BPL Card Holders: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಶಾಕ್!

BPL Card Holders:  ಬಡತನ ರೇಖೆಗಿಂತ ಕೆಳಗಿನ ಪಡಿತರ ಕಾರ್ಡ್ ಹೊಂದಿ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿ ಪಡೆಯಲು ಮುಂದಾಗಿದ್ದ ಜನರನ್ನು ಸರ್ಕಾರ ತೆಡೆಹಿಡಿದಿದೆ. ಅರ್ಹತೆ ಇಲ್ಲದಿದ್ದರೂ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿ ಸರ್ಕಾರಿ ಯೋಜನೆಗಳ ಫಲಾನುಭವಿಯಾಗಲು ಹೊರಟಿದ್ದ ನಾಗರಿಕರ ಮೇಲೆ ಆರೋಗ್ಯ ಇಲಾಖೆಯು ಹದ್ದಿನ ಕಣ್ಣಿಟ್ಟಿದೆ. ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯುವ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದ ವರ್ಗ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬಿಪಿಎಲ್ ಕಾರ್ಡ್ ಹೊಂದುವವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ.

ಇದನ್ನೂ ಓದಿ; ಮಲೆನಾಡಿನಲ್ಲಿ ನಾನು ಮತ್ತು ಗುಂಡ ಭಾಗ-2 ಚಿತ್ರ ತಂಡ; ಮಲೆನಾಡಿನ ಜನರ ಗುಣ ಇಡೀ ನಮ್ಮ ಚಿತ್ರತಂಡಕ್ಕೆ ಬಹಳ ಸಂತೋಷವಾಗಿದೆ- ನಿರ್ದೇಶಕ ರಘು ಹಾಸನ್

ಒಟ್ಟು ಆರು ಮಾನದಂಡಗಳನ್ನು ಬಿಪಿಎಲ್ ಕಾರ್ಡ್ ನ ಅಳತೆ ಮಾನದಂಡಗಳಾಗಿರಿಸಿವೆ. ಈ ಮೊದಲು ಬಿಪಿಎಲ್ ಕಾರ್ಡ್ ಪಡೆದಿದ್ದು, ಈಗ ಅಂಥ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದರೆ, ಆ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತದೆ. ಆಹಾರ ಇಲಾಖೆಯು ಈಗಾಗಲೇ ಸರ್ವೇ ನಡೆಸಿ 35 ಸಾವಿರಕ್ಕೂ ಹೆಚ್ಚು ಕಾರ್ಡ್ ಗಳನ್ನು ರದ್ದುಗೊಳಿಸಿ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಶಾಕ್ ನೀಡಿದೆ.

ಇದನ್ನೂ ಓದಿ; ಮಲೆನಾಡಿನಲ್ಲಿ ನಾನು ಮತ್ತು ಗುಂಡ ಭಾಗ-2 ಚಿತ್ರ ತಂಡ; ಮಲೆನಾಡಿನ ಜನರ ಗುಣ ಇಡೀ ನಮ್ಮ ಚಿತ್ರತಂಡಕ್ಕೆ ಬಹಳ ಸಂತೋಷವಾಗಿದೆ- ನಿರ್ದೇಶಕ ರಘು ಹಾಸನ್

ಮರಣ ಹೊಂದಿದ 4.55 ಲಕ್ಷ ಜನರ ಹೆಸರನ್ನು ಕಡಿತಗೊಳಿಸುವ ಮೂಲಕ ಸರ್ಕಾರಕ್ಕೆ 6 ರಿಂದ 7 ಕೋಟಿ ರೂ. ಉಳಿತಾಯವಾಗಿದೆ. ಕೇವಲ ರದ್ದತಿಯ ಕ್ರಮವನ್ನು ಮಾತ್ರ ಕೈಗೊಳ್ಳದೆ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೂಲಕ ಅಕ್ರಮವಾಗಿ ಕಾರ್ಡ್ ಹೊಂದುವವರ ವಿರುದ್ಧದ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈ ಕುರಿತು ಈಗಾಗಲೇ ಒಂದು ಹಂತದ ಸರ್ವೆ ನಡೆದಿದ್ದು 8 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಸಂಗ್ರಹವಾಗಿದೆ. ನಿಯಮ ಉಲ್ಲಂಘಿಸಿದವರಲ್ಲಿ ಬಹುತೇಕರು ಸರ್ಕಾರಿ ಉದ್ಯೋಗಿಗಳು ಮತ್ತು ವೈಟ್ ಬೋರ್ಡ್ ವಾಹನ ಉಳ್ಳವರಾಗಿದ್ದರು. ರಾಜ್ಯದಲ್ಲಿ ನಿಯಮ ಉಲ್ಲಂಘನೆ ಹೆಚ್ಚಾಗಿರುವುದರಿಂದ ಆದಾಯ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆಗೂ ಮಾಹಿತಿ ಸಂಗ್ರಹಿಸಿ ಎಂದು ಆಹಾರ ಇಲಾಖೆ ಮನವಿ ಮಾಡಿದೆ. ಸದ್ಯ ರಾಜ್ಯದಲ್ಲಿ 1.28 ಕೋಟಿ ಮಂದಿ ಬಿಪಿಎಲ್ ಕಾರ್ಡ್ ಬಳಕೆದಾರರಾಗಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು   


BPL Card Holders: ಬಿಪಿಎಲ್ ಕಾರ್ಡ್ ಹೊಂದಲು ಇರುವ ಮಾನದಂಡಗಳೇನು?:
* ವಾರ್ಷಿಕ ಆದಾಯ 1.2 ಲಕ್ಷ ಮೀರಿರಬಾರದು.
* 3 ಹೆಕ್ಟರ್ ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು.
* ವೈಟ್ ಬೋರ್ಡ್ ಹೊಂದಿರುವ ನಾಲ್ಕು ಚಕ್ರ ವಾಹನ ಹೊಂದಿರಬಾರದು.
* ಯಾವುದೇ ಸರ್ಕಾರಿ ನೌಕರಿ ಹೊಂದಿರಬಾರದು.
* ವ್ಯಕ್ತಿ ನಗರದ ನಿವಾಸಿಯಾಗಿದ್ದರೆ, ನಗರ ಭಾಗದಲ್ಲಿ ಮನೆಯ ವಿಸ್ತೀರ್ಣ 1000 ಸ್ಕ್ವೇರ್ ಮೀಟರ್ ಮೀರಬಾರದು.
* ವ್ಯಕ್ತಿಯು ಯಾವುದೇ ವಿಧದಲ್ಲಿ ಆದಾಯ ತೆರಿಗೆ, ಐಟಿ ರಿಟರ್ನ್ಸ್ ಪಾವತಿಸಬಾರದು.

BPL Card Holders:
BPL Card Holders:

ಇದನ್ನೂ ಓದಿ; ಚಿಕ್ಕಮಗಳೂರು: ಯುವಕನಿಗೆ ಕಾರ್ ಡಿಕ್ಕಿ ಹೊಡೆದ ಪ್ರಕರಣಕ್ಕೆ ಟ್ವಿಸ್ಟ್;  ಗೆಳೆಯನನ್ನೇ ಮುಗಿಸೋಕೆ ಫ್ರೆಂಡ್‌ ಸ್ಕೆಚ್

ಹೊಸ ಅರ್ಜಿ ಸಲ್ಲಿಸಲು ಇಲ್ಲ ಅನುಮತಿ:
ಸದ್ಯಕ್ಕೆ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿಲ್ಲ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಸದ್ಯದಲ್ಲೇ ಹೇಳುತ್ತೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಹೆಚ್ ಮುನಿಯಪ್ಪ ತಿಳಿಸಿದ್ದಾರೆ. ಎಪಿಎಲ್ ಹಾಗೂ ಬಿಪಿಎಲ್ ಎರಡು ರೀತಿಯ ರೆಷನ್ ಕಾರ್ಡ್ ಅರ್ಜಿಗಳಿಗೂ ತಡೆಹಿಡಿಯಲಾಗಿದೆ.

ಚಿಕ್ಕಮಗಳೂರಿನಲ್ಲಿ ಬಿತ್ತು 25 ಲಕ್ಷ ದಂಡ

ಡೂರು: ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ಉಚಿತ ಪಡಿತರ ಸೌಲಭ್ಯ ನೀಡುತ್ತಿದೆ. ಆದರೆ ಸುಳ್ಳು ಮಾಹಿತಿ ನೀಡಿ ಅರ್ಹತೆಯಿಲ್ಲದಿದ್ದರೂ ಬಿಪಿಎಲ್ ಪಡಿತರ ಕಾರ್ಡ್ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ತಾಲ್ಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿದೆ.

21-22 ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರ ಕಾರ್ಡುದಾರರು ಎಪಿಎಲ್‌ಗೆ ಬದಲಾಯಿಸಿಕೊಂಡಿದ್ದಾರೆ.

ಪ್ರಸ್ತುತ ತಾಲ್ಲೂಕಿನಲ್ಲಿ ಒಟ್ಟು 67406 ಬಿಪಿಎಲ್, 5433 ಅಂತ್ಯೋದಯ, 7583 ಎಪಿಎಲ್ ಹೀಗೆ ಒಟ್ಟು 80422 ಪಡಿತರ ಕಾರ್ಡುಗಳಿವೆ. ಇತ್ತೀಚೆಗೆ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಜಾರಿಯಾದ ನಂತರ ನಾಲ್ಕು ಸಾವಿರ ಜನರ ಹೆಸರನ್ನು( ಮರಣ ಹೊಂದಿದವರು ಇತ್ಯಾದಿ) ಪಡಿತರ ಕಾರ್ಡಿನಿಂದ ತೆಗೆದುಹಾಕಲಾಗಿದೆ.

ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಇಷ್ಟೆಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಈಗ ಇರುವ ಬಿಪಿಎಲ್ ಕಾರ್ಡುದಾರರಲ್ಲಿ ಬಹಳಷ್ಟು ಜನರ ಬಳಿ ಕಾರಿದೆ. ಜಮೀನಿದೆ.ಮನೆಯಲ್ಲಿ ಟ್ರಾಕ್ಟರ್ ಇಟ್ಟುಕೊಂಡಿದ್ದಾರೆ. ಆ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದಾರೆ. ಅಡಿಕೆ- ತೆಂಗು ತೋಟವಿದೆ.ಕೆಲವರು ನಿವೃತ್ತರಿದ್ದಾರೆ.ನಿವೃತ್ತಿ ವೇತನವೂ ಬರುತ್ತಿದೆ…ಒಂದಿಷ್ಟು ಜನರು ತೆರಿಗೆ ಪಾವತಿದಾರರೂ ಇದ್ದಾರೆ. ಆದರೂ ಅವರಿಗೆ ಬಿಪಿಎಲ್ ಕಾರ್ಡ್ ಇದೆ!

ವಿತರಕರು ಎಷ್ಟು ಪಡಿತರ ಅಗತ್ಯವಿದೆ ಎಂಬ ವಿವರವನ್ನು ಇಲಾಖೆಗೆ ನೀಡುವ ಆಧಾರದ ಮೇಲೆ ಅವರಿಗೆ ಪಡಿತರ ಪೂರೈಕೆಯಾಗುತ್ತದೆ. ಪಡಿತರ ಬಿಡುಗಡೆಗೆ ಒಂದಿಷ್ಟು ಹಣವನ್ನೂ ಖರ್ಚುಮಾಡಬೇಕಿದೆ ಎಂದು ಹೆಸರು ಹೇಳಲಿಚ್ಚಿಸದ ಪಡಿತರ ವಿತರಕರೊಬ್ಬರು ಹೇಳುತ್ತಾರೆ. ಇನ್ನು ವರ್ಷಕೊಮ್ಮೆ ಪಡಿತರ ಅಂಗಡಿಯವರು ತಮ್ಮ ತೂಕದ ಯಂತ್ರಕ್ಕೆ ಪ್ರಮಾಣಿತ ಸೀಲ್ ಹಾಕಿಸಿಕೊಳ್ಳುವುದು ಕಡ್ಡಾಯ. ಅದಕ್ಕಾಗಿ ಸರ್ಕಾರ ಶುಲ್ಕ ನಿಗಧಿ ಮಾಡಿದೆ. ಆದರೆ ಇದಕ್ಕೆಂದೇ ₹1500 ನೀಡಬೇಕಿದೆ. ಹಣ ಕೊಟ್ಟರೇ ತೂಕದ ಯಂತ್ರಕ್ಕೆ ಸೀಲ್ ಬೀಳುವುದು! ಇದು ಇಲ್ಲಿನ ಪರಿಸ್ಥಿತಿ.

ಸರ್ಕಾರಿ ಮಾನದಂಡದ ಅನ್ವಯ ತಾಲ್ಲೂಕಿನಾದ್ಯಂತ ತಪ್ಪು ಮಾಹಿತಿ ನೀಡಿದವರಿಂದ ಒಟ್ಟು ₹25 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಒಂದು ಕೆ.ಜಿ.ಪಡಿತರಕ್ಕೆ ₹22ರಂತೆ ದಂಡ ವಸೂಲು ಮಾಡಲಾಗಿದೆ.