High court: ಚುನಾವಣಾ ಕರ್ತವ್ಯದಿಂದ ಈ ಅಧಿಕಾರಿಗಳಿಗೆ ವಿನಾಯಿತಿ

(High court) ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್‌ಗಳು ಸೇರಿದಂತೆ ಫಾರ್ಮಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ; ಮತ್ತೆ ಟ್ರೆಂಡಿಂಗ್ ನಲ್ಲಿ ‘rcb hawa’ ರ‍್ಯಾಪ್ ಸಾಂಗ್; csk ಫ್ಯಾನ್ಸ್ ಗೆ ಪರೋಕ್ಷವಾಗಿ ಕೌಂಟರ್ ಕೊಟ್ಟ ರ‍್ಯಾಪರ್ ಚೇತನ್

ಈ ಸಂಬಂಧ ಯಶವಂತಪುರದ ESI ಡಿಸ್ಪೆನ್ಸರಿಯ ಫಾರ್ಮಸಿ ಅಧಿಕಾರಿ ಕೆ.ಪ್ರದೀಪ್ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಇದನ್ನೂ ಓದಿ; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉದ್ಯೋಗ; 44 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೆ ಹೈಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿ ಈ ಆದೇಶವನ್ನು ನೀಡಲಾಗುತ್ತಿದೆ ಎಂದು ಏಕ ಸದಸ್ಯಪೀಠ ತಿಳಿಸಿದೆ. ಜೊತೆಗೆ, ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ.

ಇದನ್ನೂ ಓದಿ; ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೇ?; ಚೆಕ್‌ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ..

ಅರ್ಜಿದಾರರು ಫಾರ್ಮಸಿ ಅಧಿಕಾರಿಗಳಾಗಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನಡೆದ ಚುನಾವಣೆ ಸಮಯದಲ್ಲಿ ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಈ ಸಲ ಮತ್ತೆ ಚುನಾವಣೆಯಲ್ಲಿ ಅವರನ್ನು ನಿಯೋಜನೆ ಮಾಡಲಾಗಿದ್ದು, ಇದು ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ಕೈಪಿಡಿಗೆ ವಿರುದ್ಧವಾಗಿದೆ. ಚುನಾವಣಾ ಆಯೋಗವೇ ವೈದ್ಯರು, ನರ್ಸ್‌ಗಳು ಮತ್ತು ಎಎನ್‌ಎಂಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಆದೇಶ ನೀಡಿದೆ. ಹಾಗಾಗಿ, ಅವರಿಗೆ ಸೇವೆಯಿಂದ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯ ಜಿಲ್ಲಾ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ; ಈ ಬ್ಯಾಂಕ್ ನಲ್ಲಿ ಸಿಗುತ್ತೆ ಆರೋಗ್ಯವೆಚ್ಚದ ಸಾಲ; ಯಾವ ಬ್ಯಾಂಕ್. ಯಾರು ಅರ್ಹರು ಇಲ್ಲಿದೆ ಡಿಟೈಲ್ಸ್

ಅರ್ಜಿದಾರರ ಪರ ವಾದಿಸಿದ ವಕೀಲ ಬಿ.ಎಂ. ಸಂತೋಷ್, ”ಚುನಾವಣೆ ನಿಯಮದಲ್ಲಿ ವೈದ್ಯರು, ನರ್ಸ್, ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ ನೀಡಿದೆ. ಆದರೂ ಬಿಬಿಎಂಪಿಯಿಂದ ಕಾನೂನು ಬಾಹಿರವಾಗಿ ಫಾರ್ಮಸಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ” ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನೂ ಓದಿ; ಸಂಗೀತಾ ಶೃಂಗೇರಿ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?; ಇವರ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ

High court: ಚುನಾವಣಾ ಕರ್ತವ್ಯದಿಂದ ಈ ಅಧಿಕಾರಿಗಳಿಗೆ ವಿನಾಯಿತಿ
High court: ಚುನಾವಣಾ ಕರ್ತವ್ಯದಿಂದ ಈ ಅಧಿಕಾರಿಗಳಿಗೆ ವಿನಾಯಿತಿ