪಾಸ್ ಪೋರ್ಟ್ ಫೋಟೋ ಜೊತೆ ನೀಡಬೇಕು. ಆಧಾರ್ ಕಾರ್ಡ್ ಆಧಾರದ ಮೇಲೆ ಬೆರಳಚ್ಚು ನೀಡಬೇಕಾಗಬಹುದು. ಈ ಎಲ್ಲಾ ದಾಖಲೆಗಳು ಇಲಾಖೆಯನ್ನು ತಲುಪಿದ್ದಲ್ಲಿ ಇ-ಮೇಲ್ ಅಥವಾ ಎ.ಎಮ್.ಎಸ್ ನಲ್ಲಿ ಸಂದೇಶ ಬರುತ್ತದೆ. ನಂತರ ಅಧಿಕಾರಿಗಳು ಲಿಂಕ್ ಮಾಡಿದ ನಂತರ ನಿಮ್ಮ ಮೊಬೈಲಿಗೆ ಸಂದೇಶವು ಬರುತ್ತದೆ.
ಆಧಾರ್-ರೇಷನ್ ಕಾರ್ಡ್ ಲಿಂಕ್ ಆಗಿದೆಯೇ ಎಂಬ ಸ್ಟೇಟಸ್ ಚೆಕ್ ಮಾಡುವುದು ಹೇಗೆ?:
ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಿ :
ಹಂತ 2: ನಂತರ ಪುಟ ತೆರೆದ ಮೇಲೆ ಇ-ಸೇವೆಗಳು ಎಂಬ ಆಯ್ಕೆಯನ್ನು ಮಾಡಿ
ಹಂತ 3: ಮುಂದುವರೆದು ಇ-ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಅದರಲ್ಲಿ ನೀವು ಹೊಸ ಅಥವಾ ಹಾಲಿ ಪಡಿತರ ಚೀಟಿ ಸ್ಥಿತಿ ಎಂಬ ಆಯ್ಕೆಯನ್ನು ಮಾಡಿಕೊಳ್ಳಿ.
ಹಂತ 4: ನಂತರ ನಿಮ್ಮ ಜಿಲ್ಲೆಯನ್ನು ಹೊಂದಿದ ಲಿಂಕ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ನಂತರ ಪಡಿತರ ಚೀಟಿ ವಿವರ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ನಂತರ with out OTP ಆಪ್ಷನ್ ಸೆಲೆಕ್ಟ್ ಮಾಡಿಕೊಂಡು ಮುಂದುವರೆಯಿರಿ
ಹಂತ 5: ಸ್ಟೇಟಸ್ ಆಫ್ ರೇಶನ್ ಕಾರ್ಡ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ಸ್ಟೇಟಸ್ ಅನ್ನು ನೋಡಬಹುದು.
ಇದನ್ನೂ ಓದಿ; ಮೂಡಿಗೆರೆ: ದೇವರಮನೆ ಗುಡ್ಡದಲ್ಲಿ ಯುವಕನ ಕೊಲೆ ಮಾಡಿ ಶವ ಎಸೆದ ಪ್ರಕರಣ; ಮತ್ತೆ ನಾಲ್ವರು ಆರೋಪಿಗಳ ಸೆರೆ
ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡುವುದು ಹೇಗೆ:
ಹಂತ 1: ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನೋಂದಣಿ ಮಾಡಿ ಹಾಗೆ ಕ್ಯಾಪ್ಚರ್ ಅನ್ನು ಎಂಟರ್ ಮಾಡಿ.
ಹಂತ 3: ನಂತರ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ OTP ಬರುತ್ತೆ ಅದನ್ನು ನಮೂದಿಸಿ, ನಂತರ Submit ಮೇಲೆ ಕ್ಲಿಕ್ ಮಾಡಿ
ಹಂತ 4: ನಂತರ ಅದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೋರಿಸುತ್ತದೆ.
ಹಂತ 5: ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನೀವು ಹತ್ತಿರದ ಶಾಖೆಗೆ ತೆರಲಿ ಲಿಂಕ್ ಮಾಡಿಸಬೇಕು.
ರೇಷನ್ ಹಾಗೂ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ ಹಾಗೆಯೇ ಲಿಂಕ್ ಮಾಡುವ ದಿನಾಂಕವನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ. ಲಿಂಕ್ ಆಗದಿದ್ದರೆ ಈ ಕೂಡಲೇ ಲಿಂಕ್ ಮಾಡಿ.