Udyogini Scheme: ಉದ್ಯಮ ಆರಂಭಿಸಿ ಯಶಸ್ಸು ಕಾಣಬೇಕೆಂದು ಹಂಬಲಿಸುವ ಮಹಿಳೆಯರಿಗಾಗಿ ಸರ್ಕಾರ ಆರಂಭಿಸಿರುವ ಯೋಜನೆಯೇ ‘ಉದ್ಯೋಗಿನಿ ಸ್ಕೀಮ್’ ಈ ಯೋಜನೆಯಡಿ ಮಹಿಳೆಯರು 3 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಪಡೆಯಬಹುದಾಗಿದೆ. ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಈ ಯೋಜನೆಯಡಿ ಬಡ್ಡಿರಹಿತ ಸಾಲ ದೊರೆಯುತ್ತದೆ. ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ.
ಇದನ್ನೂ ಓದಿ; ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶ; 89 ಹುದ್ದೆಗಳಿಗೆ ನೇರ ನೇಮಕಾತಿ
ಉದ್ಯೋಗಿನಿ ಯೋಜನೆ ಎಂದರೇನು?:
ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗಾಗಿ ಸಣ್ಣ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಮುಖ್ಯವಾಗಿ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ಸಣ್ಣ ಉದ್ಯಮ ಆರಂಭಿಸಲು ಬಂಡವಾಳಕ್ಕಾಗಿ ಈ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ.
ಇದನ್ನೂ ಓದಿ; ಬಿಯರ್ ಪ್ರಿಯರಿಗೆ ಬ್ಯಾಡ್ ನ್ಯೂಸ್; ಮತ್ತೆ ಕುಡುಕರ ಜೇಬಿಗೆ ಕೈ ಹಾಕಿದ ಸರ್ಕಾರ
ಉದ್ಯೋಗಿನಿ ಯೋಜನೆ (Udyogini Scheme: ) ಲಕ್ಷಣಗಳೇನು?:
ಉದ್ಯೋಗಿನಿ ಯೋಜನೆಯಡಿ ಸಮಾಜದ ಎಲ್ಲಾ ವರ್ಗಗಳ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ.

ಯಾವೆಲ್ಲಾ ಉದ್ಯಮ ಆರಂಭಿಸಲು ಸಿಗುತ್ತೆ ಸಾಲ?:
ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಬಹುದಾಗಿದೆ. ಇವುಗಳಲ್ಲಿ ಹೊಲಿಗೆ, ಮತ್ಸ್ಯೋದ್ಯಮ, ದಿನಸಿ ಮಾರಾಟ, ಗ್ರಂಥಾಲಯ, ಬೇಕರಿ, ಅಗರಬತ್ತಿ ತಯಾರಿಕೆ, ಡೈರಿ ಹಾಗೂ ಕುಕ್ಕುಟೋದ್ಯಮ ಕೂಡ ಸೇರಿವೆ.
ಇದನ್ನೂ ಓದಿ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಜಿಲ್ಲಾವಾರು ಹುದ್ದೆಗಳ ಮಾಹಿತಿ
ಯಾವೆಲ್ಲಾ ಬ್ಯಾಂಕ್ ಗಳು ಸಾಲ ನೀಡುತ್ತವೆ?:
ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕ್ ಗಳು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುತ್ತಿವೆ. ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಸಾರಸ್ವತ ಬ್ಯಾಂಕ್ ಗಳಲ್ಲಿಯೂ ಸಾಲ ಪಡೆಯಹುದಾಗಿದೆ. ಇವುಗಳು ಮಾತ್ರವಲ್ಲದೆ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳಿಂದಲೂ ಸಾಲ ಪಡೆಯಬಹುದಾಗಿದೆ.
ಸಾಲ ಪಡೆಯಲು ಅರ್ಹತೆಗಳೇನು?:
* ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಸಾಲ ದೊರೆಯುತ್ತದೆ.
* 18 ರಿಂದ 55 ವರ್ಷಷ ವಯಸ್ಸಿನ ಮಹಿಳೆಯರು ಬಡ್ಡಿರಹಿತ ಸಾಲ ಪಡೆಯಲು ಅರ್ಹರಾಗಿದ್ದಾರೆ.
* ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಆದಾಯ 1.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
* ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಾದರೆ ಕುಟುಂಬದವರಿಗೆ ಹೆಚ್ಚಿನ ಆದಾಯವಿದ್ದರೂ ಸಾಲ ನೀಡಲು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ; ಪರಿವರ್ತನೆಗೊಂಡ ಎಸ್ಸಿ-ಎಸ್ಟಿ ಭೂಮಿ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ: ಹೈಕೋರ್ಟ್
ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆ ಬೇಕು?:
* ಆಧಾರ್ ಕಾರ್ಡ್
* ಜನನ ಪ್ರಮಾಣಪತ್ರ
* ಸ್ಥಳೀಯ ಶಾಸಕ ಅಥವಾ ಸಂಸದನ ಲೆಟರ್ ಹೆಡ್ ಇರುವ ಪತ್ರ
* ಬಿಪಿಎಲ್ ಕಾರ್ಡ್ನ ಪ್ರತಿ
* ಜಾತಿ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ
ಇದನ್ನೂ ಓದಿ; ಇಸ್ರೊದಿಂದ ಉದ್ಯೋಗಾವಕಾಶ; 224 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?:
* ಸಂಬಂಧಪಟ್ಟ ಬ್ಯಾಂಕ್ ನ ವೆಬ್ ಸೈಟ್ ನಿಂದ ಉದ್ಯೋಗಿನಿ ಸಾಲದ ಅರ್ಜಿಯ ಪ್ರತಿಯನ್ನು ಡೌನ್ ಲೋಡ್ ಮಾಡಿ.
* ಅರ್ಜಿಯಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
* ಬ್ಯಾಂಕ್ ಕೇಳಿರುವ ಎಲ್ಲಾ ದಾಖಲೆಗಳ ಪ್ರತಿಯನ್ನು ಅರ್ಜಿಯ ಜೊತೆಗೆ ಲಗತ್ತಿಸಿ.
* ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಸಾಲ ಮಂಜೂರಾಗಿರುವ ಬಗ್ಗೆ ವಿಚಾರಿಸಿ.
(ಬ್ಯಾಂಕ್ ಶಾಖೆಗೆ ಭೇಟಿ ನೀಡಿಯೂ (Udyogini Scheme: ) ಅರ್ಜಿ ಸಲ್ಲಿಸಬಹುದಾಗಿದೆ.)
ಪ್ರಮುಖ ಸುದ್ದಿಗಳನ್ನು ಓದಿ
- 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಇಲ್ಲಿದೆ ಪಟ್ಟಿ
- ಹುತಾತ್ಮ ಯೋಧ ಕ್ಯಾ. ಪ್ರಾಂಜಲ್ ಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ
- ವಿದ್ಯುತ್ ಬಿಲ್ ಹೊರೆ ಇಳಿಸಲು ಕೇಂದ್ರದ ಹೊಸ ಯೋಜನೆ ಜಾರಿ; 1 ಕೋಟಿ ಮನೆಗಳ ಮೇಲೆ ಬರಲಿದೆ ಸೋಲಾರ್ ಫಲಕಗಳು;ಯಾರಿಗೆ ಸಿಗಲಿದೆ ಪ್ರಯೋಜನ, ಯಾವ ದಾಖಲೆಗಳು ಬೇಕು?
- ದಕ್ಷ ಪೊಲೀಸ್ ಅಧಿಕಾರಿ ಸುಧೀರ್ ಹೆಗ್ಡೆಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ
- ಲೋಕಸಭೆ ಚುನಾವಣೆ: ಕ್ಷೇತ್ರ ಬದಲಿಸುವ ಪ್ರಶ್ನೆಯೇ ಇಲ್ಲ- ಶೋಭಾ ಕರಂದ್ಲಾಜೆ
- ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ; 10th ಪಾಸಾದವರಿಗೆ ಅರ್ಜಿ ಆಹ್ವಾನ
- hsrp ನಂಬರ್ ಪ್ಲೇಟ್; ನೋಂದಣಿ ಹೇಗೆ? ವೆಬ್ ಸೈಟ್ ಯಾವುದು?; ರಿಜಿಸ್ಟ್ರೇಷನ್ ಪ್ರಕ್ರಿಯೆ ವೇಳೆ ಹುಷಾರು! ಯಾಮಾರಬೇಡಿ!
- ಆಡಳಿತ ತರಬೇತಿ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಆಹ್ವಾನ; ಎಸ್.ಎಸ್.ಎಲ್.ಸಿ, ಪಿಯುಸಿ ಪಾಸಾದವರಿಗೆ ಜಾಬ್
- ಬಿಯರ್ ಪ್ರಿಯರಿಗೆ ಬಿಗ್ ಶಾಕ್; ಮತ್ತೆ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಸಿದ್ಧತೆ
- ರೈತರ ಕೃಷಿ ಸಾಲದ ಬಡ್ಡಿ ಮನ್ನಾ; ಯಾವ ರೈತರ, ಯಾವ ಸಾಲದ ಬಡ್ಡಿ ಮನ್ನಾ?; ಯಾವ ದಿನಾಂಕದಿಂದ ಈ ಆದೇಶ ಒಳಪಡುತ್ತದೆ?
- ರೈತರೇ ಗಮನಿಸಿ; pm kisan ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ
- ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಹೇಗೆ?
- ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ
- ರೈತರು ಅತಿ ಕಡಿಮೆ ಬೆಲೆಗೆ ಮಣ್ಣು ಪರೀಕ್ಷೆ ಹೇಗೆ ಮಾಡಿಸಬಹುದು?; ಮಣ್ಣನ್ನು ಹೇಗೆ ತೆಗೆಯಬೇಕು? ಎಷ್ಟು ಶುಲ್ಕ? ಸಂಪೂರ್ಣ ವಿವರವನ್ನು ಓದಿ
- ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ
- ರೈತರಿಗೆ ಗುಡ್ ನ್ಯೂಸ್; ಶೀಘ್ರವೇ ಕೇಂದ್ರದಿಂದ pm kisan ಮೊತ್ತ ಏರಿಕೆ
- ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490
- ರಾಜ್ಯದ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ; ನಿಮ್ಮ ಖಾತಗೆ ಬಂದಿದ್ಯಾ ಹಣ
- ರಾಜ್ಯದ ರೈತರಿಗೆ ಗುಡ್ ನ್ಯೂಸ್: ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ
- ಪಡಿತರ ಚೀಟಿದಾರರೇ ಗಮನಿಸಿ; ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ, ಏನದು?
- ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು
- ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply