Hindu Temple demolish: ಹಿಂದೂ ದೇಗುಲಗಳೇ ಟಾರ್ಗೆಟ್

Hindu Temple demolish: ಕರಾಚಿ: ಸಿಂದ್ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ಕರಾಚಿಯಲ್ಲಿ ಸುಮಾರು 150 ವರ್ಷಗಳ ಹಳೆಯದಾದ ಹಿಂದೂ ದೇವಾಲಯವನ್ನು ಹಳೆಯ ಮತ್ತು ಅಪಾಯಕಾರಿ ಕಟ್ಟಡವೆಂದು ಘೋಷಿಸಿ ನೆಲಸಮಗೊಳಿಸಲಾಗಿದೆ. ಇದು ಹಿಂದೂ ಸಮುದಾಯಕ್ಕೆ ಆಘಾತ ಉಂಟುಮಾಡಿದೆ.

ಇದನ್ನೂ ಓದಿ; ಜಯಪುರ: ಡಿಶ್ ರಿಪೇರಿ ಬಶೀರನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಹೊಡೆದ ಜನ

ಕರಾಚಿಯ ಸೋಲ್ಡರ್ ಬಜಾರ್‌ನಲ್ಲಿರುವ ಮಾರಿ ಮಾತಾ ದೇವಾಲಯವನ್ನು 2 ದಿನಗಳ ಹಿಂದೆ ರಾತ್ರೋರಾತ್ರಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಬುಲ್ಲೋಜರ್‌ಗಳಿಂದ ಒಡೆದು ಹಾಕಲಾಗಿದೆ. ದೇಗುಲ ಕೆಡವುವ ಬಗ್ಗೆ ಪೂರ್ವ ಮಾಹಿತಿಯನ್ನೂ ನೀಡದೇ ಕ್ರಮ ಕೈಗೊಂಡಿರುವುದು ಹಿಂದೂಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ; ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,

Hindu Temple demolish: ರಾತ್ರೋರಾತ್ರಿ ಬುಲ್ಲೋಜರ್‌ಗಳ ಸಮೇತ ಬಂದ ಅಧಿಕಾರಿಗಳು ದೇಗುಲದ ಒಳಭಾಗವನ್ನು ಮೊದಲು ಕೆಡವಿದರು. ಹೊರ ಗೋಡೆ ಮತ್ತು ಮುಖ್ಯ ದ್ವಾರವನ್ನು ಹಾಗೆಯೇ ಬಿಡಲಾಗಿದೆ. ಗರ್ಭಗುಡಿಯನ್ನೇ ಮೊದಲು ನಾಶ ಮಾಡಿದರು. ಈ ಕುರಿತು ಯಾವ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಪಂಚಮುಖಿ ಹನುಮಾನ್ ಮಂದಿರದ ಅರ್ಚಕರಾದ ರಾಮ್‌ನಾಥ್ ಮಿಶ್ರಾ ಎಂಬುವರು ಆಕ್ಷೇಪ ವ್ಯಕ್ತಪಡಿಸಿದರು. ಈ ದೇವಾಲಯವನ್ನು ಸುಮಾರು 150 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇದರಡಿ ಕೆಳಗೆ ನಿಧಿ ಇದೆ ಎಂಬ ಕಟ್ಟುಕಥೆಗಳಿಂದಾಗಿ ದೇಗುಲವನ್ನು ನೆಲಸಮ ಮಾಡಲಾಗಿದೆ ಎಂದು ದೂರಿದರು.

Hindu Temple demolish:
Hindu Temple demolish:

ಇತ್ತೀಚಿನ ಜನಪ್ರಿಯ ಸುದ್ದಿಗಳು 

400 ರಿಂದ 500 ಚದರ್ ಗಜಗಳಷ್ಟು ವಿಸ್ತೀರ್ಣ ಹೊಂದಿರುವ ದೇವಾಲಯ ಇತ್ತೀಚೆಗೆ ಭೂಗಳ್ಳರ ಹಪಾಹಪಿಗೆ ತುತ್ತಾಗಿದೆ. ದೇವಾಲಯ ಅಪಾಯಕಾರಿ ರಚನೆಯಿಂದ ಕೂಡಿದೆ. ಇದನ್ನು ಕೆಡವಬೇಕು ಎಂದು ಅಧಿಕಾರಿಗಳು ಬೇಕಂತಲೇ ಘೋಷಣೆ ಮಾಡಿದ್ದರು ಎಂಬ ಆಪಾದನೆ ಕೇಳಿಬಂದಿದೆ.

ಇತ್ತ ಅಧಿಕಾರಿಗಳು, ಹಿಂದೂ ದೇವಾಲಯವು ಅತ್ಯಂತ ಹಳೆಯ ಮತ್ತು ಅಪಾಯಕಾರಿಯಾಗಿತ್ತು. ಹೀಗಾಗಿ ಅದರ ತೆರವಿಗೆ ಸೂಚಿಸಲಾಗಿತ್ತು. ದೇವರನ್ನು ಸಣ್ಣ ಕೋಣೆಗೆ ವರ್ಗ ಮಾಡಲಾಗಿದೆ. ಅಲ್ಲಿ ಹಿಂದುಗಳು ಚಿಕ್ಕ ದೇಗುಲವನ್ನು ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ; ತಂತಿ ಬೇಲಿಯಲ್ಲಿ ಸಿಲುಕಿ ಚಿರತೆಯ ನರಳಾಟ;ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡು

ದೇಗುಲ ಜಾಗ ಮಾರಾಟ ಆರೋಪ:
ದೇಗುಲ ಇರುವ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಡೆವಲಪರ್‌ಗಳಿಗೆ ಜಮೀನು ಮಾರಾಟ ಮಾಡಲಾಗಿದೆ. ಹೀಗಾಗಿ ಕೆಲ ದಿನಗಳಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಜಾಗ ತೆರವು ಮಾಡುವಂತೆ ಒತ್ತಡ ಹೇರಲಾಗಿತ್ತು ಎಂದು ಹಿಂದೂ ಸಮಾಜದ ಮುಖಂಡ ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಹಿಂದು ಸಮುದಾಯ ಸಿಂದ್ ಪ್ರಾಂತ್ಯದ ಅಧಿಕಾರಿ ಸೈಯದ್ ಮುರಾದ್ ಅಲಿ ಶಾ ಮತ್ತು ಸಿಂದ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಅವರ ಗಮನಕ್ಕೆ ತರಲಾಗಿತ್ತು. ಈ ವಿಷಯವನ್ನು ತುರ್ತು ಪರಿಶೀಲಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಈಗ ದೇವಾಲಯವನ್ನು ನೆಲಸಮ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,

mudigere: (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದ ಆಟೋ, ತನ್ನ ಮಾಲಿಕನಂತೆಯೇ ತೂರಾಡುತ್ತಾ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ತನ್ನ ಮಾಲಿಕನನ್ನು ಹೊರಗೆಸೆದು ತಾನು ಗುಂಡಿಗೆ ಬಿದ್ದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ; ತಂತಿ ಬೇಲಿಯಲ್ಲಿ ಸಿಲುಕಿ ಚಿರತೆಯ ನರಳಾಟ;ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡು

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದಲ್ಲಿ. ಮದ್ಯ ಸೇವಿಸಿ ನಶೆಯಲ್ಲಿಯೇ ಆಟೋ ಚಾಲನೆ ಮಾಡಿದ್ದಾನೆ. ಅಷ್ಟೇ ಅಲ್ಲ ಇಡೀ ರಸ್ತೆಯೇ ತನ್ನದೆಂಬಂತೆ ಅಡ್ಡಾದಿಡ್ಡಿ ಚಾಲನೆ ಚಾಲನೆ ಮಾಡಿದ್ದಾನೆ. ಕೊನೆಗೆ ನಿಯಂತ್ರಣ ತಪ್ಪಿ ತಾನೇ ಆಟೋದಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆಟೋ ಹೊಂಡಕ್ಕೆ ಬಿದ್ದಿದೆ.

ಸದ್ಯ ಈ ಆಟೋದಲ್ಲಿ ಯಾವ ಪ್ರಯಾಣಿಕರು ಹಾಗೂ ಎದುರಿನಿಂದ ಯಾವುದೆ ವಾಹನ ಬರದೇ ಇದ್ದ ಕಾರಣ ಯಾವ ಅಪಾಯ ಸಂಭವಿಸಿಲ್ಲ. ಈ ದೃಶ್ಯವನ್ನು ಹಿಂದಿನಿಂದ ಬರುತ್ತಿದ್ದ ಕಾರು ಚಾಲಕ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.