Raita Vidya Nidhi: ಕರ್ನಾಟಕ ರಾಜ್ಯ ಸರ್ಕಾರವು ರೈತ ಕುಟುಂಬಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಾರಿಗೆ ತಂದ ಮಹತ್ವದ ಯೋಜನೆಯಲ್ಲಿ ಈ ರೈತ ವಿದ್ಯಾನಿಧಿ ಯೋಜನೆ ಅಗ್ರಸ್ಥಾನದಲ್ಲಿದೆ. ರೈತರ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣಕ್ಕೆ ಅಡಚಣೆ ಆಗಬಾರದು ಎಂಬ ದೃಷ್ಠಿಕೋನದಿಂದ ಈ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಪ್ರಸ್ತುತ, 2025-2026 ನೇ ಸಾಲಿನಲ್ಲಿ ಓದುತ್ತಿರುವಂತ ವಿದ್ಯಾರ್ಥಿಗಳು ಈ ವೇತನ ಪಡೆಯಲು ಅವಕಾಶವಿದೆ.
ರೈತ ವಿದ್ಯಾನಿಧಿ ಯೋಜನೆಯ ಸಂಭಂದಿತ ಸಂಪೂರ್ಣ ಮಾಹಿತಿಯನ್ನ ನೀಡಲಾಗಿದೆ. ಈ ಯೋಜನೆಯು ಆರಂಭದಲ್ಲಿ ಕೇವಲ ಜಮೀನು ಉಳ್ಳಂತಹ ರೈತ ಕುಟುಂಬಗಳಿಗೆ ಮಾತ್ರ ನೀಡಲಾಗಿತ್ತು, ಆದರೆ ಕರ್ನಾಟಕ ಸರ್ಕಾರ ನಿರ್ಧಾರದಂತೆ ಈ ಯೋಜನೆಯನ್ನ ವಿಸ್ತರಿಸಲಾಗಿದೆ. ರೈತ ಮಕ್ಕಳಿಗೆ ಮಾತ್ರವಲ್ಲದೆ, ಕೃಷಿಯಲ್ಲಿ ತೊಡಗಿಕೊಂಡ ಅನೇಕ ಶ್ರಮಿಕರ ಮಕ್ಕಳು ಈ ಯೋಜನೆಯ ಲಾಭವನ್ನ ಪಡೆಯಬಹುದು. ಈ ಯೋಜನೆಯ ವಿಸ್ತರಣೆಯಿಂದಾಗಿ ಬಡ ಕುಟುಂಬ ಮಕ್ಕಳು ಪದವಿ ಮತ್ತು ಸ್ನಾನಕೋತ್ತರ ಶಿಕ್ಷಣ ಪಡೆಯಲು ಅನುಕೂಲಕರವಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ
ಯಾವ ವರ್ಗದ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರು:
* ಸ್ವಂತ ಭೂಮಿಯನ್ನ ಹೊಂದಿದ ರೈತ ಕುಟುಂಬ ಮಕ್ಕಳು
* ಕೃಷಿ ಕಾರ್ಮಿಕರ ಮಕ್ಕಳು
* ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳು
* ನೇಕಾರರ ಮಕ್ಕಳು
* ಮೀನುಗಾರರ ಕುಟುಂಬದ ಮಕ್ಕಳು
ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆಗಳು:
* ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
* ವಿದ್ಯಾರ್ಥಿಯ ತಂದೆ ಅಥವಾ ತಾಯಿಯು ಕೃಷಿ ಭೂಮಿಯನ್ನ ಹೊಂದಿರಬೇಕು
* ಕೃಷಿ ಕಾರ್ಮಿಕರ ಮಕ್ಕಳಾಗಿದ್ದದೆ, 2.50 ಲಕ್ಷ ಮಿತಿಯೊಳಗೆ ವಾರ್ಷಿಕ ಆದಾಯ ಪೋಷಕರು ಹೊಂದಿರಬೇಕು
* ಮಾನ್ಯತೆ ಪಡೆದ ಯಾವುದೇ ಕೋರ್ಸ್ ಅಂದರೆ ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ವೈದ್ಯಕೀಯ ಅಥವಾ ಇಂಜಿನಿಯರಿಂಗ್ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು
* ಕೇವಲ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಉಪಯೋಗ ಲಭ್ಯವಿದೆ.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ
ಎಷ್ಟು ಸ್ಕಾಲರ್‌ಶಿಪ್ ಸಿಗುತ್ತದೆ:
* 8-10 ನೆ ತರಗತಿ ಹೆಣ್ಣು ಮಕ್ಕಳಿಗೆ 2,000
* ಪಿಯುಸಿ,ಡಿಪ್ಲೋಮಾ ವ್ಯಾಸಂಗ ಗಂಡುಮಕ್ಕಳಿಗೆ 2,500 ಹಾಗು ಹೆಣ್ಣು ಮಕ್ಕಳಿಗೆ 3,000
* ಪದವಿ ಕೋರ್ಸ್ ಬಿಎ, ಬಿಕಾಂ, ಬಿಎಸ್ಸಿ ಗಂಡುವಕ್ಕಳಿಗೆ 5,000 ಹಾಗು ಹೆಣ್ಣು ಮಕ್ಕಳಿಗೆ 5500
* ವೃತ್ತಿಪರ ಕೋರ್ಸ್ ವೈದ್ಯಕೀಯ, ಅರೆವೈದ್ಯಕೀಯ, ನರ್ಸಿಂಗ್ ವ್ಯಾಸಂಗ ಮಾಡುವ ಗಂಡು ಮಕ್ಕಳಿಗೆ 7,500 ಹಾಗು ಹೆಣ್ಣು ಮಕ್ಕಳಿಗೆ 8000ಎಂಬಿಬಿಎಸ್, ಬಿಇ, ಬಿಟೆಕ್
* ಎಂಬಿಬಿಎಸ್, ಬಿಇ, ಬಿಟೆಕ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಗಂಡು ಮಕ್ಕಳಿಗೆ 10,000 ಹಾಗು ಹೆಣ್ಣು ಮಕ್ಕಳಿಗೆ 11,000

ಬೇಕಾಗುವ ದಾಖಲೆಗಳು ಯಾವುದು:
* ವಿದ್ಯಾರ್ಥಿ ಮತ್ತು ತಂದೆ ತಾಯಿ ಆಧಾರ್ ಕಾರ್ಡ್
* ವಿದ್ಯಾರ್ಥಿಯ ನೋಂದಣಿ ಸಂಖ್ಯೆ
* ರೈತ ಗುರುತಿನ ಸಂಖ್ಯೆ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಚಾಲ್ತಿಯಲ್ಲಿರಬೇಕು)
* ಆರ್‌ಟಿಸಿ ದಾಖಲೆ
* ಬ್ಯಾಂಕ್ ಖಾತೆಯ ವಿವರ
* ಕಾಲೇಜು ಪ್ರವೇಶಾತಿ ಶುಲ್ಕ ರಶೀದಿ
ರೈತ ವಿದ್ಯಾನಿಧಿ ಯೋಜನೆಯ ಅರ್ಜಿ ಸಲ್ಲಿಕೆಯ ವಿಧಾನ:
* ಅಧಿಕೃತ ವೆಬ್‌ಸೈಟ್ ssp.postmatric.karnataka.gov.in ಗೆ ಭೇಟಿ ನೀಡಿ.
* ಖಾತೆ ಹೊಂದಿದ್ದರೆ ಲಾಗಿನ್ ಮಾಡಬೇಕು
* ಶೈಕ್ಷಣಿಕ ವಿವರಗಳ ಭರ್ತಿ ವೇಳೆ ಪೋಷಕರ ಉದ್ಯೋಗ ವಿಭಾಗದಲ್ಲಿ ರೈತ ಎಂದು ಹಾಕಿ
* ಪೋಷಕರ ರೈತ ಸಂಖ್ಯೆಯನ್ನ ನಮೂದಿಸಿ
* ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿರುವಿರಾ ಎಂದು ಪರಿಶೀಲಿಸಿ ಸಬ್‌ಮಿಟ್ ಬಟನ್ ಒತ್ತಿದರೆ ಅರ್ಜಿ ಸಲ್ಲಿಕೆ ಯಶಸ್ವಿಯಾಗುತ್ತದೆ.
Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Raita Vidya Nidhi)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ
- ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ





