ಚುನಾವಣೆ ವೇಳೆ ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೂ ಮತ ಹಾಕಲು ಅನುಕೂಲ ಆಗುವ ರೀತಿಯಲ್ಲಿ ಚುನಾವಣಾ ಆಯೋಗ ಹಲವು ಆಯ್ಕೆಗಳನ್ನ ಕೊಟ್ಟಿದೆ.
ಇದನ್ನೂ ಓದಿ; ಕೊಪ್ಪ ಮೂಲದ ಚಲನಚಿತ್ರ ನಟ ಸಂಪತ್ ಜಯರಾಮ್ ಸುಸೈಡ್
ಎಲೆಕ್ಷನ್ ಹತ್ತಿರ ಬರ್ತಿದೆ. ಚುನಾವಣೆ ವೇಳೆ ಮತದಾನ ಮಾಡೋದು ನಮ್ಮ ಹಕ್ಕು ಮಾತ್ರ ಅಲ್ಲ, ಕರ್ತವ್ಯ ಕೂಡಾ.. ಮತ ಹಾಕಬೇಕು ಅಂದ್ರೆ ವೋಟರ್ ಐಡಿ ಕಾರ್ಡ್ ಇರಬೇಕು. ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು. ಒಂದು ವೇಳೆ ವೋಟರ್ ಐಡಿ ಕಾರ್ಡ್ ನಿಮ್ಮ ಬಳಿ ಇಲ್ಲ ಅಂದ್ರೆ ಏನು ಮಾಡಬೇಕು? ವೋಟರ್ ಐಡಿ ಕಾರ್ಡ್ ಕಳೆದು ಹೋಗಿದ್ರೆ ಮತ ಹಾಕೋದು ಹೇಗೆ? ಮತದಾರರ ಗುರುತಿನ ಚೀಟಿ ಇಲ್ಲದೆಯೂ ವೋಟ್ ಹಾಕಬಹುದಾ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ; ಹೊಸದಾಗಿ ಓಟರ್ ಐಡಿಗೆ Apply ಮಾಡೋದು ಹೇಗೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ವಾ ಈ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ
ವೋಟರ್ ಐಡಿ ಕಾರ್ಡ್ ಇಲ್ಲದೆ ಮತ ಚಲಾಯಿಸೋದು ಹೇಗೆ?
ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇಲ್ಲ ಅಂತಾದರೆ, ನೀವು ಇನ್ನಿತರೆ 11 ದಾಖಲಾತಿಗಳನ್ನು ಬಳಸಿಕೊಂಡು ಮತದಾನ ಮಾಡಬಹುದು.
* ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ತೋರಿಸಿ ವೋಟ್ ಹಾಕಬಹುದು.
* ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ತಮ್ಮ ಐಡಿ ಕಾರ್ಡ್ ತೋರಿಸಿ ಮತ ಹಾಕಬಹುದು.
* ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್‌ಗಳಲ್ಲಿ ಕೊಡುವ ಫೋಟೋ ಸಹಿತ ಪಾಸ್ ಬುಕ್ ಕೂಡಾ ಮತ ಹಾಕಲು ಬಳಸಬಹುದು.
* ಪಾನ್ ಕಾರ್ಡ್ ತೋರಿಸಿ ವೋಟ್ ಹಾಕಬಹುದು.
* ಎನ್‌ಪಿಆರ್ ಅಡಿ ವಿತರಣೆ ಮಾಡಲಾಗುವ ಸ್ಮಾರ್ಟ್ ಕಾರ್ಡ್ ಹಾಗೂ ನರೇಗಾ ಜಾಬ್ ಕಾರ್ಡ್ ಮೂಲಕವೂ ಮತ ಹಾಕಬಹುದು.
* ಕಾರ್ಮಿಕ ಇಲಾಖೆ ನೀಡುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ಮೂಲಕವೂ ಮತ ಹಾಕಬಹುದು.
* ಫೋಟೋ ಸಹಿತ ಪಿಂಚಣಿ ದಾಖಲಾತಿಯನ್ನೂ ಮತದಾನಕ್ಕೆ ಬಳಸಬಹುದು.
* ಆಧಾರ್ ಕಾರ್ಡ್ ಕೂಡಾ ಮತದಾನಕ್ಕೆ ಬಳಕೆ ಮಾಡಿಕೊಳ್ಳಬಹುದು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹಿಂದೂ ಯುವಕನ ಬರ್ಬರ ಹತ್ಯೆ; ನಾಲ್ವರು ಹಂತಕರು ಅಂದರ್
- ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಸಾವು
- ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಪ್ರಾಣಾಪಾಯದಿಂದ ಪಾರು
ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಲೇ ಬೇಕು!
ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇಲ್ಲ ಅಂದ್ರೂ ಪರವಾಗಿಲ್ಲ, ಆದ್ರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲೇಬೇಕು. ಎಲೆಕ್ಷನ್ ಬೂತ್‌ನಲ್ಲಿ ಮತದಾರರ ಪಟ್ಟಿ ಇರುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಮತ ಹಾಕಲು ಬಿಡುತ್ತಾರೆ. ಮತದಾರರ ಪಟ್ಟಿಯಲ್ಲಿ ಇರುವ ನಿಮ್ಮ ಹೆಸರು ಹಾಗೂ ನಿಮ್ಮ ಫೋಟೋಗಳು ವೋಟರ್ ಐಡಿ ಕಾರ್ಡ್ ನಲ್ಲಿ ಇರೋ ದಾಖಲೆಗಳಿಗೆ ಹೋಲಿಕೆ ಆಗಬೇಕು.
ಇದನ್ನೂ ಓದಿ; ಈ ಬಾರಿ ಕಾಂಗ್ರೆಸ್ 141 ಸ್ಥಾನ ಗೆಲ್ಲಲಿದೆ- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಒಂದು ವೇಳೆ ವೋಟರ್ ಐಡಿ ಕಾರ್ಡ್ ಇಲ್ಲವಾದ್ರೆ, ನಿಮ್ಮ ಬಳಿ ಇರುವ ಬೇರೆ ಫೋಟೋ ಸಹಿತ ದಾಖಲಾತಿ ಜೊತೆಗೆ ವೋಟರ್ ಲಿಸ್ಟ್ ನಲ್ಲಿ ಮಾಹಿತಿ ಹೋಲಿಕೆ ಆಗಬೇಕು. ಇಲ್ಲವಾದ್ರೆ ನಿಮಗೆ ಮತದಾನಕ್ಕೆ ಅವಕಾಶ ಸಿಗೋದಿಲ್ಲ. ಚುನಾವಣೆ ವೇಳೆ ನೀವು ಮತ ಹಾಕೋಕೆ ಮುನ್ನ ನಿಮ್ಮ ದಾಖಲಾತಿಗಳನ್ನು ಚುನಾವಣಾ ಅಧಿಕಾರಿಗಳಿಗೆ ಕಡ್ಡಾಯವಾಗಿ ತೋರಿಸಬೇಕು. ಇಲ್ಲವಾದ್ರೆ ಮತ ಹಾಕೋದಕ್ಕೆ ಬಿಡೋದಿಲ್ಲ. ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇದ್ದರೂ ಕೂಡಾ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲವಾದ್ರೆ ಮತದಾನ ಮಾಡೋಕೆ ಅವಕಾಶ ಸಿಗಲ್ಲ.