Fasal Bima Scheme: ಬಿರುಬಿಸಿಲಿಗೆ ಬೆಳೆನಾಶದ ಭಯ

(Fasal Bima Scheme) ಕರ್ನಾಟಕ ರಾಜ್ಯ ಸೇರಿದಂತೆ ಎಲ್ಲೆಡೆ ಈ ಬಾರಿಯ ಬಿಸಿಲು ಅಧಿಕ ಮಟ್ಟದಲ್ಲಿ ಇದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳು ಕೈ ಕೊಡುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ರೈತರು ಚೇತರಿಸಿಕೊಳ್ಳಲು ವಿಮಾ ಯೋಜನೆ ಮೂಲಕ ಪರಿಹಾರ ಪಡೆಯಬಹುದಾಗಿದೆ. ಹಾಗಾದರೆ ಯಾವ ವಿಮಾ ಯೋಜನೆ ಪರಿಹಾರ ಹೇಗೆ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ; ಯುಗಾದಿ ಹೊತ್ತಲ್ಲೇ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ

2016 ರಲ್ಲಿ ಜಾರಿಗೆ ತಂದಿರುವ ಪಿಎಂ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆದ ಬೆಳೆಗಳು ಕೈಕೊಟ್ಟರೆ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ಇದನ್ನೂ ಓದಿ; ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್

ಬೆಳೆನಾಶಕ್ಕೆ ಪರಿಹಾರ ಹೇಗೆ ಪಡೆಯುವುದು?
ಪ್ರಾಕೃತಿಕ ಅವಘಡದಿಂದ ಬೆಳೆ ನಾಶವಾದರೆ, ಆ ಘಟನೆಯಾಗಿ 72 ಗಂಟೆಯೊಳಗೆ ಸಂಬಂಧಿತ ಇನ್ಷೂರೆನ್ಸ್ ಕಂಪನಿ ಅಥವಾ ಸ್ಥಳೀಯ ಕೃಷಿ ಕಚೇರಿಗೆ ಮಾಹಿತಿ ನೀಡಬೇಕು. ಆಗ ಸಂಬಂಧಿತ ಅಧಿಕಾರಿಗಳು ಹಾನಿ ಎಷ್ಟಾಗಿದೆ ಎಂದು ಅಂದಾಜಿಸಲು ಸಾಧ್ಯವಾಗುತ್ತದೆ. ಇದಾದ ಬಳಿಕ ಪರಿಹಾರ ಪ್ರಕ್ರಿಯೆ ಚಾಲನೆಗೊಳ್ಳುತ್ತದೆ. ಬಿಸಿಗಾಳಿಯಿಂದ ಬೆಳೆಗೆ ಹಾನಿಯಾಗಿದ್ದರೂ 72 ಗಂಟೆಯೊಳಗೆ ಕೃಷಿ ಕಚೇರಿಯ ಗಮನಕ್ಕೆ ತರಬೇಕಾಗುತ್ತದೆ.

Fasal Bima Scheme: ಬಿರುಬಿಸಿಲಿಗೆ ಬೆಳೆನಾಶದ ಭಯ
Fasal Bima Scheme: ಬಿರುಬಿಸಿಲಿಗೆ ಬೆಳೆನಾಶದ ಭಯ

ಇದನ್ನೂ ಓದಿ; ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಾಲ!; ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಡಿಟೈಲ್ಸ್

ಶೇ. 33ರಷ್ಟು ಬೆಳೆ ನಾಶವಾಗಿರಬೇಕು:
ರೈತರು ಪಿಎಂ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರ ಪಡೆಯುವುದಾದರೆ, ಕನಿಷ್ಠ ಶೇ. 33ರಷ್ಟಾದರೂ ಬೆಳೆಗೆ ಹಾನಿಯಾಗಿರಬೇಕು. ಆಗ ಪರಿಹಾರ ಕ್ಲೈಮ್ ಮಾಡಲು ಅರ್ಹರಿರುತ್ತೀರಿ. ಸಾಮಾನ್ಯವಾಗಿ ನೀವು ಇನ್ಷೂರೆನ್ಸ್ ಕ್ಲೈಮ್ ಗೆ ಅರ್ಜಿ ಸಲ್ಲಿಸಿದ 14 ದಿನದಲ್ಲಿ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿರುತ್ತದೆ.

ಇದನ್ನೂ ಓದಿ; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉದ್ಯೋಗ; 44 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ; ಇಸ್ರೋದಲ್ಲಿ ಭರ್ಜರಿ ಜಾಬ್ ಆಪರ್; ಅರ್ಜಿ ಸಲ್ಲಿಕೆ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

ಹೆಚ್ಚಿನ ಮಾಹಿತಿಗೆ ಫಸಲ್ ಬಿಮಾ ಯೋಜನೆಯ ಅಧಿಕೃತ ವೆಬ್ ​ಸೈಟ್ ​ನಲ್ಲಿ ನೋಡಬಹುದು: pmfby.gov.in/

ಇದನ್ನೂ ಓದಿ; ಕೇಂದ್ರ ಸರ್ಕಾರದ ಯೋಜನೆ; ಬಡ್ಡಿ ಇಲ್ಲದೆ ಸಿಗುತ್ತೆ 10-50 ಸಾವಿರ ಸಾಲ!