FRUITS ID: ರೈತರೇ, ಬರ ಪರಿಹಾರ ಬೇಕಿದ್ದರೆ ಹೀಗೆ ಮಾಡಿ

FRUITS ID: ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್.ಐ.ಡಿ (FID) ಮಾಡಿಸಲೇಬೇಕು. ಒಂದು ವೇಳೆ ಎಫ್.ಐ.ಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್.ಐ.ಡಿ ಮಾಡದೆ ಇರುವ ರೈತರು ಕೂಡಲೇ ಎಫ್.ಐ.ಡಿ ಮಾಡಿಸಿಕೊಳ್ಳಿ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 21.11.2023

ಇದಕ್ಕೆ ಬೇಕು ಎಫ್.ಐ.ಡಿ ಸಂಖ್ಯೆ:
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ ಕಡ್ಡಾಯವಾಗಿದೆ. ಇದನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬೇಕು. ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯಡಿ ರೈತರು ಸೌಲಭ್ಯ ಪಡೆಯಲು ಈ ನಂಬರ್ ಅತಿ ಅವಶ್ಯಕವಾಗಿದೆ.

ಬರ ಪರಿಹಾರಕ್ಕಾಗಿ ಎಫ್.ಐ.ಡಿ ನಂಬರ್ ಬೇಕೇ ಬೇಕು:(FRUITS ID: )
ಬರ ಪರಿಹಾರದ ಹಣವನ್ನು ರೈತರು ಪಡೆದುಕೊಳ್ಳಬೇಕು ಎಂದರೆ ಇದಕ್ಕೆ ಎಫ್.ಐ.ಡಿ ಸಂಖ್ಯೆಯನ್ನು ಹೊಂದಬೇಕಾಗಿರುತ್ತದೆ. ಇಲ್ಲದಿದ್ದರೆ ಸರ್ಕಾರ ನಿಮ್ಮ ಖಾತೆಗೆ ಹಣ ಮಾಡುವುದಿಲ್ಲ. ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ; ಈ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಫ್.ಐ.ಡಿ ಮಾಡಿಸದವರು ಈಗ ಏನು ಮಾಡಬೇಕು?:
ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್.ಐ.ಡಿ ಮಾಡಿಸಬೇಕು

(FRUITS ID:) ಪ್ರೂಟ್ಸ್ ನಂಬರ್ ಎಂದರೆ ಏನು? ಏಕೆ ಉಪಯೋಗ?
ಇದು ರೈತರಿಗಾಗಿ ಮಾಡಿರುವ ಪೋರ್ಟಲ್ ಆಗಿದೆ. ಕೃಷಿ ಜಮೀನಿನ ಮಾಹಿತಿಯನ್ನು ಇದರಲ್ಲಿ ನೀಡಲಾಗುತ್ತದೆ. ಈ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಾಗ ರೈತರಿಗೆ ಎಫ್.ಐ.ಡಿ ನಂಬರ್ ಲಭ್ಯವಾಗುತ್ತದೆ. ಇಲ್ಲಿ ಒಮ್ಮೆ ಎಫ್.ಐ.ಡಿ ನಂಬರ್ ಅನ್ನು ಪಡೆದರೆ ಆ ರೈತರ ಸಂಪೂರ್ಣ ಜಮೀನಿನ ಮಾಹಿತಿಯು ಇಲ್ಲಿ ಸಿಗುತ್ತದೆ. ಜಮೀನಿನ ವಿವರ, ಬೆಳೆದ ಬೆಳೆಗಳ ಸಹಿತ ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯಗಳನ್ನು ಪಡೆಯಲು ನೋಂದಾಯಿಸಿಕೊಳ್ಳಬಹುದು.

FRUITS ID: ರೈತರೇ, ಬರ ಪರಿಹಾರ ಬೇಕಿದ್ದರೆ ಹೀಗೆ ಮಾಡಿ
FRUITS ID: ರೈತರೇ, ಬರ ಪರಿಹಾರ ಬೇಕಿದ್ದರೆ ಹೀಗೆ ಮಾಡಿ

ನೋಂದಣಿ ಹೇಗೆ? ಯಾವೆಲ್ಲ ದಾಖಲೆಗಳು ಬೇಕು?
ಸಮೀಪದ ಕೃಷಿ ಇಲಾಖೆ (ಹೋಬಳಿಯ ರೈತ ಸಂಪರ್ಕ ಕೇಂದ್ರ), ತೋಟಗಾರಿಕೆ ಇಲಾಖೆಗೆ ದಾಖಲೆಗಳೊಂದಿಗೆ ರೈತ ಭೇಟಿ ನೀಡಬೇಕು.

ಆರ್.ಟಿ.ಸಿ / ಪಹಣಿ /, ಆಧಾರ್ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಪುಸ್ತಕದ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೋಟೊ, ಮೊಬೈಲ್ ನಂಬರ್ ನೀಡಿದರೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಂಡು ಬಳಿಕ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ.

ಇದನ್ನೂ ಓದಿ; ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಈಗೆಷ್ಟಿದೆ ಗ್ಯಾಸ್ ಬೆಲೆ?

ಮೊಬೈಲ್ ನಲ್ಲಿಯೇ ಎಫ್.ಐ.ಡಿ ಸಂಖ್ಯೆ ಪಡೆಯಿರಿ:
* ಫ್ರೂಟ್ಸ್ ವೆಬ್ ಸೈಟ್‌ಗೆ ಭೇಟಿ ನೀಡಿ ಅಲ್ಲಿ Citizen Login ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.(https://fruits.karnataka.gov.in/Login.aspx)
* ಬಳಿಕ ವೆಬ್ ಸೈಟ್ ಬಲಬದಿಯಲ್ಲಿ ಅನುಕೂಲಕ ಭಾಷೆಯಾಗಿ ಕನ್ನಡ ಮತ್ತು ಇಂಗ್ಲಿಷ್ ಅನ್ನು ನೀಡಲಾಗಿದ್ದು, ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
* ಇದಾದ ಮೇಲೆ Citizen Registration ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿ ನಿಮ್ಮ ಆಧಾರ್ ಕಾರ್ಡ್‌ ನಲ್ಲಿರುವಂತೆ ಹೆಸರನ್ನು ನಮೂದು ಮಾಡಲು ಸೂಚಿಸುತ್ತದೆ.
* ಜೊತೆಗೆ ಆಧಾರ್ ಸಂಖ್ಯೆಯನ್ನೂ ಟೈಪ್ ಮಾಡಿ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಸಬ್ ಮಿಟ್ ಮಾಡುವುದು.
* ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇ-ಮೇಲ್ ವಿಳಾಸ ಇದ್ದಲ್ಲಿ ಅದನ್ನೂ ನಮೂದಿಸುವುದು. ಇಲ್ಲದೇ ಹೋದ ಪಕ್ಷದಲ್ಲಿ “NO” ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು.
* ಬಳಿಕ “PROCEED” ಬಟನ್ ಅನ್ನು ಆಯ್ಕೆ ಮಾಡಬೇಕು.
* ಬಳಿಕ ನಮೂದಿಸಲ್ಪಟ್ಟ ಮೊಬೈಲ್ ಸಂಖ್ಯೆಗೆ “OTP” ಬಂರುತ್ತದೆ. ಆ ಸಂಖ್ಯೆಯನ್ನು ನಮೂದಿಸಿ “Submit” ಮೇಲೆ ಕ್ಲಿಕ್ ಮಾಡಬೇಕು.
* ಈಗ ಪ್ರೂಟ್ಸ್ ಖಾತೆಗೆ ಪಾಸ್ ವರ್ಡ್ ರಚಿಸಬೇಕಾಗುತ್ತದೆ. ಇದಾದ ಬಳಿಕ ಫ್ರೂಟ್ಸ್ ಲಾಗಿನ್ ಲಭ್ಯವಾಗುತ್ತದೆ.
* ಪುನಃ Citizen Login ಮೂಲಕ ನಿಮ್ಮ ಪ್ರೂಟ್ಸ್ ಖಾತೆಗೆ ಲಾಗಿನ್ ಆಗಿ ಅದನ್ನು ತೆರೆಯಬೇಕು.

* ಲಾಗಿನ್ ಆದ ಬಳಿಕ “REGISTRATION” (ನೋಂದಣಿ) ಆಯ್ಕೆಯಲ್ಲಿ Online Registration ಮೇಲೆ ಕ್ಲಿಕ್ ಮಾಡಬೇಕು.
* ಹೊಸತಾಗಿ ಅರ್ಜಿ ಸಲ್ಲಿಬೇಕಿದ್ದರಿಂದ ಅಲ್ಲಿ Registration New Farmer ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
* ನಿಮ್ಮ ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಭೂಮಿಯ ಮಾಹಿತಿಯನ್ನು ಹಾಗೂ ಆಯ್ಕೆಯಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೆ ನಂಬರ್ ಗಳನ್ನು ನಮೂದು ಮಾಡಬೇಕು.
* ಅಲ್ಲದೆ, ಬ್ಯಾಂಕ್ ಖಾತೆ ವಿವರ ನಮೂದಿಸಿದ ಬಳಿಕ ಪೋಟೊವನ್ನು ಅಪ್ಲೋಡ್ ಮಾಡಬೇಕು.
* ಎಲ್ಲ ವಿವರ ಭರ್ತಿ ಮಾಡಿದ ನಂತರ “save and Forward” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
* ಈ ಎಲ್ಲ ಪ್ರಕ್ರಿಯೆಗಳ ನಂತರ ನಿಮಗೆ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ.

ಎಫ್.ಐ.ಡಿ ಸಂಖ್ಯೆಯಿಂದ ಏನೆಲ್ಲ ಲಾಭ:(FRUITS ID:) 
ಈ ವೆಬ್ ಪೋರ್ಟಲ್ ನಲ್ಲಿ ಹೆಸರನ್ನು ನೋಂದಾಯಿಸಿಕೊಂಡರೆ ವಿವಿಧ ಕೃಷಿಗೆ ಪೂರಕ ಇಲಾಖೆಗಳ ಸೌಲಭ್ಯ, ಬೆಳೆ ಸಾಲ, ಬೆಳೆ ವಿಮೆ, ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ ಹಾಗೂ ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುತ್ತವೆ. ಇನ್ನು ಕಳೆದ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ ರೈತ ಶಕ್ತಿ ಯೋಜನೆಯಡಿ ಪ್ರತಿಯೊಬ್ಬ ಕೃಷಿಕನಿಗೂ 1 ಎಕರೆಗೆ 250 ರೂ.ಯಂತೆ ಗರಿಷ್ಠ 5 ಎಕರೆಗೆ 1250 ರೂ. ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರ ಜಮೆಗೊಳ್ಳುತ್ತದೆ. ಹೀಗಾಗಿ ಇದೂ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಲಾಭವನ್ನು ಪಡೆಯಬೇಕು ಎಂದರೆ ಕೃಷಿಕ ಕಡ್ಡಾಯವಾಗಿ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರಬೇಕು.

ಎಫ್.ಐ.ಡಿ ಸಂಖ್ಯೆ ಇದ್ದರೆ ತಿಳಿಯುವುದು ಹೇಗೆ:
ಈಗಾಗಲೇ ಎಫ್.ಐ.ಡಿ ಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, ಆ ನಂಬರ್ ನಿಮಗೆ ನೆನಪಿಲ್ಲದೇ ಇದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ವೆಬ್ ಸೈಟ್‌ನ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ (https://fruitspmk.karnataka.gov.in/) ಅಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಫ್.ಐ.ಡಿ ಸಂಖ್ಯೆ ತಿಳಿಯುತ್ತದೆ.

ಎಫ್.ಐ.ಡಿ ಮಾಡಿಸಲು ಕೊನೆಯ ದಿನಾಂಕ ಯಾವಾಗ:
ನವೆಂಬರ್ 30 ಕೊನೆಯ ದಿನಾಂಕವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಿ

  1. ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…
  2. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?
  3. ನಿಮ್ಮ ವಾಹನಗಳಿಗೆ ಇನ್ನೂ hsrp ನಂಬರ್ ಪ್ಲೇಟ್ ಹಾಕಿಲ್ವಾ..?; ಚಿಂತೆ ಬಿಡಿ, ಗಡುವು ವಿಸ್ತರಿಸಿದ ಸರ್ಕಾರ; ಏನಿದು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ? ಅಳವಡಿಕೆ ಹೇಗೆ
  4. ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರು; ಇಷ್ಟು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ; ಈ ಜಿಲ್ಲೆಗೆ ನಿರಾಸೆ ಮೂಡಿಸಿದ ಮಳೆರಾಯ
  5. ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ;  ಯಾವ ಯಾವ ಜಿಲ್ಲೆಗೆ ಎಷ್ಟೆಷ್ಟು ಪರಿಹಾರ ಗೊತ್ತಾ?
  6. ಈ ವರ್ಗದವರಿಗೆ ಗುಡ್ ನ್ಯೂಸ್‌; ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ; ಯಾವುದೆಲ್ಲಾ ಯೋಜನೆಗಳು ಇದೆ? ಅರ್ಜಿ ಸಲ್ಲಿಸುವುದು ಹೇಗೆ?
  7.  ಈ ಬಾರಿ ದೀಪಾವಳಿಗೆ ಗೈಡ್ ಲೈನ್ಸ್​​​ ನೀಡಿದ ಸರ್ಕಾರ; ಪಟಾಕಿ ಮಾರಾಟ, ಸಿಡಿಸಲು ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
  8. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ
  9. ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು
  10. ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಈ ದಿನ ಬರಲಿದೆ; ಅರ್ಜಿ ಸಲ್ಲಿಸುವುದು ಹೇಗೆ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ
  11. ಕೃಷಿಕರಿಗೆ ಸಿಹಿ ಸುದ್ದಿ..!; ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿ ಅನುಮೋದನೆ; ಈ ತಿಂಗಳ ವರೆಗೆ ಸಬ್ಸಿಡಿ ಲಭ್ಯ
  12. 2 ನೇ ವಾರಕ್ಕೆ ಕಾಲಿಟ್ಟ ಜಲಪಾತ ಸಿನಿಮಾ; ರಿವ್ಯೂಸ್ ಮತ್ತು ರೇಟಿಂಗ್ ನ ರೇಸ್ ನಲ್ಲೂ ಮುಂದಿರುವ ಪರಿಸರ ಕಾಳಜಿ ಸಿನಿಮಾ
  13. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ?; ಯಾವುದೆಲ್ಲಾ ದಾಖಲೆಗಳು ಬೇಕು? ಅರ್ಹತೆ ಏನು?
  14. ಕಾಂಗ್ರೆಸ್ ಸರ್ಕಾರ ಬಂದ ನಂತರ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ – ಕುಂಕುಮವನ್ನು ನಿಷೇಧಿಸಲಾಯಿತೆ?; ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಆಕ್ರೋಶ
  15. ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; 3 ಲಕ್ಷ ರೇಷನ್‌ ಕಾರ್ಡ್‌ ರದ್ದು | ಕಾರಣವೇನು?
  16.  ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ; ನೇಮಕಾತಿಯ ಕುರಿತು ವಿವರ ಇಲ್ಲಿದೆ
  17. ಯುಸಿಐಎಲ್‌ ನಿಂದ ಉದ್ಯೋಗಾವಕಾಶ; ಟ್ರೇಡ್‌ ಅಪ್ರೆಂಟಿಸ್‌ ಪೋಸ್ಟ್‌ ಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
  18. ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್; ಏನಿದು ಎಮರ್ಜೆನ್ಸಿ ಟೆಸ್ಟ್ ಮೆಸೇಜ್ ಅಲರ್ಟ್; ಕಾರಣಗಳೇನಿರಬಹುದು? ಇಲ್ಲಿದೆ ಇದರ ಹಿಂದಿನ ಗುಟ್ಟು
  19. ರೈತರಿಗೆ ಸಿಹಿ ಸುದ್ದಿ;ಪಿಎಂ ಕಿಸಾನ್ ಹೊಸ ಕಂತಿನ ಹಣ ಈ ತಿಂಗಳಲ್ಲೇ ಬಿಡುಗಡೆ?
  20. ರಾಜ್ಯದಲ್ಲಿ ಪಟಾಕಿ ಬ್ಯಾನ್;ದೀಪಾವಳಿಗೂ ಪಟಾಕಿ ಹೊಡೀಬಾರದಾ?;ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
  21. ನಿಮಗೆ ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವಾ?; ನಿಮ್ಮ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
  22. ಅಡಿಕೆ ಸಿಪ್ಪೆಯಿಂದ ಅಂದದ ಕೋಟು; ಕೊಳೆತು ಮಣ್ಣಿಗೆ ಸೇರುವ ಅಡಿಕೆ ಸಿಪ್ಪೆಯನ್ನು ಒಳ್ಳೆಯ ಉಪಯೋಗಕ್ಕೆ ತರುವ ಕೆಲಸ; ಗ್ರಾಮೀಣ ಮಹಿಳೆಯರ ಉದ್ಯೋಗ ಸೃಷ್ಟಿಗೂ ಅನುಕೂಲ
  23. ಬಿಪಿಎಲ್‌ ಕಾರ್ಡ್‌ ತಿದ್ದುಪಡಿಗೆ ಮತ್ತೊಂದು ಅವಕಾಶ;ಮೂರು ಹಂತಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಿದ ಆಹಾರ ಇಲಾಖೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇