BC Welfare Scholarship: ಈ ಸ್ಕಾಲರ್ಶಿಪ್‌ ಗೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ

(BC Welfare Scholarship:) 2024–25ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್‌ಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.


ನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ


ಪ್ರವರ್ಗ–1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಅರ್ಹ ಅಭ್ಯರ್ಥಿಗಳು ಜನವರಿ 20ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಯೋಜನೆಯು ಉನ್ನತ ಶಿಕ್ಷಣದಲ್ಲಿ ಸಂಶೋಧನೆ ನಡೆಸುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ಒದಗಿಸುವ ಉದ್ದೇಶ ಹೊಂದಿದೆ. ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಮತ್ತು ಸಂಬಂಧಿತ ಹಿಂದುಳಿದ ವರ್ಗದ ಪ್ರವರ್ಗಕ್ಕೆ ಸೇರಿರಬೇಕು.

ಅರ್ಹತೆ ಮತ್ತು ಶೈಕ್ಷಣಿಕ ಮಾನದಂಡಗಳು:
* ಅರ್ಜಿದಾರರು ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನಕ್ಕೆ ನೋಂದಾಯಿಸಿಕೊಂಡಿರಬೇಕು.
* ಪ್ರಥಮ ವರ್ಷದ ಅಧ್ಯಯನದಲ್ಲಿಯೇ ತೊಡಗಿರುವುದು ಕಡ್ಡಾಯ.
* ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಹೊಂದಿರಬೇಕು.
* ಪ್ರವರ್ಗ–1 ಅಭ್ಯರ್ಥಿಗಳಿಗೆ ವಾರ್ಷಿಕ ರೂ.4.50 ಲಕ್ಷ, ಪ್ರವರ್ಗ 2(ಎ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ವಾರ್ಷಿಕ ರೂ.3.50 ಲಕ್ಷ.


ನ್ನೂ ಓದಿ: ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ


ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://bcwd.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು.

ತಾಂತ್ರಿಕ ಸಹಾಯ ಅಥವಾ ಹೆಚ್ಚಿನ ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ 8050770004 ಅನ್ನು ಸಂಪರ್ಕಿಸಲು ಅವಕಾಶ ಇದೆ.

BC Welfare Scholarship: ಈ ಸ್ಕಾಲರ್ಶಿಪ್‌ ಗೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ
BC Welfare Scholarship: ಈ ಸ್ಕಾಲರ್ಶಿಪ್‌ ಗೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (BC Welfare Scholarship:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
  6. ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
  7. ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್‌ ರದ್ದು; ನಿಮ್ಮ ತಾಲೂಕಿನ ರೇಷನ್‌ ಕಾರ್ಡ್ ಡಿಲೀಟ್‌ ಆದ ಡಿಟೈಲ್ಸ್‌ ಇಲ್ಲಿದೆ
  8. ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್