FACT CHECK -ಕಾಂಗ್ರೆಸ್ ಸರ್ಕಾರ ಬಂದ ನಂತರ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ – ಕುಂಕುಮವನ್ನು ನಿಷೇಧಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರ ಸತ್ಯಾಸತ್ಯತೆ ಏನು ಎಂಬುದನ್ನು ಫ್ಯಾಕ್ಟ್ ಚೆಕ್ ಮೂಲಕ ತಿಳಿಯೋಣ.
ಇದನ್ನೂ ಓದಿ; ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; 3 ಲಕ್ಷ ರೇಷನ್ ಕಾರ್ಡ್ ರದ್ದು | ಕಾರಣವೇನು?
ಆಯುಧ ಪೂಜೆ ಸಮಯದಲ್ಲಿ ರಾಸಾಯನಿಕಯುಕ್ತ ಬಣ್ಣಗಳು, ಅರಿಶಿಣ, ಕುಂಕುಮ ಇತ್ಯಾದಿಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಇದಕ್ಕೆ ಕೆಲ ಸಂಘಟನೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಇದು ವಿವಾದವಾಗಿ ಬದಲಾಗುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸ್ಪಷ್ಟನೆಯನ್ನು ಸಹ ನೀಡಿ ಸರ್ಕಾರದ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?:(FACT CHECK -)
ವಿಧಾನಸೌಧ ವಿಕಾಸಸೌಧ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಸಮಯದಲ್ಲಿ ಕಛೇರಿಗಳ ಒಳಗೆ ಮತ್ತು ಕಾರಿಡಾರ್ ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕವಾಗಿರುತ್ತದೆ. ಜೊತೆಗೆ, ಈ ರಾಸಾಯನಿಕ ಬಣ್ಣವು ನೆಲಹಾಸುವಿನ ಮೇಲೆ ಬಿದ್ದು ಸುಮಾರು ತಿಂಗಳುಗಳ ಕಾಲ ಹಾಗೆಯೇ ನೆಲಹಾಸುವಿನ ಮೇಲೆ ಅಂಟಿಕೊಂಡು ಉಳಿಯುತ್ತದೆ. ಇದರಿಂದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ. ಈ ಕುರಿತಂತೆ, ಹಿಂದಿನ ಸಾಲುಗಳಲ್ಲಿಯೂ ಸಹ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದಾಗ್ಯೂ, ಕೆಲವು ಇಲಾಖೆ/ಶಾಖೆಗಳಲ್ಲಿ ಈ ಸೂಚನೆಗಳನ್ನು ಪಾಲನೆ ಮಾಡದಿರುವುದು ವಿಷಾದನೀಯವಾಗಿದೆ. ಆದುದರಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ 2023ರ ಅಕ್ಟೋಬರ್ ಮಾಹೆಯಲ್ಲಿ ಆಯುಧ ಪೂಜೆ ನೆರವೇರಿಸುವಾಗ ಕಛೇರಿಯ ಒಳಗೆ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಶಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಈ ಮೂಲಕ ತಿಳಿಸಲಾಗಿದೆ. ಮುಂದುವರೆದು, ಪೂಜಾ ದಿನದಂದು ಕಚೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್ ಸ್ವಿಚ್ ಗಳನ್ನು ನಂದಿಸಿ ತೆರಳುವಂತೆ ಸೂಚಿಸಲಾಗಿದೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ವ್ಯವಸ್ಥಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-18.10.2023
ಪಾರಂಪರಿಕ ಕಟ್ಟಡಗಳ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿ/ನೌಕರರ ಆದ ಕರ್ತವ್ಯವಾಗಿದ್ದು, ಮೇಲೆ ತಿಳಿಸಲಾದ ಸೂಚನೆಗಳನ್ನು ಸ್ವಪ್ರೇರಿತರಾಗಿ ಪಾಲಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಆದಾಗ್ಯೂ ಸ್ಪಂದಿಸದಿದ್ದಲ್ಲಿ, ಸಂಬಂಧಪಟ್ಟ ಇಲಾಖೆ/ಶಾಖೆಯವರ ಮೇಲೆ ಅನಿವಾರ್ಯವಾಗಿ ಜವಾಬ್ದಾರಿಯನ್ನು ನಿಗಧಿಪಡಿಸಬೇಕಾಗುತ್ತದೆಂದು ಈ ಮೂಲಕ ತಿಳಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ್ ಕೆ.ಹೆಚ್ ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ; ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ; ನೇಮಕಾತಿಯ ಕುರಿತು ವಿವರ ಇಲ್ಲಿದೆ
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯಲ್ಲಿ ಏನಿದೆ:
ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ನಡೆಯುವ ಆಯುಧಪೂಜೆಗೆ ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲಿ ಅರಿಶಿನ ಕುಂಕುಮ ಬಳಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಈ ಆದೇಶ ಹೊಸತೇನಲ್ಲ, ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಸೇರಿದಂತೆ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸುವುದರಿಂದ ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಾಗೂ ಕಟ್ಟಡಗಳಿಗೆ ಹಾನಿ ತಪ್ಪಿಸಲು ಈ ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಈ ವಿಚಾರವಾಗಿ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಮನವಿಯನ್ನು ಸಿಎಂ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಸುಳ್ಳು ಸುದ್ದಿಯಾಗಿದೆ. ಈ ಹಿಂದಿನ ಸರ್ಕಾರದ ಆದೇಶವನ್ನು ಪುನಃ ಹೊರಡಿಸಲಾಗಿದೆ ಹೊರತು ನೂತನ ಆದೇಶ ಅಲ್ಲ. ಹಾಗೆಯೇ ಅರಿಶಿನ ಕುಂಕುಮ ನಿಷೇಧಿಸಲಾಗಿಲ್ಲ, ಬದಲಾಗಿ ರಾಸಾಯನಿಕ ಮಿಶ್ರಿತ ಅರಿಶಿನ ಕುಂಕುಮ ಬಳಸುವಂತಿಲ್ಲ. (FACT CHECK -)
ಪ್ರಮುಖ ಸುದ್ದಿಗಳನ್ನು ಓದಿ
- ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ; ನೇಮಕಾತಿಯ ಕುರಿತು ವಿವರ ಇಲ್ಲಿದೆ
- ಯುಸಿಐಎಲ್ ನಿಂದ ಉದ್ಯೋಗಾವಕಾಶ; ಟ್ರೇಡ್ ಅಪ್ರೆಂಟಿಸ್ ಪೋಸ್ಟ್ ಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
- rss ಟ್ರೈನಿಂಗ್ ಕ್ಯಾಂಪ್‌ನಲ್ಲಿ ವಿದ್ಯಾರ್ಥಿಗೆ ಚಿತ್ರ ಹಿಂಸೆ ಎಂದು ವಿಡಿಯೋ ವೈರಲ್; ಘಟನೆ ನಡೆದಿದ್ದು ಎಲ್ಲಿ?, ಇದರ ಸತ್ಯಾಸತ್ಯತೆ ಏನು
- ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್; ಏನಿದು ಎಮರ್ಜೆನ್ಸಿ ಟೆಸ್ಟ್ ಮೆಸೇಜ್ ಅಲರ್ಟ್; ಕಾರಣಗಳೇನಿರಬಹುದು? ಇಲ್ಲಿದೆ ಇದರ ಹಿಂದಿನ ಗುಟ್ಟು
- ಸಾರ್ವಜನಿಕರ ಗಮನಕ್ಕೆ; ರಾಜ್ಯದ ಪ್ರತಿಯೊಬ್ಬರ ಮೊಬೈಲ್ ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!
- ರೈತರಿಗೆ ಸಿಹಿ ಸುದ್ದಿ;ಪಿಎಂ ಕಿಸಾನ್ ಹೊಸ ಕಂತಿನ ಹಣ ಈ ತಿಂಗಳಲ್ಲೇ ಬಿಡುಗಡೆ?
- ರಾಜ್ಯದಲ್ಲಿ ಪಟಾಕಿ ಬ್ಯಾನ್;ದೀಪಾವಳಿಗೂ ಪಟಾಕಿ ಹೊಡೀಬಾರದಾ?;ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- ನಿಮಗೆ ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವಾ?; ನಿಮ್ಮ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
- ಕರ್ನಾಟಕ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ; ಅರ್ಜಿ ಸಲ್ಲಿಸುವುದು ಹೇಗೆ?; ಅರಣ್ಯ ವೀಕ್ಷಕರ ಹುದ್ದೆಗೆ ವೇತನ ಎಷ್ಟು?
- ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಈ ದಿನಾಂಕದಿಂದ ಶರನ್ನವರಾತ್ರಿ ಆರಂಭ
- ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಭರ್ಜರಿ ಆಫರ್; ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ ಐಪೋನ್
- ಅಡಿಕೆ ಸಿಪ್ಪೆಯಿಂದ ಅಂದದ ಕೋಟು; ಕೊಳೆತು ಮಣ್ಣಿಗೆ ಸೇರುವ ಅಡಿಕೆ ಸಿಪ್ಪೆಯನ್ನು ಒಳ್ಳೆಯ ಉಪಯೋಗಕ್ಕೆ ತರುವ ಕೆಲಸ; ಗ್ರಾಮೀಣ ಮಹಿಳೆಯರ ಉದ್ಯೋಗ ಸೃಷ್ಟಿಗೂ ಅನುಕೂಲ
- ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಮತ್ತೊಂದು ಅವಕಾಶ;ಮೂರು ಹಂತಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಿದ ಆಹಾರ ಇಲಾಖೆ
- ವಾಟ್ಸ್ಆ್ಯಪ್ನಿಂದ ಬೆರಗುಗೊಳಿಸುವ ಅಪ್ಡೇಟ್; ಇನ್ನುಂದೆ ಸ್ಟೇಟಸ್ 24 ಗಂಟೆ ಮಾತ್ರ ಅಲ್ಲ
- ಮೀನುಗಾರರ ಬಲೆಗೆ ಬಿದ್ದ 350 ಕೆಜಿ ತೂಕದ ಮೀನು; ಇದರ ಮೌಲ್ಯ ಎಷ್ಟು ಗೊತ್ತಾ?
- ಒಂದೇ ತಿಂಗಳಲ್ಲಿ 74 ಲಕ್ಷ ವಾಟ್ಸಪ್ ಅಕೌಂಟ್ ಡಮಾರ್, ಕಾರಣ ಏನು?; ನಿಮ್ದು ವಾಟ್ಸಪ್ ಖಾತೆ ಬ್ಯಾನ್ ಆಗಿದ್ಯಾ ಚೆಕ್ ಮಾಡಿಕೊಳ್ಳಿ..!
- ಹಿರಿಯ ನಾಗರಿಕರಿಗೆ ಗುಡ್ನ್ಯೂಸ್; ಮುಂದಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನ ಏರಿಕೆ
- ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು
- hsrp ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು hsrp? ಅಳವಡಿಕೆ ಹೇಗೆ?
- ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?
- 14 ನ್ಯೂಸ್ ಆ್ಯಂಕರ್ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?
- ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್; ಈ ಐಫೋನ್‌ಗೆ ಈಗ ಸಖತ್ ಡಿಸ್ಕೌಂಟ್..!; ಆಫರ್ ತಿಳಿದ್ರೆ ವಾವ್ ಅಂತೀರಾ!?
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply