ARECANUT- ಮೇಘಾಲಯ ವಿಜ್ಞಾನಿಗಳ ತಂಡ ಒಂದು ಅಡಿಕೆ ಸಿಪ್ಪೆಯ ನಾರಿನಿಂದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಯಲ್ಲಿ ಭರವಸೆಯ ಹೆಜ್ಜೆಯಿಟ್ಟಿದೆ. ನಮ್ಮಲ್ಲಿ ಕೊಳೆತು ಮಣ್ಣಿಗೆ ಸೇರುವ ಅಡಿಕೆ ಸಿಪ್ಪೆಯನ್ನು ಇನ್ನಷ್ಟು ಒಳ್ಳೆಯ ಉಪಯೋಗಕ್ಕೆ ತರುವ ಕೆಲಸ ನಡೆಯಬೇಕಿದೆ.
ಇದನ್ನೂ ಓದಿ; ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಮತ್ತೊಂದು ಅವಕಾಶ; ಮೂರು ಹಂತಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಿದ ಆಹಾರ ಇಲಾಖೆ
ಡಾ. ಅನುಪಮಾ ಮಿಶ್ರರ ಸ್ಪಿನ್ನಿಂಗ್ ಮತ್ತು ವೀವಿಂಗ್ ಘಟಕ ಇದಾಗಿದ್ದು, ಇವರು ಈ ಕಾಲೇಜಿನ ಬಟ್ಟೆ ಮತ್ತು ಸಿದ್ಧ ಉಡುಪು ತಯಾರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್. ಅಡಿಕೆ ಸಿಪ್ಪೆಯ ನಾರಿನಿಂದ ತಯಾರಾದ ಹಲವಾರು ಉತ್ಪನ್ನಗಳನ್ನು ಇಲ್ಲಿ ನೋಡಬಹುದಾಗಿದೆ. ಕೋಟು, ಬೆನ್ನಿಗೆ ಹಾಕುವ ಚೀಲ, ಪರ್ಸ್, ಸ್ಯಾನಿಟರಿ ನ್ಯಾಪ್ಕಿನ್, ಡೋರ್ ಮ್ಯಾಟ್ ಈ ರೀತಿಯ ಉತ್ಪನ್ನಗಳನ್ನು ಇಲ್ಲಿ ನೋಡಬಹುದು.
ಇನ್ನು ಈ ಬಗ್ಗೆ ಡಾ. ಅನುಪಮಾ ಪ್ರತಿಕ್ರಿಯೇ ನೀಡಿ, ಅಡಿಕೆ ಸಿಪ್ಪೆಯ ನಾರನ್ನು ಮೂರು ಮುಖ್ಯ ಉದ್ದೇಶಗಳಿಗೆ ಬಳಸಿದ್ದೇವೆ. ವಸ್ತ್ರ, ಸಂಯುಕ್ತ ವಸ್ತುಗಳು ಹಾಗೂ ಇನ್ನಿತರ ಉಪಯೋಗಗಳಿಗೆ ಎಂದು ವಿವರಿಸಿದರು.
ಪರಿಸರಸ್ನೇಹಿ ನಾರು:
ಕೃತಕ ನಾರುನೂಲುಗಳ ಬದಲು ಪರಿಸರಸ್ನೇಹಿ ನವೀಕರಿಸಬಹುದಾದ ಸಂಪನ್ಮೂಲ ಮೂಲದವಕ್ಕೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ಕೃತಕ ನಾರು ಸುಲಭದಲ್ಲಿ ಕೊಳೆಯುವುದಿಲ್ಲ. ಅಡಿಕೆ ಸಿಪ್ಪೆಯ ನಾರು ಸುಲಭದಲ್ಲಿ ಮಣ್ಣಿನಲ್ಲಿ ಕರಗುತ್ತದೆ. ಗ್ರಾಮೀಣ ಮಹಿಳೆಯರ ಉದ್ಯೋಗ ಸೃಷ್ಟಿಗೂ ಅನುಕೂಲ ಎನ್ನುತ್ತಾರೆ ಸಮುದಾಯ ಕಾಲೇಜಿನ ಡೀನ್ ಡಾ. ಜ್ಯೋತಿ ವಸ್ತ್ರದ್.
ಇವರು ಧಾರವಾಡ ಕೃಷಿವಿವಿಯ ಹೋಮ್ ಸೈನ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು. ಡೆಪ್ಯೂಟೇಶನ್ ಮೇಲೆ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅಡಿಕೆ ಸಿಪ್ಪೆಯ ನಾರು, ನೂಲು ಹಾಗೂ ಇನ್ನಿತರ ಸಂಯುಕ್ತ ವಸ್ತುಗಳು ಸಿಪ್ಪೆಯ ನಿರ್ವಹಣೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಬಲ್ಲವು ಎನ್ನುವುದು ಅವರ ವಿಶ್ವಾಸ.
ಚಾಲಿ ಅಡಿಕೆಯ ತೂಕದಲ್ಲಿ ಅಡಿಕೆಯಲ್ಲಿ ಸಿಪ್ಪೆಯ ಪ್ರಮಾಣ 40% ರಿಂದ 50%. ಡಾ. ಮಿಶ್ರಾರ ಪ್ರಕಾರ ಸಿಪ್ಪೆಯಲ್ಲಿನ ನಾರಿನ ಪ್ರಮಾಣ 40-45%. ನಾರಿನ ಸರಾಸರಿ ಉದ್ದ ನಾಲ್ಕು ಸೆ.ಮೀ ಅಡಿಕೆಯ (ARECANUT-) ಉದ್ದಕ್ಕನುಗುಣವಾಗಿ ನಾರಿನ ಉದ್ದವೂ ಇರುತ್ತದೆ. ಆದರೆ ಸೆಣಬಿನಂತಹ ಜೈವಿಕ ನಾರುಗಳಿಗೆ ಹೋಲಿಸಿದರೆ ಅಡಿಕೆಯದರ ಉದ್ದ ಬಹಳ ಕಡಿಮೆ.

ಅಡಿಕೆ ಸಿಪ್ಪೆಯಲ್ಲಿ ಮುಖ್ಯವಾಗಿ ಎರಡು ವಿಧದ ನಾರುಗಳು, ಒಂದು ಅತ್ಯಂತ ಒರಟು ಮತ್ತೊಂದು ಅತ್ಯಂತ ನಯ. ಅಡಿಕೆ ಸಿಪ್ಪೆಯ ಮಧ್ಯದ ಪದರ ಅಂದರೆ ಸಿಪ್ಪೆಯ ಕೆಳಗಿನ ಪದರದಲ್ಲಿರುವ ನಾರು ನಯವಾದುದು. ಇವು ಸೆಣಬಿನ ನಾರಿನಂತಯೇ ಇರುತ್ತವೆ. ಒರಟಾದ ನಾರು ಸೆಣಬಿನ ನಾರಿಗಿಂತ ಹತ್ತು ಪಟ್ಟು ಒರಟು. ಅಡಿಕೆ ಸಿಪ್ಪೆಯ ನಾರು ಕುರಿ ಉಣ್ಣೆಯಷ್ಟೇ ಗಟ್ಟಿ. ಇದರಲ್ಲಿ ಸೆಲ್ಯುಲೋಸ್, ಹೆಮಿಸೆಲ್ಯುಲೋಸ್, ಲಿಗ್ನಿನ್ ಹಾಗೂ ಇನ್ನಿತರ ಸಣ್ಣಪುಟ್ಟ ಅಂಶಗಳಿವೆ. ಸಾಂದ್ರತೆ ಕೃತಕ ನಾರಿನಷ್ಟೇ ಇರುತ್ತದೆ. ದ್ವಿದಳ ಸಸ್ಯಗಳ ತೊಗಟೆಯ ನಾರಿನಷ್ಟೇ ನೀರು ಹೀರುವ ಗುಣವಿದೆ ಎನ್ನುತ್ತಾರೆ ಡಾ. ಅನುಪಮ ಮಿಶ್ರಾ.
ಇದನ್ನೂ ಓದಿ; ಹಿರಿಯ ನಾಗರಿಕರಿಗೆ ಗುಡ್ನ್ಯೂಸ್; ಮುಂದಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನ ಏರಿಕೆ
ಸಂಸ್ಕರಣೆ:ARECANUT-
ಒಣಗಿದ ಅಡಿಕೆ ಸಿಪ್ಪೆಯನ್ನು ಮೊದಲಿಗೆ 2% ಯೂರಿಯಾ ಬಳಸಿ ಉಪಚರಿಸುತ್ತಾರೆ. ಅನಂತರ ಮೂರರಿಂದ ಐದು ದಿನಗಳ ಕಾಲ ನೀರಿನಲ್ಲಿ ಮುಳುಗಿಸಿಡುತ್ತಾರೆ. ನಂತರ ಚೆನ್ನಾಗಿ ನೀರಿನಲ್ಲಿ ತೊಳೆದು 2-3 ದಿನ ಒಣಗಿಸುತ್ತಾರೆ. ನಂತರ ಕೈ / ಯಂತ್ರ ಉಪಯೋಗಿ ನಾರನ್ನು ಬೇರ್ಪಡಿಸುತ್ತಾರೆ. ಈ ನಾರನ್ನು ಕೆಲವು ದ್ರಾವಣಗಳ ಸಹಾಯದಿಂದ ನಯಗೊಳಿಸುತ್ತಾರೆ. ನಂತರ ಬ್ಲೀಚ್ ಮಾಡುತ್ತಾರೆ. ತಯಾರಾದ ನಾರನ್ನು ಯಂತ್ರ ಬಳಸಿ ಒರಟು ಮತ್ತು ನಯ ಎಂಬ ಎರಡು ವರ್ಗವಾಗಿ ಬೇರ್ಪಡಿಸುತ್ತಾರೆ. ಹಗುರ, ನಯ ನಾರನ್ನು 30% ಹತ್ತಿಯ ಎಳೆಗಳ ಜೊತೆ ಸೇರಿಸಿ ನೂಲು ತಯಾರಿಸುತ್ತಾರೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-05.10.2023
ಒಂದು ಕಿ.ಲೋ ನಯ ನಾರನ್ನು ತಯಾರಿಸಲು ಒಂದು ಸಾವಿರ ರೂ. ಖರ್ಚು. ಅಷ್ಟೇ ದೊರಗಾದ ನಾರಿಗೆ 700 ರೂ. ಸಾಕು. ಹತ್ತಿಯೊಂದಿಗೆ ಮಿಶ್ರ ಮಾಡಿದ ಒಂದು ಕಿಲೋ ನಾರಿಗೆ ರೂ. 1200 ಆಗುತ್ತದೆ. ಈ ನೂಲಿನಿಂದ ಬೇಕಾದ ಸಿದ್ಧ ಉಡುಪು ತಯಾರಿಸಬಹುದು. ಅಡಿಕೆ ಸಿಪ್ಪೆಯಲ್ಲಿರುವ ಸೆಲ್ಯುಲೋಸ್ ಅಂಶ ಒಳ್ಳೆ ಗಾಳಿಯಾಡಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಚರ್ಮಸ್ನೇಹಿ. ಬಟ್ಟೆಗಳನ್ನು ಸುಲಭದಲ್ಲಿ ನಿರ್ವಹಣೆ ಮಾಡಬಹುದು ಎಂದು ಹೇಳುತ್ತಾರೆ.
ಅಡಿಕೆ ಸಿಪ್ಪೆಯಿಂದ ಸಿಗುವ ಒರಟು ನಾರನ್ನು ನೀಡ್ಲ್ ಪಂಚಿಂಗ್ ವಿಧಾನದಿಂದ ಶೀಟುಗಳಾಗಿ ಪರಿವರ್ತಿಸುತ್ತಾರೆ. ಇದನ್ನು ತಯಾರಿಸಲು ತಗಲುವ ವೆಚ್ಚ ಒಂದು ಮೀಟರಿಗೆ 60 ರೂ. ಈ ಶೀಟನ್ನು ಕರಕುಶಲ ವಸ್ತುಗಳಲ್ಲಿ, ಕಾಲೊರಸು, ರಗ್ಗು, ನೆಲಹಾಸು, ದಿಂಬು, ಸೀಟ್ ಕುಶನ್ ಇತ್ಯಾದಿ ತಯಾರಿಸಲು ಬಳಸಬಹುದು.
ಇದನ್ನೂ ಓದಿ; hsrp ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು hsrp? ಅಳವಡಿಕೆ ಹೇಗೆ?
ಈ ರೀತಿಯ ನಾರಿನ ಉತ್ಪನ್ನಗಳನ್ನು ಕೊಯಮತ್ತೂರಿನ ಕುಮಾರಗುರು ತಂತ್ರಜ್ಞಾನ ಕಾಲೇಜು ಪ್ರಾಯೋಗಿಕವಾಗಿ ತಯಾರಿಸಿದೆ. ಸೆಣಬಿನ ಜೊತೆ 50:50 ಪ್ರಮಾಣದಲ್ಲಿ ಸೇರಿಸಿ ಸಣ್ಣ ಮಕ್ಕಳ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್, ಮಾಸ್ಕ್, ಗಾಯಗಳಿಗೆ ಹಾಕುವ ಬ್ಯಾಂಡೇಜ್ ತಯಾರಿಸಬಹುದು ಎನ್ನುವುದು ಅವರ ಸಂಶೋಧನೆಯ ಸಾರಾಂಶ. ಹತ್ತಿಯ ಜೊತೆ ಅಷ್ಟೇ ಪ್ರಮಾಣದಲ್ಲಿ ಈ ನಾರು ಸೇರಿಸಿ ಪರಿಸರಸ್ನೇಹಿ ಬ್ಯಾಗ್ ಕೂಡಾ ತಯಾರಿಸಿದ್ದಾರೆ. ಅಡಿಕೆ ಸಿಪ್ಪೆಯ ನಾರನ್ನು ಅಣಬೆ ಕೃಷಿಯಲ್ಲೂ ಲಾಭದಾಯಕವಾಗಿ ಬಳಸಬಹುದು ಎನ್ನುತ್ತಾರೆ.
ಇದನ್ನೂ ಓದಿ; ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?
ಸಂಯುಕ್ತ ವಸ್ತು ತಯಾರಿ:
ಡಾ. ಮಿಶ್ರಾ ತಂಡ ಅಡಿಕೆ ಸಿಪ್ಪೆಯಿಂದ ಸಂಯುಕ್ತ ವಸ್ತುಗಳನ್ನೂ (ಕಾಂಪೋಸಿಟ್ಸ್) ತಯಾರಿಸಿದೆ. ಇದಕ್ಕೆ ಅವರು ಅನುಸರಿಸಿದ ವಿಧಾನ ಹೀಗಿದೆ:
* ಮೊದಲಿಗೆ ಕಾಲು ಭಾಗ ಅಡಿಕೆ ಸಿಪ್ಪೆಯ ತುಣುಕು ಮತ್ತು ಮುಕ್ಕಾಲು ಭಾಗ ಪಾಲಿವಿನೈಲ್ ಆಲ್ಕೋಹಾಲ್ ಎಂಬ ಸಿಂಥೆಟಿಕ್ ರೆಸಿನ್ ಹಾಗೂ ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣ ಮಾಡಿಕೊಳ್ಳುತ್ತಾರೆ.
* ಈ ಮಿಶ್ರಣವನ್ನು ನಿರ್ದಿಷ್ಟ್ಟ ಉಷ್ಣತೆಯಲ್ಲಿ ನಿರ್ದಿಷ್ಟ್ಟ ಅವಧಿಗೆ ಕುದಿಸಿ ಅಚ್ಚುಗಳಲ್ಲಿ ಹಾಕುತ್ತಾರೆ. ನಂತರ ಓವನ್ನಿನಲ್ಲಿ ಒಣಗಿಸುತ್ತಾರೆ. ಹೊರತೆಗೆದು ಶಾಖ ಬಳಸಿ ಒತ್ತುತ್ತ್ತಾರೆ. ಈಗ ಈ ಸಂಯುಕ್ತ ವಸ್ತು ಶೀಟುಗಳಾಗಿ ಪರಿವರ್ತನೆಯಾಗುತ್ತದೆ.
* ಈ ಶೀಟನ್ನು ಶಾಖ ಕೊಟ್ಟು ಬೇಕಾದ ಹಾಗೆ ಬಗ್ಗಿಸಿ ಅದೇ ರೂಪದಲ್ಲಿ ಉಳಿಯುವಂತೆ ಮಾಡಬಹುದು. ಅಡಿಕೆ ಸಿಪ್ಪೆಯ ಕಾಂಪೋಸಿಟ್ಸ್ ಶೀಟಿನಿಂದ ನರ್ಸರಿ ಬ್ಯಾಗ್, ಹಸಿರು ಮನೆಯ ಭಾಗಗಳು, ಭೂ ಹೊದಿಕೆ, ಟೇಬಲ್ ಮ್ಯಾಟ್, ವಾಹನಗಳ ಹಾಸುವ ಮ್ಯಾಟ್, ಹಲಗೆಗಳು, ಪೇಪರ್ ಬೋರ್ಡ್, ಮೆಡಿಕಲ್ ವೇಸ್ಟ್ ವಿಲೇವಾರಿ ಮಾಡಲು ಬಳಸುವ ಚೀಲ, ಆಟಿಕೆ ಮತ್ತು ಕ್ರೀಡಾ ಸಾಮಗ್ರಿಗಳನ್ನು ಪ್ಯಾಕ್ ಮಾಡಲು, ಹಣ್ಣು ಮತ್ತು ತರಕಾರಿಗಳನ್ನು ಸಾಗಣೆ ಮಾಡಲು ಬಳಸಬಹುದು.
ನಮ್ಮ ರಾಜ್ಯದಲ್ಲಿ ಸುರತ್ಕಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಹಾಗೂ ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಸಂಸ್ಥೆಯಲ್ಲೂ ಪರಿಸರಸ್ನೇಹಿ ಅಡಿಕೆ ಸಿಪ್ಪೆಯ ಕಾಂಪೋಸಿಟ್ಸ್ ಉಪಯೋಗದ ಬಗ್ಗೆ ಒಂದಷ್ಟು ಅಧ್ಯಯನಗಳಾಗಿವೆ.
ಪ್ರಮುಖ ಸುದ್ದಿಗಳನ್ನು ಓದಿ
- ಒಂದೇ ತಿಂಗಳಲ್ಲಿ 74 ಲಕ್ಷ ವಾಟ್ಸಪ್ ಅಕೌಂಟ್ ಡಮಾರ್, ಕಾರಣ ಏನು?; ನಿಮ್ದು ವಾಟ್ಸಪ್ ಖಾತೆ ಬ್ಯಾನ್ ಆಗಿದ್ಯಾ ಚೆಕ್ ಮಾಡಿಕೊಳ್ಳಿ..!
- ಹಿರಿಯ ನಾಗರಿಕರಿಗೆ ಗುಡ್ನ್ಯೂಸ್; ಮುಂದಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನ ಏರಿಕೆ
- ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್; ಸಿಕ್ಕಿಬಿದ್ದಿದ್ದು ಹೇಗೆ?, ದೊಡ್ಡವರ ಹೆಸರು ಹೊರಬರುತ್ತಾ?
- ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ದೂರು!; ಈ ಬಾರಿ ವಂಚನೆ ಆರೋಪ ಮಾಡಿದ್ದು ಯಾರು?
- ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಹಾಲಶ್ರೀ; ಹಾಲಶ್ರೀ ಲಾಕ್ ಗಾಗಿ ಅರ್ಚಕರ ವೇಷ; ಶೃಂಗೇರಿ ಅರ್ಚಕರ ಪೋಷಾಕಿನಲ್ಲಿ ಹೋಗಿದ್ದ ಸಿಸಿಬಿ ಟೀಂ
- ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಗಣೇಶ ಚತುರ್ಥಿ ಪೂಜೆ ಮಾಡಲು ಶ್ರೇಷ್ಠ ಸಮಯ ಯಾವುದು ಗೊತ್ತಾ?; ಶುಭ ಮುಹೂರ್ತದ ವಿವರ, ಆಚರಣೆ ಇಲ್ಲಿದೆ
- ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು
- hsrp ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು hsrp? ಅಳವಡಿಕೆ ಹೇಗೆ?
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply