Gruha Lakshmi Scheme : ಗೃಹಲಕ್ಷ್ಮಿ ಯೋಜನೆಯ ಪಟ್ಟಿ ಬಿಡುಗಡೆ

Gruha Lakshmi Scheme : ರಾಜ್ಯ ಸರ್ಕಾರದ ಮಹತ್ವದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಸಹ ಒಂದಾಗಿದ್ದು, ಈ ಯೋಜನೆಯನ್ನು ಚುನಾವಣಾ ಸಮಯದಲ್ಲಿ ಘೋಷಿಸಲಾಗಿತ್ತು, ಈ ಸರ್ಕಾರ ಹಂತ ಹಂತವಾಗಿ ತನ್ನ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಯಾರಿಗೆ ಬರಲಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು ತಿಳಿಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಗಾಗಿಯನ್ನು ತಿಳಿಸಿಕೊಡ್ತೀವಿ.

ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಸ್ಥಳ ನಿಗದಿ:
ಗೃಹಲಕ್ಷ್ಮಿ ಯೋಜನೆಯ ಚಾಲನೆಗೆ ಅಂತಿಮವಾಗಿ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಾಗಿದೆ. 30 ಆಗಸ್ಟ್ 2023 ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಸರ್ಕಾರದ ಬಹು ನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ.

ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಯಾವಾಗ ಫಲಾನುಭವಿ ಖಾತೆಗೆ ಬರಲಿದೆ ಮತ್ತು ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದು ತಿಳಿಸಿಕೊಂಡ್ತಿವಿ.

ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ?:
ಗೃಹಲಕ್ಷ್ಮೀ ಯೋಜನೆಯಡಿ ಇಲ್ಲಿಯವರೆಗೆ 1.28 ಕೋಟಿ ಕುಟುಂಬದ ಯಜಮಾನಿಯರು ನೋಂದಣಿ ಮಾಡಿಕೊಂಡಿದ್ದು ಇದರಲ್ಲಿ ಅರ್ಹ ಎಲ್ಲಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣವನ್ನು ನೇರವಾಗಿ ಮನೆ ಯಜಮಾನಿಯರ ಖಾತೆಗೆ ಹಾಕಲಾಗುತ್ತದೆ.

Gruha Lakshmi Scheme :
Gruha Lakshmi Scheme :

ನಿಯಮಗಳನ್ನು ಪಾಲಿಸದವರಿಗಿಲ್ಲ ಮೊದಲ ಕಂತು ಹಣ ಇಲ್ಲ
* ಗೃಹಲಕ್ಷ್ಮೀ ಯೋಜನೆಗೆ (Gruha Lakshmi Scheme :)ಅರ್ಜಿ ಸಲ್ಲಿಸಿದ ನಂತರ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಅರ್ಜಿ ತಿದ್ದುಪಡಿ ಅಗದಿರುವವರಿಗೆ ಹಣ ಜಮಾ ಅಗುವುದಿಲ್ಲ.
* ಅರ್ಜಿ ಸಲ್ಲಿಸುವ ಸಮಯದಲ್ಲಿ ಮಂಜೂರು ಪತ್ರ ದೊರೆಯದೆ ಒಂದು ವಾರದ ನಂತರ ಮಂಜೂರು ಪತ್ರ ಡೌನ್ಲೋಡ್ ಮಾಡಿಕೊಳ್ಳಿ ಎಂದು ಬಂದು ಆಗಸ್ಟ್ 30 ಒಳಗಾಗಿ ಮಂಜೂರು ಪತ್ರ ದೊರೆಯದವರಿಗೂ ಮೊದಲ ಕಂತಿನ ಹಣ ಸಿಗುವುದಿಲ್ಲ.
* ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆಯ ವಿವರ ಕೊಡದೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಲು ತಿಳಿಸಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿದರೆ ಹಣ ಜಮಾ ಆಗುವುದಿಲ್ಲ.

ಜಮಾ ಆಗದೆ ಇದ್ದರೆ ಹೀಗೆ ಮಾಡಿ:
* ಈ ಮೇಲಿನ ಕಾರಣಗಳಿಂದ ಮೊದಲನೆ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗದೆ ಇದ್ದರೆ ಅರ್ಜಿ ಸಲ್ಲಿಸದವರು ಕೂಡಲೇ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಮಂಜೂರು ಪತ್ರ ಪಡೆಯಿರಿ.
* ಅರ್ಜಿ ಸಲ್ಲಿಸಿದ ನಂತರ E-kyc ಅಗಿರುತ್ತದೆ ಮಂಜೂರು ಪತ್ರ ಡೌನ್ಲೋಡ್ ಮಾಡಲು ಒಂದು ವಾರದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಡೌನ್ಲೋಡ್ ಲಿಂಕ್ ಮೇಲೆ ಒತ್ತಿ ಮಂಜೂರು ಪತ್ರ ಬಂದಿರುವುದನ್ನು ಖಚಿತಪಡಿಸಿಕೊಳ್ಳಿ.
* ಆಧಾರ್ ಲಿಂಕ್ ಆಗಿರುವ ಖಾತೆಗೆ ಹಣ ವರ್ಗಾವಣೆ ಆಯ್ಕೆಯನ್ನು ಕೊಟ್ಟಿರುವವರು ಒಮ್ಮೆ My aadhar app ಡೌನ್ಲೋಡ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.

ಇನ್ನು ಈ ರೀತಿಯಾಗಿಯೂ ಕೂಡ ಚೆಕ್ ಮಾಡಬಹುದು:
* ಗೃಹಲಕ್ಷ್ಮಿ ಯೋಜನೆಗೆ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಪಡೆಯಲು ಈ https://ahara.kar.nic.in/WebForms/Show_Village_List.aspx ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಂತರ ಊರಿನ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ, ಹಳ್ಳಿ ಆಯ್ಕೆಯನ್ನು ಮಾಡಿಕೊಂಡು Go ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಅರ್ಹ ಪಟ್ಟಿ ಪಡೆಯಬಹುದು.