PM Kisan Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣವನ್ನು ನವೆಂಬರ್ ಕೊನೆಯ ವಾರದಲ್ಲಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-25.10.2023
ಜುಲೈ ತಿಂಗಳಲ್ಲಿ 14 ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಪ್ರತೀ ನಾಲ್ಕು ತಿಂಗಳಿಗೆ ಕೇಂದ್ರ ಸರ್ಕಾರ 2,000 ರೂ ಹಣವನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ. ಅದರಂತೆ ನವೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ 2,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ಏನಿದು ಪಿಎಂ ಕಿಸಾನ್ ಯೋಜನೆ?(PM Kisan Scheme: )
ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019 ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ ಒದಗಿಸಲಾಗುತ್ತದೆ. ಜಮೀನು ಮಾಲೀಕತ್ವ ಹೊಂದಿರುವ ರೈತರು ಈ ಯೋಜನೆಯ ಫಲಾನುಭವಿಗೆ ಅರ್ಹರಾಗಿರುತ್ತಾರೆ. ಸುಮಾರು 10 ಕೋಟಿ ಆಸುಪಾಸಿನ ಸಂಖ್ಯೆಯಷ್ಟು ಫಲಾನುಭವಿಗಳು ಈ ಯೋಜನೆಯಲ್ಲಿದ್ದಾರೆ.(PM Kisan Scheme 15th Installment Date)
ಇದನ್ನೂ ಓದಿ; ತುಸು ಏರಿದ ಚಿನ್ನದ ಬೆಲೆ; ಬೆಳ್ಳಿಯೂ ತುಸು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ
ಒಂದು ಹಣಕಾಸು ವರ್ಷದಲ್ಲಿ 3 ಕಂತುಗಳಲ್ಲಿ ಅಂದರೆ ಏಪ್ರಿಲ್ ನಿಂದ ಜುಲೈವರೆಗೆ, ಆಗಸ್ಟ್ ನಿಂದ ನವೆಂಬರ್ ವರೆಗೆ, ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಅವಧಿಗೆ 2,000 ರೂ ಹಣವನ್ನು ಸರ್ಕಾರ ರೈತರಿಗೆ ನೀಡುತ್ತದೆ. ಸರ್ಕಾರ ಇಲ್ಲಿಯವರೆಗೆ 15 ಕಂತುಗಳಲ್ಲಿ ಒಟ್ಟು 2.5 ಲಕ್ಷಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ.

ಹೀಗೆ ಚೆಕ್ ಮಾಡಿ:
ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್ಲೈನ್ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.
* ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ:
* ಆಗ ಓಪನ್ ಆಗುವ ಪೇಜ್ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ರಿಜಿಸ್ಟ್ರೇಷನ್ ನಂಬರ್ ನಮೂದಿಸಿ, ಕ್ಯಾಪ್ಚ ಕೋಡ್ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
* ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್ ಮೇಲೆ ಮೂಡುತ್ತದೆ.
ಇದನ್ನೂ ಓದಿ; ಐಒಸಿಎಲ್ ನಲ್ಲಿ ಉದ್ಯೋಗಾವಕಾಶ; 1720 ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಕುರಿತು ಇಲ್ಲಿದೆ ಮಾಹಿತಿ
ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ:
* ಅಧಿಕೃತ ವೆಬ್ಸೈಟ್ www.pmkisan.gov.in ಗೆ ಭೇಟಿ ನೀಡಿ
* ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
* ‘Get report’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹೆಸರು ನೋಂದಾಯಿಸುವ ವಿಧಾನ:
* ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ
* ‘New Farmer Registration’ ಆಯ್ಕೆ ಮೇಲೆ ಕಲಿಕ್ ಮಾಡಿ ಮತ್ತು ಆಧಾರ್ ಕಾರ್ಡ್ ನಂಬರ್ ನಮೂದಿಸಿ ಕ್ಯಾಪ್ಚ ಕೋಡ್ ಭರ್ತಿ ಮಾಡಿ
* ಅಗತ್ಯ ಮಾಹಿತಿ ತುಂಬಿ ‘Yes’ ಬಟನ್ ಕ್ಲಿಕ್ ಮಾಡಿ
* ಅರ್ಜಿ ಫಾರಂ ತುಂಬಿ, ಸೇವ್ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್ ಔಟ್ ತೆಗೆದಿಡಿ
ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಾಯಿಸುವುದು ಹೇಗೆ?:
ಪಿಎಂ ಕಿಸಾನ್ ಯೋಜನೆಯಲ್ಲಿ ಹಲವು ಮಂದಿ ಫಲಾನುಭವಿಗಳ ಹೆಸರು ಮತ್ತು ಅವರ ಆಧಾರ್ನಲ್ಲಿರುವ ಹೆಸರಿಗೂ ಹೊಂದಿಕೆ ಆಗಿಲ್ಲದಿರುವುದು ಕಂಡು ಬಂದಿದೆ. ಆಧಾರ್ ನಲ್ಲಿರುವ ಹೆಸರೇ ಇಲ್ಲಿಯೂ ಇರಬೇಕು. ಒಂದು ವೇಳೆ ತಪ್ಪಾಗಿ ಇದ್ದರೆ ಅದನ್ನು ಆನ್ಲೈನ್ ನಲ್ಲೇ ಸರಿಪಡಿಸಬಹುದಾಗಿದೆ.
ಆಧಾರ್ ಪ್ರಕಾರ ಹೆಸರು ಸರಿಪಡಿಸುವುದು ಹೇಗೆ?:
* ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ: pmkisan.gov.in
* ಫಾರ್ಮರ್ಸ್ ಕಾರ್ನರ್ ಸೆಗ್ಮೆಂಟ್ನಲ್ಲಿ ಇ ಕೆವೈಸಿ, ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಇತ್ಯಾದಿ ಟ್ಯಾಬ್ಗಳನ್ನು ಕಾಣಬಹುದು. ಅದರಲ್ಲಿ ‘ನೇಮ್ ಕರೆಕ್ಷನ್ ಆ್ಯಸ್ ಪರ್ ಆಧಾರ್’ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
* ನಿಮ್ಮ ರಿಜಿಸ್ಟ್ರೇಶನ್ ನಂಬರ್ ನಮೂದಿಸಿ ಸರ್ಚ್ ಕೊಡಿ
* ಒಂದು ವೇಳೆ ರಿಜಿಸ್ಟ್ರೇಶನ್ ನಂಬರ್ ಗೊತ್ತಿಲ್ಲದಿದ್ದರೆ ‘ನೋ ಯುವರ್ ರಿಜಿಸ್ಟ್ರಶನ್ ನಂಬರ್’ ಟ್ಯಾಬ್ ಕ್ಲಿಕ್ ಮಾಡಿ
* ಅಲ್ಲಿ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಕೊಟ್ಟು ಒಟಿಪಿ ಪಡೆದು ಹಾಕಿರಿ.
* ಯೋಜನೆಯ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಸಿಗುತ್ತದೆ. ಅದನ್ನು ನಮೂದಿಸಿದ ಬಳಿಕ ಹೆಸರನ್ನು ಬದಲಿಸುವ ಅವಕಾಶ ಸಿಗುತ್ತದೆ.






Leave a Reply