Sunday, December 3, 2023
Homeವಿಶೇಷಆಧಾರ್ ಕಾರ್ಡ್(aadhaar card) ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ

ಆಧಾರ್ ಕಾರ್ಡ್(aadhaar card) ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ

ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯ, ಆಧಾರ್ ಕಾರ್ಡ್ ಗುರುತಿನ ಚೀಟಿ ಮತ್ತು ವಾಸ ಸ್ಥಳದ ಪುರಾವೆಯಾಗಿ ಉಪಯುಕ್ತವಾಗಿದೆ, ಜೊತೆಗೆ ಯಾವುದೇ ಸರ್ಕಾರಿ ಹಣಕಾಸು ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್ ಸಹ ಅಗತ್ಯವಾಗಿದೆ.

ಇದನ್ನೂ ಓದಿ; ಉಚಿತ ವಿದ್ಯುತ್ ಯೋಜನೆಯನ್ನು ಪಡೆಯಲು ಏನು ಮಾಡಬೇಕು?

ಇದನ್ನೂ ಓದಿ; ತಿಂಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್​ ಸರ್ಕಾರಿ ಹುದ್ದೆಗಳು ಯಾವುದು ಗೊತ್ತ?

ಬ್ಯಾಂಕ್ ಖಾತೆ (bank account) ತೆರೆಯಲು ಅಥವಾ ಪಾಸ್‌ಪೋರ್ಟ್ (passport) ಪಡೆಯಲು, ಡ್ರೈವಿಂಗ್ ಲೈಸೆನ್ಸ್ (driving licence) ಪಡೆಯಲು ಆಧಾರ್ ಕಾರ್ಡ್ ಬೇಕೇ ಬೇಕು. ಇಂತಹ ಆಧಾರ್ ಕಾರ್ಡ್ ನಲ್ಲಿ(card) ನಿಮ್ಮ ಫೋಟೋ ಚೆನ್ನಾಗಿಲ್ಲ ಅಂತ ಬೇಸರಾನಾ ಮೊದಲು ಈ ಫೋಟೋ ಚೇಂಜ್ ಮಾಡ್ಬೇಕು ಅಂದುಕೊಂಡಿದ್ದೀರಾ?.

ಕೆಲವೊಮ್ಮೆ ಆಧಾರ್ ಕಾರ್ಡ್(aadhar card) ನಲ್ಲಿ ಇರುವ ಫೋಟೋ ನಿಮ್ಮ ಫೋಟೋವೇ ಎಂಬ ಅನುಮಾನವೂ ಬರುತ್ತೆ. ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಶಾಶ್ವತವಲ್ಲ. ನೀವು ಬಯಸಿದರೆ ನೀವು ಆಧಾರ್ ಕಾರ್ಡ್ ನಲ್ಲಿ ಫೋಟೋವನ್ನು ಬದಲಾಯಿಸಬಹುದು ಈ ಅವಕಾಶವನ್ನು ನೀಡಲಾಗಿದೆ. ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ನಿಮ್ಮ ಫೋಟೋವನ್ನು(photo) ನೀವು ಸರಳವಾಗಿ ಬದಲಾಯಿಸಬಹುದು. ಈ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ನೀವು ಹೀಗೆ ಸುಲಭವಾಗಿ ಮಾಡಿ ನಿಮ್ಮ ಆಧಾರ್ ಫೋಟೋವನ್ನು ಚೇಂಜ್(aadhar photo change) ಮಾಡಬಹುದು.

ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ

ಆಧಾರ್ ಕಾರ್ಡ್ ಹೊಂದಿರುವವರು ಹೆಸರು(name), ಹುಟ್ಟಿದ ದಿನಾಂಕ (date of birth), ಲಿಂಗ, ವಿಳಾಸ (address), ಅಂತಹ ವಿವರಗಳನ್ನು ಆನ್‌ಲೈನ್‌ನಲ್ಲಿ(online) ನವೀಕರಿಸಬಹುದು. ಆದರೆ ಫೋಟೋ, ಬಯೋಮೆಟ್ರಿಕ್ಸ್ ನವೀಕರಣಕ್ಕಾಗಿ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ಕೇಂದ್ರಕ್ಕೆ ಹೋಗಬೇಕು. ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ನೀವು ಬಯಸಿದರೆ ಏನು ಮಾಡಬೇಕೆಂದು ತಿಳಿಯಿರಿ.

ಇದನ್ನೂ ಓದಿ; ಕೇಂದ್ರದ ಯೋಜನೆ ಜೊತೆಗೆ ಹೆಜ್ಜೆ ಹಾಕಿ; ಶೋಭಾ ಕರಂದ್ಲಾಜೆ

ಆಧಾರ್ ಕಾರ್ಡ್ ನಲ್ಲಿ ಫೋಟೋವನ್ನು(aadhar card photo change) ಈ ರೀತಿ ಬದಲಾಯಿಸಿ:
* ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.
* ಅಲ್ಲಿ ಆಧಾರ್ ಅಪ್‌ಡೇಟ್(aadhar update) ಫಾರ್ಮ್ ಪಡೆಯಿರಿ ಮತ್ತು ಅದನ್ನು ಪೂರ್ಣಗೊಳಿಸಿ.
* ಫಾರ್ಮ್ (form) ಅನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಬಯೋಮೆಟ್ರಿಕ್ (biometric) ವಿವರಗಳನ್ನು ನವೀಕರಿಸಿ.
* ಅದರ ನಂತರ ನಿಮ್ಮ ಲೈವ್ ಫೋಟೋವನ್ನು(live photo) ತೆಗೆದುಕೊಳ್ಳಲಾಗುತ್ತದೆ. ಆ ಫೋಟೋ ಆಧಾರ್ ಕಾರ್ಡ್ ನಲ್ಲಿ ಅಪ್‌ಡೇಟ್(update) ಆಗುತ್ತದೆ.
* ಅದರ ನಂತರ, ನೀವು ರೂ.100 ಪಾವತಿಸಿದರೆ,(pay) ನಿಮಗೆ ಅಪ್‌ಡೇಟ್ ವಿನಂತಿ ಸಂಖ್ಯೆಯೊಂದಿಗೆ ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ. ಆ ಸ್ಲಿಪ್(slip) ಅನ್ನು ಎಚ್ಚರಿಕೆಯಿಂದ ಇರಿಸಿ.
ಆಧಾರ್ ವಿವರಗಳನ್ನು ನವೀಕರಿಸಲು ನೀವು ವಿನಂತಿಸಿದ ನಂತರ ಇದು 90 ದಿನಗಳನ್ನು(90 days) ತೆಗೆದುಕೊಳ್ಳುತ್ತದೆ. ನಿಮ್ಮ ವಿವರಗಳನ್ನು ಕಾಲಕಾಲಕ್ಕೆ ನವೀಕರಿಸಬಹುದು. ಇ-ಆಧಾರ್(e-aadhar) ಡೌನ್‌ಲೋಡ್ (download)ಮಾಡುವುದರಿಂದ ನಿಮ್ಮ ವಿವರಗಳನ್ನು ನವೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಇಆಧಾರ್ ಕಾರ್ಡ್(E-aadhar car) ಡೌನ್‌ಲೋಡ್ ಮಾಡುವುದು ಹೇಗೆ?:
* ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ https://uidai.gov.in ಅಥವಾ https://eaadhaar.uidai.gov.in ವೆಬ್‌ಸೈಟ್ ತೆರೆಯಿರಿ.(website)
* ಮುಖಪುಟದಲ್ಲಿ(home page) ಡೌನ್‌ಲೋಡ್ ಆಧಾರ್ ಲಿಂಕ್ ಅನ್ನು ಕ್ಲಿಕ್ ಮಾಡಿ.
* ದಾಖಲಾತಿ ಐಡಿ, ವರ್ಚುವಲ್(virtual I’d) ಐಡಿ, ಆಧಾರ್ ಸಂಖ್ಯೆಗಳಲ್ಲಿ ಒಂದನ್ನು ಆಯ್ಕೆಮಾಡಿ ಮತ್ತು ಆ ಸಂಖ್ಯೆಯನ್ನು ನಮೂದಿಸಿ.
* ಅದರ ನಂತರ ಕ್ಯಾಪ್ಚಾ ಕೋಡ್(captcha code) ಅನ್ನು ನಮೂದಿಸಿ.
* Send otp ಮೇಲೆ ಕ್ಲಿಕ್ ಮಾಡಿ.
* ನಿಮ್ಮ ನೋಂದಾಯಿತ ಮೊಬೈಲ್ otp ಸಂಖ್ಯೆ ಅಥವಾ ಇಮೇಲ್(E-mail) ಐಡಿಗೆ ಕಳುಹಿಸಲಾಗುತ್ತದೆ.
* Otp ನಮೂದಿಸಿ ಮತ್ತು ಪರಿಶೀಲಿಸಿ.
* ಇ-ಆಧಾರ್ ಡೌನ್‌ಲೋಡ್(e-aadhar download) ಆಗುತ್ತದೆ.

ಇದನ್ನೂ ಓದಿ; 12 ತಿಂಗಳು ಬಳಸಿದ ವಿದ್ಯುತ್ ಚೆಕ್ ಮಾಡುವುದು ಹೇಗೆ?

ತಿಂಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್​ ಸರ್ಕಾರಿ ಹುದ್ದೆಗಳು ಯಾವುದು ಗೊತ್ತ?

ನಮ್ಮಲ್ಲಿ ಬಹುತೇಕರು ಸರ್ಕಾರಿ ಉದ್ಯೋಗಗಳಿಗಾಗಿ ಸಾಕಷ್ಟು ವರ್ಷಗಳ ಕಾಲ ಪ್ರಯತ್ನಿಸುತ್ತಾರೆ. ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕಿದ್ದರು ಸಾಕು ಅನ್ಕೋತಾರೆ. ಆದರೆ ಇನ್ನೂ ಕೆಲವರು ಪ್ರೈವೇಟ್ ಜಾಬ್ಸ್ ಬೆಸ್ಟ್ ಅಂತಾರೆ. ಯಾಕಂದ್ರೆ ಅಲ್ಲಿ ಲಕ್ಷಗಳಲ್ಲಿ ಸಂಬಳ ಸಿಗುತ್ತೆ, ಪ್ಯಾಕೇಜ್ ಚೆನ್ನಾಗಿರುತ್ತೆ ಅಂತ. ಆದ್ರೆ ಅದು ಸಂಪೂರ್ಣ ಸತ್ಯವಲ್ಲ. ಸರ್ಕಾರಿ ಕೆಲಸಗಳಲ್ಲೂ ಲಕ್ಷಾಂತರ ಸಂಬಳ ಪಡೆಯುವಂತಹ ಹುದ್ದೆಗಳಿವೆ. ಆ ಹುದ್ದೆಗಳು ಯಾವುವು ಅಂತ ನಾವು ಇವತ್ತು ನೋಡೋಣ.

ಇದನ್ನೂ ಓದಿ; ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ ಪವನ್

ಪ್ರೈವೇಟ್ ಜಾಬ್ ಗಳಲ್ಲಿ ಲಕ್ಷಾಂತರ ರೂಪಾಯಿ ಪ್ಯಾಕೇಜ್ ಸಿಗುತ್ತೆ. ಆದರೂ ಇವತ್ತಿಗೂ ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಿಗೆ ವರ್ಷಗಳ ಕಾಲ ತಯಾರಿ ನಡೆಸುತ್ತಾರೆ. ಯಾಕೆಂದ್ರೆ ಪ್ರೈವೇಟ್ ಜಾಬ್ ಗಳಲ್ಲಿ ಸಂಬಳ ಜಾಸ್ತಿ ಇದ್ರೂ ಜಾಬ್ ಸೆಕ್ಯೂರಿಟಿ ಇರೋದಿಲ್ಲ. ಆದರೆ ಸರ್ಕಾರಿ ಹುದ್ದೆಗಳಲ್ಲಿ ಉದ್ಯೋಗ ಭದ್ರತೆ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.

ಅದಕ್ಕಾಗಿಯೇ ಜನ ಜಾಸ್ತಿ ಸಂಬಳ ಬರದಿದ್ದರೂ ಜಾಬ್ ಸೆಕ್ಯೂರಿಟಿಗಾಗಿ ಸರ್ಕಾರಿ ಹುದ್ದೆಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲೂ ಸರ್ಕಾರಿ ಹುದ್ದೆಗಳಿಗೆ ಬೇಡಿಕೆ ಇದೆ. ಹಾಗಾದರೆ ಯಾವೆಲ್ಲ ಹುದ್ದೆಗಳಲ್ಲಿ ಲಕ್ಷಗಳ ಪ್ಯಾಕೇಜ್ ಸಿಗುತ್ತೆ ಅನ್ನೋದರ ಬಗ್ಗೆ ಇವತ್ತು ಇಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ; ಜನಾರ್ಧನ್ ರೆಡ್ಡಿಗೆ ಮತ್ತೊಂದು ಸಂಕಷ್ಟ; ಸಾವಿರಾರು ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಆದೇಶ

1. ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕ ಹುದ್ದೆಗಳು:
ಅತೀ ಹೆಚ್ಚು ಸಂಬಳ ನೀಡುವ ಮತ್ತು ಗೌರವಾನ್ವಿತ ಹುದ್ದೆಗಳ ಪೈಕಿ ಉಪನ್ಯಾಸಕ ಹುದ್ದೆಯು ಒಂದು. ಉಪನ್ಯಾಸಕ ಹುದ್ದೆಗಳಿಗೆ ರೂ.40,000 ದಿಂದ 1,00,000 ದವರೆಗೂ ವೇತನ ನೀಡಲಾಗುತ್ತದೆ.

2. ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆ:
ವಿದೇಶಾಂಕ ಸಚಿವಾಲಯದ ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ಎಎಸ್‌ಒ) ಹುದ್ದೆ ಪಡೆಯಬೇಕಾದರೆ ಸಿಬ್ಬಂದಿ ನೇಮಕಾತಿ ಆಯೋಗದ (ಎಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆಗಳಿಗೆ 50.000 ದಿಂದ ರೂ.1,80,000 ದವರೆಗೆ ವೇತನ ನೀಡಲಾಗುತ್ತದೆ.

3. ಸರ್ಕಾರಿ ಬ್ಯಾಂಕ್ ಹುದ್ದೆಗಳು;
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳ ಬಯಸುವ ಅಭ್ಯರ್ಥಿಗಳಿಗೆ ಹುದ್ದೆ ಬೆಸ್ಟ್ ಎಂದೇಳಬಹುದು. ಈ ಹುದ್ದೆಗೆ ಸಾಮಾನ್ಯವಾಗಿ ಮಾಸಿಕ 30,000 ರಿಮದ 1,00,000 ದವರೆಗೆ ವೇತನ ನೀಡಲಾಗುತ್ತದೆ.

4. ಪಿಎಸ್‌ಯು ಜಾಬ್ಸ್ (ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್):
ಪಿಎಸ್‌ಯು ಅಥವಾ ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್ ಜಾಬ್ಸ್ ಗಳಿಗೆ ಇಂಜಿನಿಯರ್ ಪದವೀಧರರು ಅರ್ಜಿ ಸಲ್ಲಿಸಬಹುದು. ಪಿಎಸ್‌ಯು ಹುದ್ದೆಯ ಅಧಿಕಾರಿಗಳಿಗೆ ರೂ.52,000 ಮಾಸಿಕ ಸಂಭಾವನೆ ನೀಡಲಾಗುತ್ತದೆ.

5. ರಕ್ಷಣಾ ಸೇವೆ:
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಕಂಬೈನ್ಡ್ ಡಿಫೆನ್ಸ್ ಸರ್ವೀಸ್, ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ ಸೇರಿದಂತೆ ಇತರೆ ಹಲವು ಪರೀಕ್ಷೆಗಳನ್ನು ರಕ್ಷಣಾ ಸೇವೆಯ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುತ್ತದೆ. ಪ್ರೌಢಶಿಕ್ಷಣ ಮುಗಿಸಿದ ನಂತರ ಅಥವಾ ಪದವಿ ಶಿಕ್ಷಣ ಮುಗಿಸಿದ ನಂತರ ಯಾವಾಗ ಬೇಕಾದರೂ ಈ ಸೇವೆಗೆ ಸೇರಬಹುದು. ರಕ್ಷಣಾ ಇಲಾಖೆಯ ಹುದ್ದೆಗಳಿಗೆ ಆರಂಭಿಕ ವೇತನ ರೂ. 50,000 ರಿಂದ 1,00,000 ದವರೆಗೆ ಇರುತ್ತದೆ.

6. ರೈಲ್ವೆ ಇಂಜಿನಿಯರ್ ಹುದ್ದೆ:
ರೈಲ್ವೆ ಇಂಜಿನಿಯರ್ ಹುದ್ಡೆಗಳಿಗೆ ಮಹತ್ವವಾದ ಹಾಗೂ ಒಳ್ಳೆಯ ಹುದ್ದೆ ಎಂದು ಕರೆಸಿಕೊಂಡಿದ್ದೆ ಇವರಿಗೆ ವಿವಿಧ ಭತ್ಯೆಗಳ ಜೊತೆಗೆ ಮಾಸಿಕ 70,000 ರಿಂದ 1,00,000 ದವರೆಗೆ ಸಂಬಳ ನೀಡಲಾಗುತ್ತದೆ.

7. ಆದಾಯ ತೆರಿಗೆ ಇಲಾಖೆ:
ಈ ಹುದ್ದೆಯಲ್ಲಿ ನಾನಾತರವಾದ ಹುದ್ದೆಗಳು ಅದರಲ್ಲಿ ಆದಾಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಹಾಗೂ ಕಮಿಷನರ್ ವರೆಗೆ ಯಾವ ಹುದ್ದೆಗೆ ಬೇಕಾದರು ಏರಬಹುದು. ಇದರಲ್ಲಿ ವಿವಿಧ ಸೌಲಭ್ಯಗಳು ಸಹ ನೀಡಲಾಗುತ್ತದೆ. ಮಾಸಿಕ ವೇತನ 50,000 ರಿಂದ 1,00,000 ದವರೆಗೆ ನೀಡಲಾಗುತ್ತದೆ.

8. ಸರ್ಕಾರಿ ವೈದ್ಯರು:
ಇನ್ನು ವೈದ್ಯರ ವೇತನ ಹೆಚ್ಚುವರಿಯಾಗಿನೆ ಇರುತ್ತದೆ. ಓರ್ವ ಸರ್ಕಾರಿ ಹಿರಿಯ ಸರ್ಜನ್ ಗೆ 1,00,000 ದಿಂದ 2,00,000 ದವರೆಗೆ ಸಿಗುತ್ತದೆ, ಕಿರಿಯ ವೈದ್ಯರಿಗೆ 50,000 ರಿಂದ 90,000 ದವರೆಗೆ ನೀಡಲಾಗುತ್ತದೆ.

9. ಸರ್ಕಾರಿ ವಿಜ್ಞಾನಿ:
ದೇಶದ ಪ್ರಗತಿಗೆ ಹಾಗೂ ಅದರ ವೈಜ್ಞಾನಿಕ ಅಭಿವೃದ್ದಿಯಲ್ಲಿ ವಿಜ್ಞಾನಿಗಳ ಪಾತ್ರ ಬಹಳ ಮುಖ್ಯ. ಇವರಗೆ ಮಾಸಿಕ ವೇತನ 40,000 ರಿಂದ 1,00,000 ದವರೆಗೆ ನೀಡಲಾಗುತ್ತದೆ. ಹಾಗೂ ಅನುಭವದ ಮೇಲೆ ಮಾಸಿಕ ವೇತನ ಹೆಚ್ಚಿಸಲಾಗುತ್ತದೆ.

ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ

10. ಸರ್ಕಾರಿ ಬ್ಯಾಂಕ್ ಹುದ್ದೆಗಳು:
ಬ್ಯಾಂಕ್ ಹುದ್ದೆಗಳಲ್ಲಿ ನಾನಾತರವದ ಹುದ್ದೆಗಳು ಇರುತ್ತದೆ ಅದರಲ್ಲಿ ಮಾಸಿಕ ವೇತನ 30,000 ರಿಂದ 1,00,000 ದವರೆಗೆ ಸಾಮಾನ್ಯವಾಗಿ ಸಿಗುತ್ತದೆ. ಇನ್ನು ಅನುಭವದ ಮೇಲೆ ಮಾಸಿಕ ವೇತನ ಹೆಚ್ಚಿಸಲಾಗುತ್ತದೆ.

ಮೇಲಿನ ಸರ್ಕಾರಿ ಹುದ್ದೆಗಳಿಗೆ ನೀಡಲಾದ ವೇತನ ಮಾಹಿತಿಯೂ ಆರಂಭಿಕ ವೇತನವಾಗಿದೆ. ಅದೇ ಹುದ್ದೆಗಳಲ್ಲಿ ಮುಂದುವರೆಯುವವರು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಬಳ ಪಡೆಯುತ್ತಾ ಮುಂದುವರೆಯುತ್ತಾರೆ. ಅಲ್ಲದೆ, ಆ ಹುದ್ದೆಯಿಂದ ಮತ್ತೊಂದು ಉನ್ನತ ಹುದ್ದೆಗೆ ಭಡ್ತಿ ಸಹ ಪಡೆಯುತ್ತಾರೆ.

Most Popular

Recent Comments