Gruha Laxmi: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೀರಾ? ನಿಮ್ಮ ಗೃಹಲಕ್ಷ್ಮಿ ಯೋಜನೆ ನೋಂದಣಿಯ ವೇಳಾಪಟ್ಟಿಯ ವಿವರಗಳನ್ನು ಪಡೆಯಬೇಕಾ?, ಹಾಗಿದ್ದರೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ, ಓದಿ ನೋಂದಣಿ ವೇಳಾಪಟ್ಟಿಯನ್ನು ಹೇಗೆ ನೋಡುವುದು ಎಂಬುದನ್ನು ತಿಳಿದಿಕೊಳ್ಳಿ
ಇದನ್ನೂ ಓದಿ; ಶೃಂಗೇರಿ ಹಾಗೂ ಹೊರನಾಡು ದೇವಸ್ಥಾನಗಳಿಗೆ ಭೇಟಿ ನೀಡಿದ ಜಾರ್ಖಂಡ್ ರಾಜ್ಯಪಾಲರ ಕುಟುಂಬ
ಗೃಹಲಕ್ಷ್ಮಿಯೋಜನೆ ನೋಂದಣಿ ವೇಳಾಪಟ್ಟಿ ಹೇಗೆ ನೋಡುವುದು?
ನೀವೆಲ್ಲರೂ ಗೃಹ ಲಕ್ಷ್ಮೀ ಅರ್ಜಿ ಸಲ್ಲಿಸಲು ನಿಮಗೆ ಯಾವ ದಿನಾಂಕ, ಯಾವ ಸಮಯ ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಕೇಳಗಿನ ಸರಳ ವಿಧಾನದ ಮೂಲಕ ತಿಳಿಯಿರಿ.
* ಮೊದಲಿಗೆ ಗೃಹ ಲಕ್ಷ್ಮಿಸೇವಾ ಸಿಂಧು ಅಧಿಕೃತ ವೆಬ್ಸೈಟ್ ಲಿಂಕ್ಗೆ ಭೇಟಿ ನೀಡಿ.
* ಅಲ್ಲಿ“ ನಿಮ್ಮಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ” ಎಂದಿರುತ್ತದೆ. ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
* ಅಲ್ಲಿಯೇ ಕೇಳಗೆ ಇರುವ 6 ಅಕ್ಷರಗಳ ಕ್ಯಾಪ್ಟಾ ಎಂಟರ್ ಮಾಡಿ, ಸ್ಥಿತಿಯನ್ನು ಪರೀಶಿಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
* ಒಂದು ಹೊಸ ಪುಟ ಓಪನ್ ಆಗುತ್ತದೆ. ಅದಲ್ಲಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ನೋಂದಣಿ ದಿನಾಂಕ, ಸಮಯ, ಸ್ಥಳ ಕಾಣುತ್ತದೆ.
* ನಿಮಗೆ ನಿಗದಿ ಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳಕ್ಕೆ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಮತ್ತು ಬಾಪುಜಿ ಸೇವಾ ಕೇಂದ್ರ) ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ; ಚಿಕ್ಕಮಗಳೂರು: ವರುಣಾರ್ಭಟಕ್ಕೆ ಜಿಲ್ಲೆಯ ಹಲವೆಡೆ ಅವಾಂತರ ಸೃಷ್ಟಿ
ಎಸ್.ಎಮ್.ಎಸ್ ಮಾಡುವ ಮೂಲಕ ನೋಂದಣಿ ಡೇಟ್ ಫಿಕ್ಸ್ ಮಾಡಿಕೊಳ್ಳಿ:
ಈ ಬಾರಿ ನೋಂದಣಿಗಾಗಿ ಯಾರೂ ಪರದಾಡಬೇಕಿಲ್ಲ ಕೆಲಸ ಬಿಟ್ಟು ದಿನಗಟ್ಟಲೆ ಪರಿತಪಿಸಬೇಕಿಲ್ಲ ಮೊಬೈಲ್ನಿಂದ ಕೇವಲ ಒಂದು ಎಸ್.ಎಮ್.ಎಸ್ ಮಾಡಿದರೂ ಸಾಕು ನಿಮ್ಮ ನೋಂದಣಿಯ ದಿನಾಂಕ, ಸ್ಥಳ, ಸಮಯದ ಸಂಪೂರ್ಣ ವೇಳಾಪಟ್ಟಿಯೇ ನಿಮ್ಮ ಮೊಬೈಲ್ಗೆ ಬರುತ್ತದೆ.
ಆ ಪ್ರಕಾರ ಗೊತ್ತು ಮಾಡಿದ ದಿನದಂದು, ಸೂಕ್ತ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ನಿಮಗೆ ಗೊತ್ತುಪಡಿಸಿದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಹೋದರೆ ಸಾಕು, ಕೆಲವೇ ನಿಮಿಷಗಳಲ್ಲಿ ನೋಂದಣಿ ಕಾರ್ಯ ಮುಗಿಯುತ್ತದೆ ಇದಕ್ಕಾಗಿ ಯಾವುದೇ ಶುಲ್ಕ, ಪಾವತಿಸಬೇಕಿಲ್ಲ.

ಎಸ್.ಎಮ್.ಎಸ್ ಕಳಿಸುವ ವಿಧಾನ:
ಸಾಮಾನ್ಯವಾಗಿ ಮೊಬೈಲ್ ಬಳಸುವ ಎಲ್ಲರಿಗೂ ಎಸ್.ಎಮ್.ಎಸ್ ಸಂದೇಶ ಕಳಿಸುವ ವಿಧಾನ ಗೊತ್ತಿರುತ್ತದೆ, ರೇಷನ್ ಕಾರ್ಡಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ನಿಂದ ಎಸ್.ಎಮ್.ಎಸ್ ಮಾಡಬೇಕು.
ಮೊಬೈಲ್ನ Text message ಬಾಕ್ಸ್ ನಲ್ಲಿ ನಿಮ್ಮ ರೇಷನ್ ಕಾರ್ಡ್ 12 ಸಂಖ್ಯೆಯ ನಂಬರ್ ಅನ್ನು ಟೈಪ್ ಮಾಡಿ ಯೋಜನೆಯ 8147500500 ಸಂಖ್ಯೆಗೆ ಸೆಂಡ್ ಮಾಡಬೇಕು.
ಎಸ್.ಎಮ್.ಎಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮಗೆ ಸರ್ಕಾರದಿಂದ ‘ಗೃಹಲಕ್ಷ್ಮಿ, ಯೋಜನೆ ನೋಂದಣಿ ವೇಳಾಪಟ್ಟಿ, ಸಂದೇಶ ಬರುತ್ತದೆ. ಅದರಲ್ಲಿ ಆರ್ಸಿ (ರೇಷನ್ ಕಾರ್ಡ್ ನಂಬರ್, ಸ್ಥಳ: ದಿನಾಂಕ ಹಾಗೂ ಸಮಯದ ಮಾಹಿತಿ ಇರುತ್ತದೆ ಆ ಪ್ರಕಾರ ಸೂಕ್ತ ದಾಖಲಾತಿಗಳೊಂದಿಗೆ ಹೋಗಿ ಸರಳವಾಗಿ ನೋಂದಣಿ ಮಾಡಬಹುದು.
ನಿಗಧಿತ ಸಮಯಕ್ಕೆ ಭೇಟಿ ನೀಡಿ ನೋಂದಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ, ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಕಚೇರಿ ಸಮಯದ ನಂತರ (ಸಂಜೆ 5.00 ಗಂಟೆ ನಂತರ ತೆರಳಿ ನೋಂದಾಯಿಸಿಕೊಳ್ಳಬಹುದು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು: ವರುಣನ ಅಟ್ಟಹಾಸಕ್ಕೆ ಜಿಲ್ಲೆಯಲ್ಲಿ ಎರಡನೇ ಬಲಿ
- ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಪ್ರಾರಂಭ;ಯಾವುದೆಲ್ಲಾ ದಾಖಲೆಗಳು ಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು?
- ಮೂಡಿಗೆರೆ: ದೊಣ್ಣೆಯಿಂದ ಹೊಡೆದು ಪತ್ನಿಯನ್ನೇ ಕೊಲೆ ಮಾಡಿದ ಪತಿ
ನೋಂದಣಿಗೆ ಕಂಡೊಯ್ಯಬೇಕಾದ ದಾಖಲೆಗಳು ಯಾವುದು?:
* ರೇಷನ್ ಕಾರ್ಡ್
* ಯಜಮಾನಿಯ ಹಾಗೂ ಯಜಮಾನಿಯ ಪತಿಯ ಆಧಾರ್ ಕಾರ್ಡ್
* ಯಜಮಾನಿಯ ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್/ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಯ ವಿವರ
Gruha Laxmi: ಆಗಸ್ಟ್ 15ಕ್ಕೆ ಹಣ ಜಮಾ:
ನೋಂದಣಿಯಾದ ಮೇಲೆ ಈಗಾಗಲೇ ಆಧಾರ್ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಅಥವಾ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೇರ ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತದೆ. ಆಗಸ್ಟ್ 16ಕ್ಕೆ ಮೊದಲ ತಿಂಗಳ ಕಂತು ಜಮೆಯಾಗಲಿದೆ.
ಇದನ್ನೂ ಓದಿ; ಮೂಡಿಗೆರೆ: ಚಾರ್ಮಾಡಿ ಘಾಟ್ನಲ್ಲಿ ಆವರಿಸಿದ ದಟ್ಟ ಮಂಜು
ಸಹಾಯವಾಣಿ:
ಗೃಹಲಕ್ಷ್ಮಿ, ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಉಚಿತ ಸಹಾಯವಾಣಿ ಸಂಖ್ಯೆ, 1902ಗೆ ಬೆಳಿಗೆ 9-00 ರಿಂದ ಸಂಜೆ 6-00 ಗಂಟೆಯವರೆಗೆ ಕರೆ ಮಾಡಬಹುದು.






Leave a Reply