(Ration Card CKM:) ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 ಅನರ್ಹ ಬಿಪಿಎಲ್ ಪಡಿತರ ಚೀಟಿದಾರರನ್ನು ಪಟ್ಟಿ ಮಾಡಿದ್ದು, ಒಟ್ಟು 5,865 ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರಚೀಟಿಗಳನ್ನಾಗಿ ಪರಿವರ್ತಿಸಲಾಗಿದೆ.
ಇದನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
ಅಜ್ಜಂಪುರದಲ್ಲಿ 322 ಅನರ್ಹ ಬಿಪಿಎಲ್ ಪಡಿತರ ಚೀಟಿ ಪತ್ತೆಯಾಗಿದ್ದರೆ, ಚಿಕ್ಕಮಗಳೂರು ತಾಲೂಕಿನಲ್ಲಿ 1,607, ಕಡೂರು 1,672, ಕೊಪ್ಪ 302, ಮೂಡಿಗೆರೆ 1,116, ನರಸಿಂಹರಾಜಪುರ 214, ಶೃಂಗೇರಿ 224, ತರೀಕೆರೆ ತಾಲೂಕಿನಲ್ಲಿ 408 ಅನರ್ಹ ಬಿಪಿಎಲ್ ಕಾರ್ಡುಗಳು ಪತ್ತೆಯಾಗಿವೆ.
ಪಡಿತರ ಚೀಟಿದಾರರಿಗೆ ನೋಟಿಸ್ ಜಾರಿ:
ಬಿಪಿಎಲ್ ಕಾರ್ಡಿಗೆ 1.20 ಲಕ್ಷ ರೂ. ಆದಾಯ ಮಾನದಂಡವಾಗಿದೆ. ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವ ವಿವಿಧ ಕಾರಣಗಳಿಗಾಗಿ ಆದಾಯ ತೆರಿಗೆ ಪಟ್ಟಿಗೆ ಸೇರಿರುವ 12,991 ಪಡಿತರ ಚೀಟಿದಾರರಿಗೆ ನೋಟಿಸ್ ಜಾರಿಗೊಳಿಸಿದ್ದು, ಅವರು ನೋಟಿಸ್ ಕೈಸೇರಿದ 45 ದಿನದೊಳಗೆ ಸಮಜಾಯಿಸಿ ನೀಡಿ ಬಿಪಿಎಲ್ ಕಾರ್ಡನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಎಷ್ಟು ಪಡಿತರ ಚೀಟಿದಾರರಿಗೆ ನೋಟಿಸ್ ಜಾರಿ:
ಅಜ್ಜಂಪುರ ತಾಲೂಕಿನಲ್ಲಿ 758 ಕಾರ್ಡ್ದಾರರು, ಚಿಕ್ಕಮಗಳೂರು 4,219, ಕಡೂರು 3,308, ಕೊಪ್ಪ 883, ಮೂಡಿಗೆರೆ 1,395, ನರಸಿಂಹರಾಜಪುರ 673, ಶೃಂಗೇರಿ 356 ಮತ್ತು ತರೀಕೆರೆ ತಾಲೂಕಿನಲ್ಲಿ 1,399 ಅನರ್ಹ ಬಿಪಿಎಲ್ ಕಾರ್ಡುದಾರರಿಗೆ ನೋಟಿಸನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾರಿಗೊಳಿಸಿದೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಅನರ್ಹರ ಪಟ್ಟಿಗೆ ಇಷ್ಟು ಪಡಿತರ ಚೀಟಿ:
ಬಿಪಿಎಲ್ ಕಾರ್ಡಿಗೆ ನಿಗದಿಪಡಿಸಿದ ಆದಾಯಕ್ಕಿಂತ 1,171 ಕಾರ್ಡುದಾರರು ಹೆಚ್ಚಿನ ಆದಾಯ ಹೊಂದಿದ್ದಾರೆ. ಅಜ್ಜಂಪುರ ತಾಲೂಕಿನಲ್ಲಿ 664, ಚಿಕ್ಕಮಗಳೂರು 3,947, ಕಡೂರು 2,985, ಕೊಪ್ಪ 786, ಮೂಡಿಗೆರೆ 1,119, ನರಸಿಂಹರಾಜಪುರ 786, ಶೃಂಗೇರಿ ತಾಲೂಕಿನಲ್ಲಿ 326, ತರೀಕೆರೆ 1,283 ಕಾರ್ಡ್ದಾರರು ಹೆಚ್ಚಿನ ಆದಾಯ ಹೊಂದಿದ್ದಾರೆಂದು ಗುರುತಿಸಿ ಅನರ್ಹರೆಂದು ಪರಿಗಣಿಸಲಾಗಿದೆ.
ಕೇಂದ್ರ ಸರಕಾರ ಈಗಾಗಲೇ ನೀಡಿರುವ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುವಂತೆ ಸೂಚನೆ ನೀಡಿದ್ದು, ಅದರಂತೆ ರಾಜ್ಯ ಸರಕಾರ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಮತ್ತು ಆದಾಯ ತೆರಿಗೆ ಪಾವತಿಸಿರುವ ಕುಟುಂಬಗಳು ಮತ್ತು ನಾಲ್ಕು ಚಕ್ರಗಳ ವಾಹನ ಹೊಂದಿರುವ ಕುಟುಂಬಗಳನ್ನು ಬಿಪಿಎಲ್ ಕಾರ್ಡಿನಿಂದ ಕೈಬಿಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು ಕೆಲ ತಿಂಗಳುಗಳಿಂದ ಪರಿಶೀಲನೆ ನಡೆಸಿದಾಗ 5,865 ಅನರ್ಹ ಬಿಪಿಎಲ್ ಪಡಿತರಚೀಟಿಗಳನ್ನು ಪತ್ತೆ ಹಚ್ಚುವ ಮೂಲಕ ಅವರನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ.
Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Ration Card CKM:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ರೇಷ್ಮೆ ಇಲಾಖೆಯಲ್ಲಿ ಸಿಗಲಿದೆ ಈ ಸಹಾಯಧನ: ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
- ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
- ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ





