(High court) ಅಪ್ಪನ ಆಸ್ತಿ ಹಂಚಿಕೆ ಸಂದರ್ಭದಲ್ಲಿ ನನ್ನದು ಎಂದು ಹಕ್ಕು ಚಲಾಯಿಸುತ್ತೀರಾ. ಆದರೆ, ಸಂಕಷ್ಟದಲ್ಲಿ ಸಿಲುಕಿದಾಗ ಮಾತ್ರ ನನ್ನದಲ್ಲ ಅದು ತಂದೆಗೆ ಸೇರಿದ್ದು ಎಂದು ಸಂಬಂಧ ಕಡಿದುಕೊಂಡಂತೆ ಮಾತನಾಡುತ್ತೀರಾ ಎಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಆರೋಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಇದನ್ನೂ ಓದಿ: ಇಬ್ಬರು ಮಕ್ಕಳಿರೋ ಕುಟುಂಬಕ್ಕೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್
ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಗುಲ್ಲನ್ ಪೇಟೆ ನಿವಾಸಿ ಅಬ್ದುಲ್ ಬಷೀರ್ ತೋಟದಲ್ಲಿ ಗಾಂಜಾ ಬೆಳೆಸುತ್ತಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಏ.4 ರಂದು ಪೊಲೀಸರು ದಾಳಿ ಮಾಡಿದ್ದರು. ಆತ ಗಾಂಜಾ ಗಿಡಕ್ಕೆ ನೀರೆರೆಯುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದ. 80 ಗ್ರಾಂನ 12 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು, ಆರೋಪಿ ಅಬ್ದುಲ್ ಬಷೀರ್ ನನ್ನು ಆಲ್ದೂರು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಇದನ್ನೂ ಓದಿ: ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್; ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ
ಅರ್ಜಿದಾರರ ವಾದವೇನು?:
ಆರೋಪಿ ಅಬ್ದುಲ್ ಬಷೀರ್ ಪರವಾದ ಮಂಡಿಸಿದ ವಕೀಲರು, ಕಾಫಿ ತೋಟದಲ್ಲಿ ಗಾಂಜಾ ಗಿಡ ಬೆಳೆಸಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಆದರೆ, ಅವರು ಜಮೀನಿನ ಮಾಲೀಕರಲ್ಲ. ಆ ಜಮೀನು ಅರ್ಜಿದಾರರ ತಂದೆಗೆ ಸೇರಿದ್ದಾಗಿದೆ. ಅಲ್ಲದೆ, ಎಲ್ಲೋ ಬೆಳೆಸಿದ ಗಿಡ ಕಿತ್ತು ತಂದು ತೋಟದಲ್ಲಿ ನೆಟ್ಟು ಚಿತ್ರ ತೆಗೆಯಲಾಗಿದೆ. ಜಮೀನಿನಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರು ಹೀಗೆ ಮಾಡಿರಬಹುದು ಅಥವಾ ಪೊಲೀಸರೇ ಉದ್ದೇಶ ಪೂರ್ವಕವಾಗಿ ಸಂಚು ರೂಪಿಸಿರುವ ಸಾಧ್ಯತೆಯೂ ಇದೆ. ಈಗಾಗಲೇ ಅವರು 46 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೆಲವೇ ದಿನದಲ್ಲಿ ಅವರ ಕುಟುಂಬ ಸದಸ್ಯರೊಬ್ಬರ ಮದುವೆ ನಿಶ್ಚಯವಾಗಿದೆ. ಇದೆಲ್ಲವನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ರೈತರೇ ಗಮನಿಸಿ; ಬರಪರಿಹಾರದ ಹಣ ಜಮಾ ಕುರಿತು ಬಿಗ್ ಅಪ್ಡೇಟ್; ಬ್ಯಾಂಕ್ ಅಧಿಕಾರಿಗಳಿಗೆ ಸರ್ಕಾರದಿಂದ ಎಚ್ಚರಿಕೆ
ಸರ್ಕಾರ ವಕೀಲರ ವಾದವೇನು?:
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಅರ್ಜಿದಾರರು ಗಾಂಜಾ ಬೆಳೆಸುತ್ತಿರುವುದು ಸಾಬೀತಾಗಿದೆ. ಈ ವೇಳೆ ಆತ ಓಡಿ ಹೋಗಿ ಕಂಬವನ್ನು ಹಿಡಿದುಕೊಂಡು ಬರಲು ಪ್ರತಿರೋಧ ವ್ಯಕ್ತಪಡಿಸಿದ ವೇಳೆ ಸಿಬ್ಬಂದಿ ಸಹಾಯದಿಂದ ಆತನನ್ನು ಠಾಣೆಗೆ ಕರೆದೊಯ್ಯಲಾಗಿದೆ. ಇದೀಗ ಪ್ರಕರಣ ತನಿಖಾ ಹಂತದಲ್ಲಿದ್ದು. ಆತನಿಗೆ ಜಾಮೀನು ಮಂಜೂರು ಮಾಡದಂತೆ ಸರ್ಕಾರಿ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ; ಈ ಎಲ್ಲಾ ಮೊಬೈಲ್ ಫೋನ್ ಗಳು ಬ್ಯಾನ್; ಯಾಕೆ? ಯಾವ ಮೊಬೈಲ್ ಫೋನ್, ಇಲ್ಲಿದೆ ನೋಡಿ
(High court) ಹೈಕೋರ್ಟ್ ಹೇಳಿದ್ದೇನು?
ಅಪ್ಪನ ಆಸ್ತಿ ಹಂಚಿಕೆ ಸಂದರ್ಭದಲ್ಲಿ ನನ್ನದು ಎಂದು ಹಕ್ಕು ಚಲಾಯಿಸುತ್ತೀರಾ. ಆದರೆ, ಸಂಕಷ್ಟದಲ್ಲಿ ಸಿಲುಕಿದಾಗ ಮಾತ್ರ ನನ್ನದಲ್ಲ. ಅದು ತಂದೆಗೆ ಸೇರಿದ್ದು ಎಂದು ಸಂಬಂಧ ಕಡಿದುಕೊಂಡಂತೆ ಮಾತನಾಡುತ್ತೀರಾ. ನಾನು ಕೂಡ ರೈತ. ಗಿಡ ಕಿತ್ತ ತಕ್ಷಣ ಎಲೆ ಮುದುಡುತ್ತದೆ. ಈ ಚಿತ್ರ ನೋಡಿದರೆ ಹಾಗೆ ಅನಿಸಲ್ಲ. ಗಿಡದ ಬುಡಕ್ಕೆ ಗೊಬ್ಬರ ಹಾಕಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಹೊಸದಾಗಿ ಗುಂಡಿ ತೋಡಿದಂತೆ ಇಲ್ಲ. ಕಾಫಿ ತೋಟದಲ್ಲಿ ಕಪ್ಪು ಮಣ್ಣು ಇರುವುದಿಲ್ಲ. ಅರ್ಜಿದಾರರೇ ಬಳಸಿಕೊಳ್ಳಲು ಗಿಡ ನೆಟ್ಟು ಪೋಷಿಸುತ್ತಿರುವಂತೆ ಇದೆ. ಆತನ ಪತ್ನಿಯೇ ಠಾಣೆಗೆ ತೆರಳಿ ದೂರು ದಾಖಲಿಸಿದಂತಿದೆ. ಅಲ್ಲದೆ ಸರ್ಕಾರಿ ವಕೀಲರು ಆತನಿಗೆ ಗಾಂಜಾ ಸೇವನೆ ಅಭ್ಯಾಸ ಇದೆ ಎಂದಿದ್ದಾರೆ. ಆದರೆ ಸಾಕ್ಷ್ಯಧಾರ ಒದಗಿಸಿಲ್ಲ ಎಂದು ಆರೋಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್







Leave a Reply