ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಶ್ರೀ ಜೆಸಿಬಿಎಂ ಕಾಲೇಜಿನ ಲೈಬ್ರರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಮಾ ಪ್ರಶಾಂತ್ ಅವರು ಮಾಸ್ಟರ್ ಆಫ್ ಲೈಬ್ರರಿ & ಇನ್ಫರ್ಮೇಷನ್ ಸೈನ್ಸ್ ನಲ್ಲಿ ಮೊದಲನೇ ರ್ಯಾಂಕ್ ಪಡೆದಿದ್ದಾರೆ.
ದಿನಾಂಕ 02.07.2023ರಂದು ನಡೆದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಪ್ರತಿಮಾ ಅವರಿಗೆ ಗೋಲ್ಡ್ ಮೆಡಲ್’ನ್ನು ನೀಡಿ ಪ್ರಶಂಸಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದು ಸಾರ್ವಜನಿಕರಿಂದ ಅಭಿನಂದನೆ ವ್ಯಕ್ತವಾಗಿದೆ.


ವಿಚಾರಣೆ ನೆಪದಲ್ಲಿ ಮೂಡಿಗೆರೆ ಬಿಜೆಪಿ ಮುಖಂಡನಿಗೆ ಪೊಲೀಸರಿಂದ ದೌರ್ಜನ್ಯ?; ಬೃಹತ್ ಪ್ರತಿಭಟನೆಗೆ ಕರೆ, DySP ಅಮಾನತ್ತಿಗೆ ಆಗ್ರಹ
ಮೂಡಿಗೆರೆ/ಸಕಲೇಶಪುರ: (ನ್ಯೂಸ್ ಮಲ್ನಾಡ್ ವರದಿ) ನಮ್ಮ ಮನೆಯ ಬಳಿ ಜಿಹಾದಿಗಳು ಬಂದ್ರೆ ನಮ್ಮ ಮನೆಯಲ್ಲಿರುವ ಕೋವಿಗಳು ಹೊರಗೆ ಬರುತ್ತವೆ. ಹೀಗೆಂದು ಸಕಲೇಶಪುರದ ಹಿಂದೂಪರ ಸಂಘಟನೆ ಮುಖಂಡ ಹೇಳಿಕೆ ನೀಡಿದ್ದರು ಈ ಪ್ರಕರಣ ದಾಖಲಾಗುತ್ತಿದ್ದಂತೆ ರಘು ಸಕಲೇಶಪುರ ನಾಪತ್ತೆಯಾಗಿದ್ದರು. ಈ ಸಂಬಂಧ ಬಿಜೆಪಿ ಮುಖಂಡ ಅವಿನಾಶ್ ಎಂಬುವವರನ್ನು ವಿಚಾರಣೆ ನೆಪದಲ್ಲಿ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಏನಿದು ಘಟನೆ?
‘ನಮ್ಮ ಮನೆಯ ಬಳಿ ಜಿಹಾದಿಗಳು ಬಂದ್ರೆ ನಮ್ಮ ಮನೆಯಲ್ಲಿರುವ ಕೋವಿಗಳು ಹೊರಗೆ ಬರುತ್ತವೆ’ ಹೀಗೆಂದು ಸಕಲೇಶಪುರದ ಹಿಂದೂಪರ ಸಂಘಟನೆ ಮುಖಂಡ ರಘು ಸಕಲೇಶಪುರ ಹೇಳಿಕೆ ನೀಡಿದ್ದರು. ಜೂನ್ 27ರಂದು ನಡೆದ ಪ್ರತಿಭಟನೆ ಒಂದನ್ನು ಉದ್ದೇಶಿಸಿ ಮಾತನಾಡಿದ ರಘು ’ನಾವು ಗುಂಡನ್ನ ಹಾರಿಸೇ ಹಾರಿಸ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಅವಿನಾಶ್ ಮೇಲೆ ತೀವ್ರ ಹಲ್ಲೆ:
ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ನನ್ನು ಸಕಲೇಶಪುರ ಠಾಣೆಗೆ ಕರೆದೊಯ್ದು ತೀವ್ರ ಹಲ್ಲೆ ನಡೆಸಿ ತಲೆ, ಕಿವಿ ಸೇರಿದಂತೆ ಕೈಗೆ ತೀವ್ರ ಗಾಯಗಳಾಗಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







Leave a Reply