PM-KISAN Samman Nidhi: ಪಿಎಂ-ಕಿಸಾನ್ 17 ನೇ ಕಂತಿನ ಹಣ

(PM-KISAN Samman Nidhi) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತಿನ ಹಣ ಮೇ ತಿಂಗಳಲ್ಲಿ ಬರುವ ಸಾಧ್ಯ ಇದೆ ಎನ್ನಲಾಗಿದೆ. ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರುವ ರೈತರಿಗೆ ಇದುವರೆಗೆ 16 ನೇ ಕಂತಿನ ಹಣವನ್ನು 2 ಸಾವಿರದ ಹಾಗೇ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಅದೇ ರೀತಿ 17 ನೇ ಕಂತಿನ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ; ಯುಗಾದಿ ಹೊತ್ತಲ್ಲೇ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ

ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಾಯಿತ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈ ಕುರಿತು ಹಲವು ಬಾರಿ ಮಾಹಿತಿ ನೀಡಲಾಗಿದೆ. ನೀವು ಪಿಎಂ ಕಿಸಾನ್ ಗೆ ನೋಂದಾಯಿಸಿಕೊಂಡಿದ್ದರೆ ಈ ರೀತಿಯಾಗಿ ಸ್ಥಿತಿಯನ್ನು ಪರಿಶೀಲಿಸಿ.

ಇದನ್ನೂ ಓದಿ; ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್

* pmkisan.gov.in ವೆಬ್ ಸೈಟ್ ಗೆ ಭೇಟಿ ನೀಡಿ.
* ಈಗ, ಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಯಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ‘ಡೇಟಾ ಪಡೆಯಿರಿ’ ಆಯ್ಕೆಯನ್ನು ಆರಿಸಿ
* ನಿಮ್ಮ ಫಲಾನುಭವಿಯ ಸ್ಥಿತಿ ಪರದೆಯ ಮೇಲೆ ಬರುತ್ತದೆ.

ಇದನ್ನೂ ಓದಿ; ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಾಲ!; ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಡಿಟೈಲ್ಸ್

ಇನ್ನು ಪಿಎಂ-ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇದೆಯಾ ಹೀಗೆ ಚೆಕ್ ಮಾಡಿ:
* www.pmkisan.gov.in ಪಿಎಂ ಕಿಸಾನ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ
* ಫಲಾನುಭವಿ ಪಟ್ಟಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ಡ್ರಾಪ್-ಡೌನ್ ನಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದಂತಹ ವಿವರಗಳನ್ನು ಆಯ್ಕೆ ಮಾಡಿ.
* ವರದಿ ಪಡೆಯಿರಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಇದರ ನಂತರ, ಫಲಾನುಭವಿ ಪಟ್ಟಿ ವಿವರವನ್ನು ಪ್ರದರ್ಶಿಸಲಾಗುತ್ತದೆ.

PM-KISAN Samman Nidhi: ಪಿಎಂ-ಕಿಸಾನ್ 17 ನೇ ಕಂತಿನ ಹಣ
PM-KISAN Samman Nidhi: ಪಿಎಂ-ಕಿಸಾನ್ 17 ನೇ ಕಂತಿನ ಹಣ

ಇದನ್ನೂ ಓದಿ; ಇಸ್ರೋದಲ್ಲಿ ಭರ್ಜರಿ ಜಾಬ್ ಆಪರ್; ಅರ್ಜಿ ಸಲ್ಲಿಕೆ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ