Gruha Lakshmi Scheme ; ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಗೆ (Gruha Lakshmi scheme) ಇಂದು ಚಾಲನೆ ದೊರೆಯಲಿದ್ದು, ಏಕ ಕಾಲದಲ್ಲಿ ರಾಜ್ಯದ ಮನೆಯೊಡತಿಯರಿಗೆ ಯೋಜನೆ ಪಾವತಿಯಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ; BPL ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಇಂದಿನ ಕಾರ್ಯಕ್ರಮದ ಸುತ್ತಮುತ್ತ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಾಹನ ಸಂಚಾರ ನಿರ್ಬಂಧಿಸಿ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕಾರ್ಡ್ (Smart card) ಕೂಡ ವಿತರಣೆ ಮಾಡಲಾಗುತ್ತದೆ.
15 ಲಕ್ಷದಿಂದ 17 ಲಕ್ಷ ಮಹಿಳೆಯರಿಗೆ 2000 ರೂ. ಹಣ ವರ್ಗಾವಣೆ ಇಲ್ಲ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು 1.28 ಕೋಟಿ ಮಹಿಳೆಯರು ಅರ್ಹ ಫಲಾನುಭವಿಗಳು ಇದ್ದಾರೆ, ಅದರಲ್ಲಿ ಈವರೆಗೆ 1.11 ಕೋಟಿ ಫಲಾನುಭವಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈ ಪೈಕಿ 15 ಲಕ್ಷದಿಂದ 17 ಲಕ್ಷ ಮಹಿಳೆಯರಿಗೆ 2000 ರೂ. ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ

ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ ಅಂತಿಮ ಪಟ್ಟಿ ಬಿಡುಗಡೆ; ಈ ಲಿಸ್ಟ್ ನಲ್ಲಿ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ
ಈ ಗೃಹಲಕ್ಷ್ಮೀ ಯೋಜನೆಗೆ 15 ಲಕ್ಷದಿಂದ 17 ಲಕ್ಷ ಮಹಿಳೆಯರು ವಂಚಿತರಾಗಲು ಕಾರಣವೇನು? ಆಗಸ್ಟ್ ತಿಂಗಳಿನಲ್ಲಿ ವಂಚಿತರಾದರೆ ಏನು ಮಾಡಬೇಕು ಎಂಬುದು ಈ ಲೇಖನದಲ್ಲಿ ತಿಳಿಸಿಕೊಂಡ್ತಿವಿ.
ಆಗಸ್ಟ್ ತಿಂಗಳಿನಲ್ಲಿ ವಂಚಿತರಾಗಲು ಕಾರಣವೇನು?;
* ಕೆವೈಸಿ ಸಮಸ್ಯೆ(KYC)
* ಆಧಾರ್ ಕಾರ್ಡ್ ಅಪ್ಡೇಟ್ ಮಾಡದ ಕಾರಣ
* ಆಧಾರ್ ಕಾರ್ಡ್ ಗೆ ಆಕೌಂಟ್ ಲಿಂಕ್ ಮಾಡದಿರುವುದು
* ಪಡಿತರ ಚೀಟಿ ಅಪ್ಡೇಟ್ ಮಾಡದೇ ಇರುವುದರಿಂದ
* ಮೃತಪಟ್ಟಿರುವವರ ಹೆಸರನ್ನು ಡಿಲಿಟ್ (Delete) ಮಾಡಿಸಿ ಅಪ್ಡೇಟ್ ಮಾಡಿಸದೇ ಇರುವುದು.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-29.08.2023
ಆಗಸ್ಟ್ (August) ತಿಂಗಳಿನಲ್ಲಿ ವಂಚಿತರಾದವರು ಏನು ಮಾಡಬೇಕು?:
* ಅಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ (aadhar card update)
* ಬ್ಯಾಂಕ್ ಅಕೌಂಟ್ ಅಪ್ಡೇಟ್(Bank account update) ಮಾಡಿಸಿ
* ಪಡಿತರ ಚೀಟಿಯ ಮನೆ ಯಜಮಾನರನ್ನು ಬದಲಿಸಿ ಮತ್ತೊಮ್ಮೆ ನೋಂದಣಿ ಮಾಡಿಸಿ
ಇನ್ನು ಇಂದಿನಿಂದ ಗೃಹಲಕ್ಷ್ಮೀ (Gruha Lakshmi) ಯೋಜನೆಗೆ ಅರ್ಜಿ ಸಲ್ಲಿಸಿದವರು ಸೆಪ್ಟೆಂಬರ್ (September) ತಿಂಗಳಿಂದ 2000 ರೂ. ಹಣ ಪಡೆಯಲು ಅರ್ಹರಾಗಿರುತ್ತೀರಿ.
ಪ್ರಮುಖ ಸುದ್ದಿಗಳನ್ನು ಓದಿ
- ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು; ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು
- ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!; ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
- ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿಗಳು ಯಾವುದು ಗೊತ್ತೇ?
- ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?; ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
- darshan toogudeepa: ಕೊನೆಗೂ ಮಾಧ್ಯಮದರ ಕ್ಷಮೆ ಕೇಳಿದ ನಟ ದರ್ಶನ್; ಅಷ್ಟಕ್ಕೂ d boss ಹಾಗೂ ಮೀಡಿಯಾದವರ ಮಧ್ಯೆ ಏನಾಗಿತ್ತು?
- ಚಂದ್ರಯಾನ 3 ಯಶಸ್ವಿಯಾದರೆ ಏನು ಲಾಭ; ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ
- ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply