(Aadhaar) ಇತ್ತೀಚಿನ ದಿನಗಳಲ್ಲಿ ಆಧಾರ್ ನಂಬರ್ ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಆಧಾರ್ ಅನ್ನು 16 ಅಂಕೆಗಳ ಡಿಜಿಟಲ್ ವರ್ಚುವಲ್ ಐಡಿ (VID) ಬಳಸಿಕೊಂಡು ಸಂರಕ್ಷಿಸಲು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಲಾಕ್ ಹಾಗೂ ಅನ್ ಲಾಕ್ ಫೀಚರ್ ಪರಿಚಯಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?; ಅಡಿಕೆ ಮಾರುಕಟ್ಟೆ ಹೇಗಿದೆ| ಬೆಟ್ಟೆ, ಗೊರಬಲು, ಸರಕು, ಈಡಿ
ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳುವಾಗಿದ್ದರೆ ನೀವು UIDAI ವೆಬ್ ಸೈಟ್ ಅಥವಾ SMS ಮೂಲಕ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಬಹುದು. ಕೆಲವು ವರದಿ ಪ್ರಕಾರ ಕಳೆದು ಹೋಗಿರುವ ನಿಮ್ಮ ಆಧಾರ್ ಕಾರ್ಡ್ ಸಿಕ್ಕಿದ ಬಳಿಕ ಅಥವಾ ಬದಲಿ ಕಾರ್ಡ್ ಪಡೆದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿಕೊಂಡು ಅಥವಾ UIDAI ವೆಬ್ ಸೈಟ್ ಮುಖಾಂತರ ಲಾಕ್ ಅನ್ನು ತೆಗೆಯಬಹುದು. ಇನ್ನು ನಿಮ್ಮ ಆಧಾರ್ ಲಾಕ್ ಆಗಿರುವಾಗ ಅದನ್ನು ಯಾರು ಕೂಡ ಯಾವುದೇ ವಿಧದ ದೃಢೀಕರಣ ಪ್ರಕ್ರಿಯೆಗೆ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಆಧಾರ್ ಲಾಕ್ ಅಥವಾ ಅನ್ ಲಾಕ್ ಮಾಡುವುದು ಹೇಗೆ? ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಇದನ್ನೂ ಓದಿ: ಮಳೆ ಹಾನಿ; ಗ್ರಾಹಕರ ಸಮಸ್ಯೆ ಪರಿಹಾರಕ್ಕೆ 8 ಜಿಲ್ಲೆಗೆ ವಾಟ್ಸಪ್ ಸಂಖ್ಯೆ; ಜಿಲ್ಲಾವಾರು ನಂಬರ್ ಇಲ್ಲಿದೆ
(Aadhaar) ಆಧಾರ್ ಲಾಕ್ ಅಥವಾ ಅನ್ ಲಾಕ್ ಮಾಡುವುದು ಹೇಗೆ?:
1. ವರ್ಚುವಲ್ ಐಡಿ (VID) ಸೃಷ್ಟಿಸಿ:
ನಿಮ್ಮ ಆಧಾರ್ ಅನ್ನು ಲಾಕ್ ಮಾಡಲು 16 ಅಂಕೆಗಳ ವರ್ಚುವಲ್ ಐಡಿ (VID) ಅಗತ್ಯ. ನೀವು UIDAI ವೆಬ್ಸೈಟ್ http://www.myaadhaar.uidai.gov.in ಭೇಟಿ ನೀಡಿ ಅಲ್ಲಿ “Generate Virtual ID” ಬಳಸಿಕೊಂಡು ವರ್ಚುವಲ್ ಐಡಿ ಸೃಷ್ಟಿಸಬಹುದು. ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸುವ ಮೂಲಕ ಕೂಡ ಕೂಡ ವರ್ಚುವಲ್ ಐಡಿ ಸೃಷ್ಟಿಸಬಹುದು. SMS ಮೂಲಕ ವರ್ಚುವಲ್ ಐಡಿ ಸೃಷ್ಟಿಸಲು ‘GVID (ಯುಐಡಿಯ ಕೊನೆಯ ನಾಲ್ಕು ಅಥವಾ ಎಂಟು ಅಂಕೆಗಳು) ಅನ್ನು 1947ಕ್ಕೆ ಕಳುಹಿಸಿ. ಉದಾಹರಣೆಗೆ “GVID 1234”.
2.VID ಬಳಸಿಕೊಂಡು ಆಧಾರ್ ಲಾಕ್:
ಒಮ್ಮೆ ನಿಮಗೆ VID ಸಿಕ್ಕ ಬಳಿಕ UIDAI ವೆಬ್ ಸೈಟ್ ಅಥವಾ mAadhaar app ಬಳಸಿಕೊಂಡು ನಿಮ್ಮ ಆಧಾರ್ ಲಾಕ್ ಮಾಡಿ. ಈ ರೀತಿ ಒಮ್ಮೆ ಲಾಕ್ ಮಾಡಿದ ಬಳಿಕ ನಿಮ್ಮ ಆಧಾರ್ ಸಂಖ್ಯೆ, ಬಯೋಮೆಟ್ರಿಕ್, ಡೆಮೋಗ್ರಾಫಿಕ್ ಅಥವಾ ಒಟಿಪಿ ಮೋಡ್ ಬಳಸಿಕೊಂಡು ದೃಢೀಕರಣ ಮಾಡಲು ಸಾಧ್ಯವಾಗೋದಿಲ್ಲ.
ಇದನ್ನೂ ಓದಿ: ಬರ ಪರಿಹಾರ; 16 ಲಕ್ಷ ರೈತರಿಗೆ ತಲಾ 3,000 ರೂ ಜಮೆ; ಯಾರಿಗೆ ಇಲ್ಲಿದೆ ನೋಡಿ ಡಿಟೈಲ್ಸ್
ಆಧಾರ್ ಅನ್ ಲಾಕ್ ಮಾಡೋದು ಹೇಗೆ?:
1.VID ಹಿಂಪಡೆಯೋದು:
ಒಂದು ವೇಳೆ ನಿಮಗೆ ಆಧಾರ್ ಅನ್ ಲಾಕ್ ಮಾಡಬೇಕಾಗಿದ್ದು, VID ಮರೆತು ಹೋಗಿದ್ದರೆ ‘RVID (UIDAI ಯ ಕೊನೆಯ 4 ಅಥವಾ 8 ಅಂಕೆಗಳು)’ ಅನ್ನು 1947ಕ್ಕೆ ಕಳುಹಿಸಿ. ಉದಾಹರಣೆಗೆ RVID 1234 ಎಂದು 1947ಕ್ಕೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ SMS ಮಾಡಿ. ಇದಾದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 16 ಅಂಕೆಗಳ VID SMS ಮೂಲಕ ಬರುತ್ತದೆ.
ಇದನ್ನೂ ಓದಿ: ಕಾಫಿ ಮಂಡಳಿಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
2.VID ಮೂಲಕ ಆಧಾರ್ ಅನ್ ಲಾಕ್:
ಒಮ್ಮೆ ನಿಮಗೆ VID ಸಿಕ್ಕ ಬಳಿಕ UIDAI ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ mAadhaar app ಮೂಲಕ ಆಧಾರ್ ಅನ್ನು ಅನ್ ಲಾಕ್ ಮಾಡಿ. ಹೀಗೆ ಅನ್ ಲಾಕ್ ಮಾಡಿದ ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ದೃಢೀಕರಣ ಉದ್ದೇಶಗಳಿಗೆ ಬಳಸಬಹುದು.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್
- ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ







Leave a Reply